Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ದೇವರ ಎತ್ತುಗಳ ನೆಲೆ ಗೋಯಜ್ಞ- ಸಂರಕ್ಷಣಾ ತಾಣ:-ಡಾ.ವೈ ರಾಜಾರಾಮ್

Advertisement
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ದೇವರ ಎತ್ತುಗಳ ನೆಲೆ ಗೋಯಜ್ಞ ಮತ್ತು ಗೋವುಗಳ ಸಂರಕ್ಷಣಾ ತಾಣವಾಗಿದೆ ಎಂದು ಚಳ್ಳಕೆರೆಯ ನರಹರಿನಗರದ ಶ್ರೀನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷರಾದ ಪರಮಪೂಜ್ಯ ಡಾ.ವೈ ರಾಜಾರಾಮ್ ಗುರುಗಳು ಅಭಿಪ್ರಾಯಪಟ್ಟರು.
ನಗರದ ಹೊರವಲಯದ ಶ್ರೀಜಗಲೂರಜ್ಜನ ದೇವಸ್ಥಾನದ ಸಮೀಪದಲ್ಲಿರುವ ನನ್ನಿವಾಳದ ಕಟ್ಟೆಮನೆಗೆ ಸೇರಿದ ಮುತ್ತಯ್ಯಗಳ ದೇವರ ಎತ್ತುಗಳಿಗಾಗಿ ದೇವರ ಎತ್ತುಗಳ ಸಂರಕ್ಷಣಾ ಸಮಿತಿಯಿಂದ ನಿರ್ಮಿಸಿರುವ ಎರಡು ಶೆಡ್ ಗಳನ್ನು ಗೋಪೂಜೆ ನೆರವೇರಿಸಿ ಅವರು ಉದ್ಘಾಟಿಸಿ ಆಶೀರ್ವಚನ ನೀಡಿದರು.


                    ಗೋವಿನಲ್ಲಿ 33 ಕೋಟಿ ದೇವತೆಗಳು ನೆಲೆಸಿದ್ದಾರೆ. ಇವುಗಳೇ ಸಾಕ್ಷಾತ್ ದೇವರು ಎಂದು ಆರಾಧಿಸುವ  ನನ್ನಿವಾಳದ ಕಟ್ಟೆಮನೆಗೆ ಸೇರಿದ ಮುತ್ತಯ್ಯಗಳು ಮತ್ತು ಕಿಲಾರಿಗಳ ಸೇವೆ ನಿಜಕ್ಕೂ ಶ್ಲಾಘನೀಯ, ಗೋವಿನ ಉತ್ಪನ್ನಗಳಿಗೆ ಅಪಾರ ಬೇಡಿಕೆಯಿದ್ದು ಇವುಗಳನ್ನು ತಯಾರಿಸಿ ಮಾರಾಟ ಮಾಡಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬಹುದು.ಮುಂದಿನ ದಿನಗಳಲ್ಲಿ ಇನ್ನಷ್ಟು ಇಂತಹ ಕಾರ್ಯಗಳು ಸಮಿತಿಯ ವತಿಯಿಂದ ನಡೆಯಲಿ ಆಶಿಸಿದರು.  

                             ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ತಾಲೂಕು ವಿಶ್ವ ಹಿಂದೂ ಪರಿಷತ್ ನ ಅಧ್ಯಕ್ಷರಾದ ಕೆ.ಎಂ.ಯತೀಶ್ ಅವರು ದೇವರ ಎತ್ತುಗಳ ಸಂರಕ್ಷಣಾ ಸಮಿತಿಯು ನಿರ್ಮಿಸಿರುವ ಶೆಡ್ ಗಳ ನಿರ್ಮಾಣ ಕಾರ್ಯ ಸಾರ್ಥಕ ಸೇವೆಯಾಗಿದ್ದು ಇದನ್ನು ಎಲ್ಲರೂ ಸೇರಿ ಹೆಚ್ಚು ಪ್ರಚಾರ ಮಾಡಬೇಕು.ಇಂದು ಅವ್ಯಾಹತವಾಗಿ ನಡೆಯುತ್ತಿರುವ ಗೋಹತ್ಯೆಯ ಪ್ರಕರಣಗಳನ್ನು  ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಭೇದಿಸಿ ತಡೆಗಟ್ಟುವಲ್ಲಿ ಪ್ರಯತ್ನ ಮಾಡಲಾಗುತ್ತಿದ್ದಾರೆ ಎಂದು ತಿಳಿಸಿದರು.  

                               ಕಾರ್ಯಕ್ರಮದಲ್ಲಿ ದೇವರ ಎತ್ತುಗಳ ಸಂರಕ್ಷಣಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಶುಭಾ ಸೋಮಶೇಖರ್,ಎಂ.ರಾಮಚಂದ್ರಪ್ಪ,ಮಧುಮತಿ, ಸರಸ್ವತಿ ಪಾಂಡು, ಮಹೇಶ್ ನಗರಂಗೆರೆ,ಸಿದ್ದೇಶ್ ಮಾತನಾಡಿದರು.         ಕಾರ್ಯಕ್ರಮದ ಆರಂಭದಲ್ಲಿ ವಿಶೇಷ ಭಜನೆಯನ್ನು ಶ್ರೀರಾಧಾ ಮಾಧವ ಮಹಿಳಾ ಭಕ್ತಮಂಡಳಿಯವರು ನಡೆಸಿಕೊಟ್ಟರು.
ಯತೀಶ್ ಎಂ ಸಿದ್ದಾಪುರ ಅವರು ಕಾರ್ಯಕ್ರಮ ಸಂಘಟಿಸಿ ನಿರೂಪಿಸಿದರು.     


     ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡ ರೆಡ್ಡಿಹಳ್ಳಿ ವೀರಣ್ಣ,ಗೊಂಚಿಗಾರ್ ಪಾಪಯ್ಯ, ಪಾಪಯ್ಯ, ಪದ್ಮ ಗೋವಿಂದರಾಜು,ಶ್ರೀದೇವಿ ಶ್ರೀನಿವಾಸ್, ಎಚ್ ಲಕ್ಷ್ಮೀದೇವಮ್ಮ, ರುದ್ರಪ್ಪ, ನಾಗರಾಜ್, ರಾಘವೇಂದ್ರ, ಪ್ರೇಮಲೀಲಾ, ಸುಧಾಮಣಿ, ಯತೀಶ್ ಎಂ ಸಿದ್ದಾಪುರ, ವಿಶಾಲಾಕ್ಷಿ ಪುಟ್ಟಣ್ಣ, ಗೀತಾ, ಯಶೋಧಾ, ರಾಜೇಶ್ವರಿ, ಶಾರದಾ, ಬಾಬುರೆಡ್ಡಿಗಂಗಾಧರಶೆಟ್ಟಿ,ದೀಪಾ, ಭಾಗ್ಯ,ಪರಿಮಳ, ಮಲ್ಲಿಕಾರ್ಜುನ ಸೇರಿದಂತೆ ದೇವರ ಎತ್ತುಗಳ ಆರಾಧಕರು ಉಪಸ್ಥಿತರಿದ್ದರು.
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ