LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸರ್ಕಾರಿ ಪಿಯು ಕಾಲೇಜಿಗೆ ಯುಪಿಎಸ್, ಬ್ಯಾಟರಿ ಕೊಡುಗೆ ನೀಡಿದ ದಾನಿ ಲಕ್ಷ್ಮಣ್ ಡಿ. ಸೋನಿ

Advertisement
Advertisement

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ತಾಲೂಕಿನ ಐಮಂಗಲ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಕಲಿಕಾ ಹಿತದೃಷ್ಟಿಯಿಂದ ಚಿತ್ರದುರ್ಗದ ಪ್ರಸಿದ್ಧ ಅನ್ನಪೂರ್ಣ ಜುವೆಲರ್ಸ್ ಮಾಲೀಕರಾದ ಶ್ರೀ ಲಕ್ಷ್ಮಣ್ ಡಿ. ಸೋನಿ ಅವರು ಕಾಲೇಜಿಗೆ ಯು.ಪಿ.ಎಸ್ ಹಾಗೂ ಬ್ಯಾಟರಿಯನ್ನು ಕೊಡುಗೆಯಾಗಿ ನೀಡುವ ಮೂಲಕ ಉದಾತ್ತತೆ ಮೆರೆದಿದ್ದಾರೆ.

ಕಾಲೇಜಿನಲ್ಲಿ ನಿರಂತರ ವಿದ್ಯುತ್ ಸಂಪರ್ಕ ಹಾಗೂ ಡಿಜಿಟಲ್ ಕಲಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ದಾನಿಗಳು ಮಾಡಿರುವ ಈ ಧನಸಹಾಯ ಮತ್ತು ತಾಂತ್ರಿಕ ಬೆಂಬಲಕ್ಕೆ ಕಾಲೇಜು ಮಂಡಳಿ ಮತ್ತು ವಿದ್ಯಾರ್ಥಿ ಸಮೂಹ ಕೃತಜ್ಞತೆ ಸಲ್ಲಿಸಿದೆ.

ದಾನಿಗಳಿಗೆ ಅಭಿನಂದನೆ:
ಕೊಡುಗೆ ಹಸ್ತಾಂತರಿಸಿದ ಈ ವಿಶೇಷ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ತಿಪ್ಪೇಸ್ವಾಮಿ
, ಕಾಲೇಜಿನ ಪ್ರಾಚಾರ್ಯ ಎಂ. ತಿಪ್ಪೇಸ್ವಾಮಿ ಹಾಗೂ ಹಿರಿಯ ಉಪನ್ಯಾಸಕ ಮಹಮ್ಮದ್ ಶಕೀಲ್ ಅವರು ದಾನಿ ಲಕ್ಷ್ಮಣ್ ಡಿ. ಸೋನಿ ಅವರ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಿ, ಗೌರವಿಸಿದರು.

ಈ ವೇಳೆ ಅರ್ಥಶಾಸ್ತ್ರ ಉಪನ್ಯಾಸಕರಾದ ಎಸ್.ಕೆ. ಮಂಜುನಾಥ್, ಉಪನ್ಯಾಸಕಿ ಬಿ. ಶಿಲ್ಪಾ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದು, ದಾನಿಗಳಿಗೆ ಹೃತೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರೈತರಿಗೆ 3 ದಿನಗಳ ವಸತಿಯುಕ್ತ ಉಚಿತ ಸಾವಯವ ಕೃಷಿ ತರಬೇತಿ ಹಾಗೂ ಪ್ರವಾಸಬಿಡದಿ ಟೌನ್‌ಶಿಪ್‌ ಯೋಜನೆ ವಿರುದ್ಧ ಕುಮಾರಸ್ವಾಮಿ, ಆರ್.ಅಶೋಕ್ ಚಾಲನೆ: ಪಾದಯಾತ್ರೆಯಲ್ಲಿ ಹಿರಿಯೂರು ಮುಖಂಡರು ಭಾಗಿಸರ್ಕಾರಿ ಶಾಲೆಗೆ ಭೂಮಿ ದಾನ ಅತ್ಯಂತ ಶ್ರೇಷ್ಠ ಕಾರ್ಯ-ಎನ್. ಶ್ರೀನಿವಾಸ್ ಚಿನ್ಮೂಲಾದ್ರಿ ಅಕ್ಷರೋತ್ಸವ ಕವಿಗೋಷ್ಟಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದ ಡಾ.ಎಲ್.ಪಾಲಾಕ್ಷಯ್ಯಬಿಡದಿ ಟೌನ್‌ಶಿಪ್ ವಿರೋಧಿ ಪಾದಯಾತ್ರೆಗೆ ಸಿಎಂ ಡಿ.ಕೆ. ಶಿವಕುಮಾರ್ ಪ್ರತ್ಯುತ್ತರ:ಬಿಡದಿ ಟೌನ್‌ಶಿಪ್ ವಿರುದ್ಧ ಬಿಜೆಪಿ-ಜೆಡಿಎಸ್ ಜಂಟಿ ಸಮರ: ಬೈರಮಂಗಲದಿಂದ ಬೆಂಗಳೂರಿಗೆ 'ಪಾದಯಾತ್ರೆ' ಆರಂಭ"ನನ್ನನ್ನು ಕೊಂಡುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ": ಹೆಚ್.ಡಿ. ಕೆ ವಾಗ್ದಾಳಿ ಖಾತೆ ಹಂಚಿಕೆ, ಸಂಪುಟ ಪುನಾರಚನೆ ಕಸರತ್ತು: ಹೈಕಮಾಂಡ್ ಭೇಟಿಗೆ ದೆಹಲಿಗೆ ತೆರಳಿದ ಸಿಎಂ ಶಿವಕುಮಾರ್ಪೊಲೀಸರ ಮೆಗಾ ಆಪರೇಷನ್: 105 ಅಕ್ರಮ ಬಾಂಗ್ಲಾ ವಲಸಿಗರ ಬಂಧನ, ಗಡಿಪಾರಿಗೆ ಕ್ರಮಸಚಿವ ನಾಗೇಂದ್ರ ರಾಜೀನಾಮೆಗೆ ಶ್ರೀರಾಮುಲು ಆಗ್ರಹ; ರೆಡ್ಡಿ ಬ್ರದರ್ಸ್‌ಗೆ ಈಶ್ವರ್ ಖಂಡ್ರೆ ತಿರುಗೇಟು