Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಸತೀಶ್ ಜಾರಕಿಹೊಳಿ ಮೇಲಿನ ಇ.ಡಿ ದಾಳಿ ರಾಜಕೀಯ ಪ್ರೇರಿತ: ಕಾಂಗ್ರೆಸ್ ಮುಖಂಡರ ತೀವ್ರ ಆಕ್ರೋಶ

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಹಿಂದುಳಿದ ವರ್ಗಗಳು ಹಾಗೂ ಎಸ್‌ಟಿ ಸಮುದಾಯದ ಪ್ರಭಾವಿ ನಾಯಕ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಕುಟುಂಬಸ್ಥರ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ನಡೆಸಿರುವ ದಾಳಿಯು ಸಂಪೂರ್ಣವಾಗಿ ರಾಜಕೀಯ ಪ್ರೇರಿತವಾಗಿದ್ದು, ಇದು ಕೇಂದ್ರ ಸರ್ಕಾರದ ಹುನ್ನಾರ ಎಂದು ಕೆಪಿಸಿಸಿ ಎಸ್‌ಟಿ ಘಟಕದ ಅಧ್ಯಕ್ಷ ಮುನಿಕೃಷ್ಣ ತೀವ್ರವಾಗಿ ಖಂಡಿಸಿದ್ದಾರೆ.

ದೊಡ್ಡಬಳ್ಳಾಪುರದಲ್ಲಿ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಪಂಗಡ ಹಾಗೂ ಮಾನವ ಬಂಧುತ್ವ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಬೇರೆ ಯಾರೂ ಭ್ರಷ್ಟರೇ ಇಲ್ಲವೇ? ಹಿಂದುಳಿದ ವರ್ಗಗಳ ಬಲವಾದ ಧ್ವನಿಯಾಗಿರುವ ಸತೀಶ್ ಜಾರಕಿಹೊಳಿ ಅವರ ರಾಜಕೀಯ ಬೆಳವಣಿಗೆಯನ್ನು ಸಹಿಸಲಾಗದೆ ಕೇಂದ್ರ ಬಿಜೆಪಿ ಸರ್ಕಾರ ಇ.ಡಿ ಮತ್ತು ಐ.ಟಿ ಅಸ್ತ್ರಗಳನ್ನು ಬಳಸಿ ದಮನಕಾರಿ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.

Advertisement

ಈ ಹಿಂದೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮೇಲೂ ಇದೇ ರೀತಿ ದಾಳಿ ನಡೆಸಿ ಅವರ ರಾಜಕೀಯ ವರ್ಚಸ್ಸಿಗೆ ಧಕ್ಕೆ ತರಲು ಯತ್ನಿಸಲಾಗಿತ್ತು. ಈಗ ಸತೀಶ್ ಜಾರಕಿಹೊಳಿ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ನಮ್ಮ ನಾಯಕರು ಕಾನೂನುಬದ್ಧವಾಗಿಯೇ ವ್ಯವಹಾರ ನಡೆಸುತ್ತಿದ್ದು, ತನಿಖಾ ಸಂಸ್ಥೆಗಳಿಗೆ ಅಗತ್ಯವಿರುವ ಎಲ್ಲಾ ದಾಖಲಾತಿಗಳನ್ನು ನೀಡಿ ಕಾನೂನುಬದ್ಧವಾಗಿಯೇ ಉತ್ತರ ನೀಡಲಿದ್ದಾರೆ ಎಂದರು. 

2028ರ ಸಿಎಂ ಆಕಾಂಕ್ಷಿ ಎಂಬ ಕಾರಣಕ್ಕೆ ಸಂಚು - ದಲಿತ ಮುಖಂಡ ವೆಂಕಟೇಶ್
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಲಿತ ಮುಖಂಡ ವೆಂಕಟೇಶ್
, ಸತೀಶ್ ಜಾರಕಿಹೊಳಿ ಅವರು ಎಸ್‌ಟಿ ಸಮುದಾಯದ ಅತ್ಯಂತ ಪ್ರಭಾವಿ ನಾಯಕರಾಗಿದ್ದು, ಕಾಂಗ್ರೆಸ್ ಪಕ್ಷದಲ್ಲಿ 2028ರ ವಿಧಾನಸಭಾ ಚುನಾವಣೆಯ ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಅವರ ಬೆಳೆಯುತ್ತಿರುವ ಜನಪ್ರಿಯತೆಯನ್ನು ಸಹಿಸದ ಕೆಲವರು ಈ ರಾಜಕೀಯ ದಾಳಿ ನಡೆಸಿದ್ದಾರೆ ಎಂದು ಕಿಡಿಕಾರಿದರು. ಅವರು ಎಂದಿಗೂ ಕಾನೂನಿನ ಚೌಕಟ್ಟಿನಲ್ಲೇ ಕೆಲಸ ಮಾಡುತ್ತ ಬಂದಿದ್ದು, ತನಿಖೆಯಿಂದ ಸತ್ಯಾಂಶ ಹೊರಬೀಳಲಿದೆ ಎಂದರು.

ಬಿಜೆಪಿ-ಜೆಡಿಎಸ್ ಮಣಿಸುವ ಶಕ್ತಿ ಜಾರಕಿಹೊಳಿ ಅವರಿಗಿದೆ - ಕೆಪಿಸಿಸಿ ಪದವೀಧರ ಘಟಕದ ಅಧ್ಯಕ್ಷೆ ಸೌಮ್ಯರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟವನ್ನು ಸಮರ್ಥವಾಗಿ ಎದುರಿಸಿ ಮಣಿಸುವ ಶಕ್ತಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಿಟ್ಟರೆ ಸತೀಶ್ ಜಾರಕಿಹೊಳಿ ಅವರಿಗೆ ಇದೆ ಎಂಬುದನ್ನು ಅರಿತೇ ಕೇಂದ್ರ ಬಿಜೆಪಿ ಈ ಕುತಂತ್ರ ರೂಪಿಸಿದೆ ಎಂದು ಕೆಪಿಸಿಸಿ ಜಿಲ್ಲಾ ಪದವೀಧರ ಘಟಕದ ಅಧ್ಯಕ್ಷರಾದ ಸೌಮ್ಯ ವಾಗ್ದಾಳಿ ನಡೆಸಿದರು. ನಿಷ್ಕಳಂಕ ರಾಜಕಾರಣಿಯಾಗಿರುವ ಸತೀಶ್ ಜಾರಕಿಹೊಳಿ ಅವರ ಹೆಸರನ್ನು ಮಸಳಲು ಎಷ್ಟೇ ಪ್ರಯತ್ನಿಸಿದರೂ ಅದು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.

ಮುಖಂಡ ಗಿರೀಶ್ ಮಾತನಾಡಿ, ಸುಳ್ಳು ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದರು. ತನಿಖೆಯ ಬಳಿಕ ಸತ್ಯ ಹೊರಬರಲಿದ್ದು, ಕೇಂದ್ರ ಸರ್ಕಾರದ ಈ ದ್ವೇಷದ ರಾಜಕಾರಣದ ವಿರುದ್ಧ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟವನ್ನು ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ರಮೇಶ್, ಕೃಷ್ಣಪ್ಪ, ಡಾ. ಸೌಮ್ಯ, ಲಕ್ಷ್ಮೀಪತಿ ಸೇರಿದಂತೆ ಜಿಲ್ಲಾ ಎಸ್‌ಟಿ ಘಟಕದ ಪದಾಧಿಕಾರಿಗಳು, ಸಮುದಾಯದ ಮುಖಂಡರು ಹಾಗೂ ಮಾನವ ಬಂಧುತ್ವ ವೇದಿಕೆಯ ಸದಸ್ಯರು ಉಪಸ್ಥಿತರಿದ್ದರು.

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
"ನಾನೇ ಕ್ರೂರಿ, ನಾನೇ ಪ್ರೇಮಿ": ಆತ್ಮಾವಲೋಕನದ ಸಂದೇಶ ನೀಡಿದ ಡಾ.ಬಸವ ಕುಮಾರ ಸ್ವಾಮೀಜಿ ಭಾವನಾತ್ಮಕ ಮಾತುಗಳು!ಬುಡಬುಡಕಿ ಬಂದನಾರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ: ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ಅಭಯಸಾರಿಗೆ ಡಿಪೋ ಹಾಗೂ ವಸತಿ ಗೃಹಗಳ ಉದ್ಘಾಟನೆಗೆ ಒತ್ತಾಯಿಸಿ ಸಚಿವ ರಘುಮೂರ್ತಿಯವರಿಗೆ ಮನವಿ ವಾಸವಿ ಕಾಲೋನಿಯ ಗಣೇಶ ಸನ್ನಿಧಿಯಲ್ಲಿ ಶ್ರೀಶಾರದಾಶ್ರಮದ ಭಕ್ತರಿಂದ ವಿಶೇಷ ಭಜನೆಹರಿಯಬ್ಬೆ ನಾಗಭೂಷಣ ಡಿ. ಅವರಿಗೆ 'ಕರ್ನಾಟಕ ಸೋಷಿಯಲ್ ಸರ್ವಿಸ್ ಅವಾರ್ಡ್' ಗೌರವಬಯಲುಸೀಮೆಯ ಜೀವನಾಡಿ: ಚಿತ್ರದುರ್ಗ ಜಿಲ್ಲೆಗೆ ಹರಿದುಬಂದ ಭದ್ರೆ - ಸಂಭ್ರಮವೋ ಸಂಭ್ರಮ!ಗಂಗಾ ಕಲ್ಯಾಣ: 13 ಫಲಾನುಭವಿಗಳಿಗೆ ಮೋಟಾರ್ ಪಂಪ್ ವಿತರಿಸಿದ ಸಚಿವ ಟಿ.ರಘುಮೂರ್ತಿದಾವಣಗೆರೆಯಲ್ಲಿ ಇಂದು ರಾಜ್ಯಮಟ್ಟದ 'ವಿದ್ಯಾರತ್ನ' ಪ್ರಶಸ್ತಿ ಪ್ರದಾನ: 18 ಜನ ಶಿಕ್ಷಕರ ಆಯ್ಕೆತಾಲೂಕಿನ ಹುಲಿಕುಂಟೆಯಲ್ಲಿ ಹೊಸ ಕೆಎಸ್‌ಆರ್‌ಟಿಸಿ ಉಪವಿಭಾಗ ಹಾಗೂ ಬಸ್ ಡಿಪೋ: ಸಚಿವ ಡಾ. ಜಿ. ಪರಮೇಶ್ವರ್