Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಂಬಳ ಇಲ್ಲದೆ ಅರ್ಥಿಕ ಸಂಕಷ್ಟದಲ್ಲಿ ಸಾರಿಗೆ ಸಂಸ್ಥೆ ಚಾಲಕನ ಕುಟುಂಬ

Advertisement
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ : 
ವೈದ್ಯರ ಸಲಹೆಯಂತೆ ಶಸ್ತ್ರಚಿಕಿತ್ಸೆ ಪಡೆದು  3 ತಿಂಗಳ ವಿಶ್ರಾಂತಿ ನಂತರ ಚೇತರಿಸಿಕೊಂಡು ಕೆಲಸಕ್ಕೆ ಮರಳಿದೆ. ಆದರೆ ಹಿಂದಿನ ಡಿಪೋ ಮ್ಯಾನೇಜರ್ ನನಗೆ ವೈದ್ಯಕೀಯ ರಜೆ ನೀಡದೆ  3 ತಿಂಗಳ ಸಂಬಳ ನೀಡದೆ ಸತಾಯಿಸುತ್ತಿದ್ದು,ನನ್ನ ಇಡೀ ಕುಟುಂಬ ಸಂಕಷ್ಟದಲ್ಲಿದೆ ಎಂದು ಕೆ.ಎಸ್. ಆರ್. ಟಿ.ಸಿ.ಚಾಲಕ ಹೆಚ್.ಸಿ.ಮಂಜುನಾಥ್ ತಮ್ಮ ನೋವು ತೊಡಿಕೊಂಡಿದ್ದಾರೆ.

ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮದ ನಿವಾಸಿಯಾಗಿರುವ ಹೆಚ್.ಸಿ.ಮಂಜುನಾಥ್ ಹೆಂಡತಿ ಇಬ್ಬರು ಮಕ್ಕಳು, ವಯಸ್ಸಾದ ತಂದೆ ತಾಯಿ ಜೊತೆಯಲ್ಲಿ ವಾಸವಾಗಿದ್ದು, ಸದ್ಯ ದೊಡ್ಡಬಳ್ಳಾಪುರ ಕೆ.ಎಸ್.ಆರ್. ಟಿ.ಸಿ. ಘಟಕದಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಂಬಳ ಪಡೆಯದೇ ನೋವಿನಲ್ಲಿರುವ ಅವರು ಮಾಧ್ಯಮದೊಂದಿಗೆ ಮಾತನಾಡಿ ನನಗೆ ವೃಷಣಗಳ ಶಸ್ತ್ರ ಚಿಕಿತ್ಸೆಯಾಗಿದ್ದು ನನಗೆ ನಡೆಯಲು ಮತ್ತು ಕುಳಿತುಕೊಳ್ಳಲು ಅಸಾಧ್ಯವಾಗಿದ್ದು ಕಾಲುಗಳನ್ನ ಅಲುಗಾಡಿಸಿದರೆ ಅಪಾರ ನೋವು ಉಂಟಾಗುತ್ತಿತ್ತು. ವೈದ್ಯರ ಸಲಹೆಯಂತೆ ಮನೆಯಲ್ಲಿ ವಿಶ್ರಾಂತಿ ಪಡೆದಿದ್ದೆ.

ದಿನಾಂಕ 20-04-2025 ರಂದು ನನ್ನ ಮಡದಿ ವೈದ್ಯಕೀಯ ರಜೆಗಾಗಿ ದೊಡ್ಡಬಳ್ಳಾಪುರ ಘಟಕಕ್ಕೆ ಹೋಗಿ ವ್ಯವಸ್ಥಾಪಕರಿಗೆ   ವೈದ್ಯಕೀಯ ಪ್ರಮಾಣ ಪತ್ರ ಹಾಗೂ ರಜೆ ಚೀಟಿಯನ್ನು ನೀಡಿದ್ದಾರೆ.ಆದರೆ  ರಜೆ ಚೀಟಿ ನೀಡಿ ಬಂದಿದ್ದರೂ ಸಹ ವೈದ್ಯಕೀಯ ರಜೆ ನೀಡದೆ ಗೈರು ಹಾಜರಿ ಹಾಕಿದ್ದಾರೆ. ಇದರಿಂದ ನನ್ನ ಮೂರು ತಿಂಗಳ ಸಂಬಳ ಇಲ್ಲದೆ ನನ್ನ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದೆ ಎಂದಿದ್ದಾರೆ.

ಸಂಬಳ ಬರುತ್ತದೆ ಎಂದು ಸಂಬಳದ ಮೇಲೆ ಸಾಲವನ್ನು ಮಾಡಲಾಗಿದ್ದು, ಪ್ರತಿ ತಿಂಗಳು ನನ್ನ ಸಂಬಳದಲ್ಲಿ ಸಾಲದ ಹಣ ಕಡಿತವಾಗುತ್ತಿತ್ತು, 3 ತಿಂಗಳ ಸಂಬಳ ಬಾರದ ಹಿನ್ನಲೆ ಬ್ಯಾಂಕ್ ನವರು ನನ್ನ ಅಕೌಂಟ್ ಅನ್ನು  ಫ್ರೀಜ್ ಮಾಡಿದ್ದಾರೆ.  ಸಂಬಳ ಇಲ್ಲದೆ ನನ್ನ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದೆ. ಹಣ ಇಲ್ಲದೆ ಸಂಸಾರ ಮಾಡುವುದು ಕಷ್ಟವಾಗಿದೆ. ಮಡದಿ ಮಕ್ಕಳು ಸಾಯುವ ಮಾತುಗಳನ್ನಾಡುತ್ತಿದ್ದಾರೆ.

ದಯವಿಟ್ಟು ನನ್ನ ವೈದ್ಯಕೀಯ ರಜೆ ನೀಡಿ ನನ್ನ 3 ತಿಂಗಳ ಸಂಬಳ ನೀಡುವಂತೆ ಕೆ. ಎಸ್. ಆರ್. ಟಿ.ಸಿ. ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ ಹೆಚ್.ಸಿ.ಮಂಜುನಾಥ್. ವೈದ್ಯಕೀಯ ರಜೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಇಂದಿನ ಡಿಪೋ ವ್ಯವಸ್ಥಾಪಕ ಲಕ್ಷ್ಮೀಪತಿ, ನಾನು ದೊಡ್ಡಬಳ್ಳಾಪುರ ಘಟಕಕ್ಕೆ ಬಂದು ಒಂದು ವಾರ ಮಾತ್ರವಾಗಿದೆ.ಇದರ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. ಮಂಜುನಾಥ್ ರವರ ವೈದ್ಯಕೀಯ ರಜೆಗೆ ಸಂಬಂಧಿಸಿದಂತೆ ವಿಚಾರಣೆ ಮಾಡಿ ಕ್ರಮ ತೆಗೆದುಕೊಳ್ಳುವುದ್ದಾಗಿ ತಿಳಿಸಿದ್ದಾರೆ.
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ