Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಹಿಂದೂ ಸಮಾಜ ಗಣೇಶೋತ್ಸವ ನಿಲ್ಲಿಸುವುದಿಲ್ಲ  : ನರೇಶ್ ರೆಡ್ಡಿ

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿಂದೂ ಸಮಾಜವು ಗಣೇಶೋತ್ಸವಗಳನ್ನು ನಿಲ್ಲಿಸುವುದಿಲ್ಲ ಎಂದು ಬಜರಂಗದಳ ಪ್ರಾಂತ ಬಿಲೋ ಪಾಸನ ಪ್ರಮುಖ್ ನರೇಶ್ ರೆಡ್ಡಿ ಹೇಳಿದರು.  ಹಿರಿಯೂರಿನ ವಿಶ್ವ ಹಿಂದೂ ಪರಿಷತ್ ಭಜರಂಗದಳ ವತಿಯಿಂದ ಪ್ರತಿಷ್ಠಾಪಿಸಿದ್ದ ಹಿಂದೂ ಮಹಾ ಗಣಪತಿಯ ವಿಸರ್ಜನಾ ಕಾರ್ಯಕ್ರಮದಲ್ಲಿ ನಗರದ ಹುಳಿಯಾರು ರಸ್ತೆಯ ಮೋರ್  ಬಳಿ  ಅಶೋಕ್ ಸಿಂಘಾಲ್ ಜಿ ವೇದಿಕೆಯಲ್ಲಿನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

ಬಾಲ ಗಂಗಾಧರ ತಿಲಕ್ ರವರು ಗಣೇಶೋತ್ಸವಗಳನ್ನು ಆರಂಭಿಸಿ ಸಂಘಟನೆ ಮತ್ತು ಭಕ್ತಿ ಭಾವವನ್ನು ಮೆರೆದಿದ್ದಾರೆ ಅದನ್ನು ನಮ್ಮ ಹಿಂದೂ ಸಮಾಜ ಮುಂದುವರಿಸುತ್ತಾ ಬಂದಿದೆ ಈಗಿನ ಸರ್ಕಾರ ಹಿಂದೂ ಸಮಾಜದ ಮೇಲೆ ಗದಪ್ರಹಾರ ಮಾಡುತ್ತಿದೆ ಗಣೇಶೋತ್ಸವಗಳಿಗೆ ಅಸಹಕಾರ ಕಲ್ಪಿಸುತ್ತಿದೆ ಎಂದರು. ವಂದೇ ಮಾತರಂ ಗೀತೆಯನ್ನು ಮೊಟಕುಗೊಳಿಸುತ್ತಿರುವ ಹುನ್ನಾರ ಮಾಡುತ್ತಿದೆ ಎಂದರು  ಶಿವಾಜಿ ಮಹಾರಾಜರು ಹಿಂದೂ ಸಮಾಜಕ್ಕೆ ಶಕ್ತಿಯನ್ನು ತುಂಬಿದರು ಅದರಂತೆ ಇಂದಿನ ಎಲ್ಲಾ ಹಿಂದೂ ಯುವಕರು ಶಕ್ತಿಶಾಲಿಗಳಾಗಬೇಕು ಎಂದರು ಗೋ ಹತ್ಯೆ ನಡೆಯುತ್ತಿದೆ ಗೋವಿನ ತಳಿಗಳನ್ನು ಉಳಿಸಬೇಕು ಸರ್ಕಾರ ಗೋಮಾಂಸ ಮಾರಾಟವನ್ನು ನಿಲ್ಲಿಸಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದರು.

Advertisement

ಹಿಂದು ಸಮಾಜದಲ್ಲಿ ಗೋವಿಗೆ ತುಂಬಾ ಪೂಜನೀಯ ಸ್ಥಾನವಿದೆ ಗೃಹಪ್ರವೇಶಗಳಿಗೆ ಅಂಗಡಿ ಪ್ರಾರಂಭೋತ್ಸವ ಗಳಿಗೆ ಶುಭ ಸಮಾರಂಭಗಳಲ್ಲಿ ಪ್ರಪ್ರಥಮವಾಗಿ ಗೋವುಗಳನ್ನು ಪೂಜಿಸುವ ಪದ್ಧತಿ ನಮ್ಮಲ್ಲಿದೆ ಎಂದರು.

ಗೋವಿನ ಗಂಜಲವನ್ನು ಪ್ರೋಕ್ಷಣೆ ಮಾಡುವಂತಹ ಪದ್ಧತಿ ನಮ್ಮಲ್ಲಿದೆ ಇದು ತುಂಬಾ ಪವಿತ್ರವಾದಂತದ್ದು ಎಂದರು   ಮುಖಂಡರಾದ ನಾರಾಯಣ ರೆಡ್ಡಿ, ಆರ್.ಟಿ. ಪ್ರಶಾಂತ್  ಗೋವಿಂದಚಾರ್, ಎಸ್ ರಾಘವೇಂದ್ರ, ಮಂಜುನಾಥೇಶ್, ಎಂ. ಪ್ರಶಾಂತ್, ಜಗದೀಶ್, ಪ್ರಮೀಳಾ.    

   ಭೋಜರಾಜ್, ಎನ್ ಎಸ್ ಜೋಧಾ,  ದೇಸಾಯಿ, ಅಮರನಾಥ್, ಪ್ರಭಾಕರ್, ನಾಗದೀಪ್, ಧನುಷ್, ವಾಸುದೇವ್, ಮಣಿ, ಚಿನ್ಮಯ ನಂದ, ವೇಣುಗೋಪಾಲ್, ನವೀನ್, ಅಜ್ಜು,  ನವೀನ್ ಆಚಾರ್ಯ, ಪ್ರೀತಮ್, ಚೇತನ್, ರಂಜನಿ, ಸುಚಿತ್ರ,  ಸ್ವರ್ಣ ರೆಡ್ಡಿ, ಹಾಗೂ ಅನೇಕ ಯುವ ಮುಖಂಡರು ಪಾಲ್ಗೊಂಡಿದ್ದರು ವಿವಿಧ ವಾದ್ಯ ಸಂಗೀತ ಗೊಂಬೆ ಕುಣಿತ ಸಾಂಸ್ಕೃತಿಕ ಕುಣಿತಗಳೊಂದಿಗೆ ಮೆರವಣಿಗೆ ಹಿರಿಯೂರು ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಬಂತು.

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯೋಗ ಚಾಂಪಿಯನ್ ಶಿಪ್ ಸ್ಪರ್ಧೆಗೆ ನಿಸರ್ಗ ಯೋಗ ಪಟುಗಳು ಸಿದ್ಧತೆಕಲ್ವಳ್ಳಿ ಭಾಗದ ಪ್ರತಿಯೊಂದು ಪಂಚಾಯತಿ ವ್ಯಾಪ್ತಿಯಲ್ಲಿ ಒಂದೊಂದು ಮೇವು ಬ್ಯಾಂಕ್ ತೆರೆಯಲು ಆಗ್ರಹದಲಿತ ಸಂಘರ್ಷ ಸಮಿತಿ ಪರಿವರ್ತನವಾದ ಸಂಘಟನೆಗೆ ನೂತನ ಪದಾಧಿಕಾರಿಗಳ ಆಯ್ಕೆಹಿಂದೂ ಸಮಾಜ ಗಣೇಶೋತ್ಸವ ನಿಲ್ಲಿಸುವುದಿಲ್ಲ  : ನರೇಶ್ ರೆಡ್ಡಿಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜಿನ ಸಹಪ್ರಾಧ್ಯಾಪಕ ‌ಜೆ.ನಾಗರಾಜು ಗೆ ಪಿ ಎಚ್ ಡಿಕೆಂಗುಂಟೆ ಗ್ರಾಮದಲ್ಲಿ ಉಚಿತ ಬೃಹತ್ ಆರೋಗ್ಯ ತಪಾಸಣೆ ಶಿಬಿರ ಅಶೋಕನ ಮೂರು ಶಾಸನಗಳನ್ನು ಹೊಂದಿರುವ ಚಿತ್ರದುರ್ಗ ಜಿಲ್ಲೆಗೆ ರಾಜ್ಯದ ಯಾವ ಜಿಲ್ಲೆಗೂ ಇಲ್ಲದಂತ ವೈಶಿಷ್ಠ್ಯತೆಯಿದೆಬೆಳಗು ಭಾವ, ಕಲಿಕೆಯಲ್ಲಿ ಗುರುವರ್ಯರು ಬದಲಾಗಬಹುದು ಗುರಿ ಬದಲಾಗದಿರಲಿಔಷಧ ಮಾರಾಟ ಜಾಲದಲ್ಲಿ ನಡೆಯುತ್ತಿರುವ ಬೃಹತ್ ದರ ಲೂಟಿನೈಸ್ ರಸ್ತೆ ಸಂತ್ರಸ್ತ 50 ಹಳ್ಳಿಗಳ ಜನರಿಗೆ ಭೂಮಿ ವಾಪಸ್ ನೀಡಿ: ಹೆಚ್.ಡಿ. ಕುಮಾರಸ್ವಾಮಿ