ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ಬಾಶೆಟ್ಟಿಹಳ್ಳಿಯಲ್ಲಿ ನೂತನವಾಗಿ ಪ್ರಾರಂಭವಾಗಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ "ಜೂಬಿಲೆಂಟ್ ವುಡ್ ವರ್ಕ್ಸ್ ಕಂಪನಿ " ವತಿಯಿಂದ ನೋಟ್ಸ್ ಮತ್ತು ಪಠ್ಯಪುಸ್ತಕ ವಿತರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ವನ್ನು ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತ್ ಅದ್ಯಕ್ಷ ಪ್ರೇಮ್ ಕುಮಾರ್ ಉದ್ಘಾಟಿಸಿ ಮಾತನಾಡಿ ಶಿಕ್ಷಣ ಅರೋಗ್ಯ ಮತ್ತು ಸಮಾಜಸೇವಾ ಕಾರ್ಯಗಳಲ್ಲಿ ಸರ್ಕಾರದ ಜೊತೆ ಕಂಪನಿಗಳು ಎನ್ಜಿಓ ಸಂಸ್ಥೆಗಳು ಕೖಜೊಡಿಸಿದರೆ ಉತ್ತಮ ಶಿಕ್ಷಣ ಆರೋಗ್ಯ ಒದಗಿಸಬಹುದು ಎಂದು ಹೇಳಿದರು.
ಸಂಸ್ಥೆಯ ಕಾರ್ಪೋರೇಟ್ ವ್ಯವಹಾರಗಳ ಮುಖ್ಯಸ್ಥ ರಘುರಾಮ್ ವರಕಾಲ ಮಾತನಾಡಿ ನಮ್ಮ ಜೂಬಿಲೆಂಟ್ ವುಡ್ ವರ್ಕ್ ಕಂಪನಿಯಿಂದ ಪುಸ್ತಕ ವಿತರಣೆ ಮಾಡುವುದು ನಮಗೆ ತುಂಬಾ ಸಂತಸದ ವಿಷಯ. ಜನಪರ ಕಾರ್ಯಗಳಿಗೆ ನಮ್ಮ ಸಂಸ್ಥೆ ಸಹಕಾರ ನೀಡುತ್ತದೆ. ಅದರಲ್ಲೂ ಶಿಕ್ಷಣ ಕ್ಷೇತ್ರಕ್ಕೆ ಸಹಕಾರ ನೀಡುವುದು ನಮ್ಮ ಪ್ರಥಮ ಆದ್ಯತೆಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜೀವನ ನಂದನ್, ಮುನಿಯಪ್ಪ, ಮುನಿಚಂದ್ರ,ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಟಿ ಆರ್ ಶ್ರೀರಾಮೇಗೌಡ ಮತ್ತಿತರರು ಬಾಗವಹಿಸಿದ್ದರು.



