Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅನ್ನದಾನದ ಮಹತ್ವ ಅರಿತ ಡಾ.ಕೆ.ವಿ.ಸಿದ್ಧರಾಜು-ಭೋವಿಶ್ರೀ

Advertisement
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕಾಯಕವೇ ಕೈಲಾಸ ದಾಸೋಹವೇ ದೇವಧಾಮ. ಅನ್ನ ದಾಸೋಹವು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಅನ್ನದಾನವು ಕೇವಲ ಆಹಾರವನ್ನು ದಾನ ಮಾಡುವುದಲ್ಲ, ಅದು ಕರುಣೆ, ಸಹಾನುಭೂತಿ ಮತ್ತು ಸಮಾಜ ಸೇವೆಯ ಸಂಕೇತವಾಗಿದೆ ಎಂದು ಭೋವಿಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

ಭಾರತೀಯ ರೈಲ್ವೆ ಬೋರ್ಡಿನ ಮಾಜಿ ಸದಸ್ಯ ಡಾ.ಕೆ.ವಿ ಸಿದ್ಧರಾಜು ಕುಟುಂಬದಿಂದ ನಗರದ ಹೊರವಲಯದಲ್ಲಿರುವ ಎಸ್ ಜೆ ಎಸ್ ಸಮೂಹ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ಹಾಗೂ ಅನ್ನದಾಸೋಹದ ಕೈಂಕರ್ಯವನ್ನು ನೆರವೇರಿಸಿ ಸಮಾರಂಭದ  ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀಗಳು, ವಿವಿಧ ಶ್ರೇಷ್ಠ ದಾನಗಳಲ್ಲಿ ಒಂದಾದ ಅನ್ನದಾನದ ಮಹತ್ವ ಅರಿತವರು ಡಾ.ಕೆ.ವಿ.ಸಿದ್ಧರಾಜು. ಒಂದು ತುತ್ತು ಅನ್ನಕ್ಕೆ ಪರದಾಡುವ ಜನರಿಗೆ ಅನ್ನವೇ ದೇವರು ಆಗಿರುತ್ತದೆ ಎಂದರು.


ಅನ್ನವೇ ಬದುಕಾಗಿರುತ್ತದೆ. ಅನ್ನವಿಲ್ಲದೇ ಈ ಜಗತ್ತಿನಲ್ಲಿ ಹಲವಾರು ಜನ ಪರದಾಡುತ್ತಾರೆ. ಈ ರೀತಿಯ ಬದುಕನ್ನು ಕಂಡ ಸಿದ್ಧರಾಜು ಅವರು ಬಾಲ್ಯದಲ್ಲಿ ಒಪ್ಪತ್ತಿನ ಗಂಜಿಗೂ ಅಲೆದಾಟ ನಡೆಸಿದ್ದಾರೆ. ಆಹಾರಕ್ಕಾಗಿ ಬದುಕಿನ ಹೊರಾಟ ಪ್ರಾರಂಭಿಸಿದ್ದಾರೆ. ಇಂದು ತಾವು ಉಂಟು ಬಡವರ ಹಸಿವನ್ನು ನೀಗಿಸುವ ಮಟ್ಟಕ್ಕೆ ಬೆಳೆದಿದ್ದಾರೆ. ಆಹಾರದ ಹಾಗೆ ನೀರು ಕೂಡಾ ಜೀವಕ್ಕೆ ತುಂಬಾ ಮುಖ್ಯವಾಗಿದೆ. ಬಾಯಾರಿಕೆಯಿಂದ ಸಾಯುವ ಸ್ಥಿತಿಯಲ್ಲಿ ಇರುವವನಿಗೆ ಒಂದು ಗುಟುಕು ನೀರು ಸಿಕ್ಕಿದರು ಸಹ ಅದು ಅವನಿಗೆ ಜೀವ ಜಲವೇ ಆಗಿರುತ್ತದೆ. ಆಗಾಗಿ ಸಿದ್ಧರಾಜು ಅವರು ಭೋವಿ ಗುರುಪೀಠದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಆಗಮಿಸುವ ಸದ್ಭಕ್ತರಿಗೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ್ದಾರೆ ಎಂದು ಸ್ವಾಮೀಜಿ ಹೇಳಿದರು.

ನಾವು ತಿನ್ನುವ ಅನ್ನದ ಒಂದೊಂದು ಆಗುಳಿನ ಮೇಲೂ ಅದನ್ನು ತಿನ್ನುವವರ ಹೆಸರು ಇರುತ್ತದೆ ಎನ್ನುವ ಮಾತು ಸಾಮಾನ್ಯವಾಗಿದೆ. ಅಕ್ಕಿಯು ಉಳಿದರೆ ನಾಳೆ ಅನ್ನಮಾಡಬಹುದು. ಅನ್ನ ಮಾಡಿ ತಿಂದು ಉಳಿದರೆ ನಂತರ ಅದನ್ನು ಬಿಸಾಕಬೇಕೆ ಹೊರತು ಅದು ನಾಳೆಗೆ ಹಾಳಾಗುತ್ತದೆ. ಹಾಗಾಗಿ ನಮಗೆ ಎಷ್ಟು ಬೇಕೋ ಅಷ್ಟೇ ಅಕ್ಕಿಯನ್ನು ಬಳಸಿ ಅನ್ನವನ್ನಾಗಿ ಪರಿವರ್ತಿಸಬೇಕು. ನಾಲ್ಕು ಅಗುಳು ಕಡಿಮೆ ತಿಂದರು ಪರವಾಗಿಲ್ಲ. ಹತ್ತು ಅಗುಳು ಹಾಳಾಗದಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು.



ಸಮಾರಂಭದಲ್ಲಿ ಗೀತಾ ಸಿದ್ಧರಾಜು, ಶಾಂತರಾಮು, ನಾಗರಾಜು, ಚಂದ್ರಶೇಖರ, ಗೆರಗುಂಟೆಪಾಳ್ಯ ಸಿದ್ಧರಾಜು, ರಾಘವೇಂದ್ರ , ಶ್ರೀಧರ ಉಪಸ್ಥಿದರಿದ್ದರು.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ