ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಶ್ರೀ ವಾಲ್ಮೀಕಿ ನಾಯಕ ನೌಕರರ ಸಂಘ, ವಾಲ್ಮೀಕಿ ನಾಯಕ ನೌಕರರ ಸಂಘ, ತಾಲೂಕು ವಾಲ್ಮೀಕಿ ನಾಯಕ ಸಮಾಜ ಹಾಗೂ ವಾಲ್ಮೀಕಿ ನಾಯಕ ಮಹಿಳಾ ಸಂಘ ಇವರುಗಳ ಸಹಯೋಗದಲ್ಲಿ 2025 -26ನೇ ಸಾಲಿನ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ಒಂದರಲ್ಲಿ ಅತ್ಯುನ್ನತ ಶ್ರೇಣಿ ಪಡೆದ ವಾಲ್ಮೀಕಿ ನಾಯಕ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ದಾವಣಗೆರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಎಚ್.ಜಿ ವಿಜಯ್ ಕುಮಾರ್ ವಿದ್ಯಾರ್ಥಿಗಳ ಕುರಿತು ಮಾತನಾಡಿದರು.
ಸತತ ಅಧ್ಯಯನ ಮತ್ತು ಪರಿಶ್ರಮದಿಂದ ಪ್ರತಿಫಲ ಸಾಧ್ಯ ಪುಸ್ತಕ ಓದುವ ಹವ್ಯಾಸ ಮಾಡಿಕೊಂಡರೆ ಉತ್ತಮ ಭವಿಷ್ಯ ಹಾಗೂ ಮಕ್ಕಳ ವಿದ್ಯಾಭ್ಯಾಸದಲ್ಲಿ ಪೋಷಕರ ಪಾತ್ರವು ಅತ್ಯಂತ ಪ್ರಮುಖವಾದದ್ದು ಎಂದರು.
ಡಾ.ಮೋಹನ್ ಕುಮಾರ್ ಡಾ. ಹೇಮಣ್ಣ ನಾಯಕ, ವಿದ್ಯಾರ್ಥಿಗಳ ಕುರಿತು ಮಾತನಾಡಿದರು. ಡಿ.ಚಂದ್ರಶೇಖರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿವಮೂರ್ತಿ .ಕೆ ಸ್ವಾಗತಿಸಿದರು ಜೆ .ಲೋಕೇಶ್ ಪ್ರಾಸ್ತಾವಿಕ ವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಿದ್ದೇಶ್, ಶಿವಮೂರ್ತಿ ಎನ್.ಪಿ, ಸುನಂದಮ್ಮ, ದಾಸ ಪ್ರಕಾಶ್ ಇವರುಗಳನ್ನು ಸನ್ಮಾನಿಸಲಾಯಿತು.
ತ್ರಿವೇಣಿ ಕಾರ್ಯಕ್ರಮ ನಿರೂಪಿಸಿದರು. ಅಶೋಕ್ ವಂದಿಸಿದರು. ಕಾರ್ಯಕ್ರಮದಲ್ಲಿ ಶಾಂತಕುಮಾರ್, ಓಬಳೇಶ್, ವಿವೇಕ್, ನರೇಂದ್ರ, ರಘು, ಹನುಮಂತಪ್ಪ, ಜೈ ಪ್ರಕಾಶ್, ತಿಪ್ಪೇರುದ್ರಣ್ಣ, ಮಿಲ್ಕ್ ತಿಪ್ಪೇಶ್, ಎಂ ಡಿ ಕೋಟೆ ಕುಮಾರ್, ಅಂಜಿನಪ್ಪ, ರಾಮಾಂಜನೇಯ ಇತರರಿದ್ದರು.



