ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ರಾಜಸ್ಥಾನದ ಜೈಪುರದಲ್ಲಿ ನಡೆಯಲಿರುವ 51ನೇ ರಾಷ್ಟ್ರೀಯ ಸಬ್ ಜೂನಿಯರ್ ಮತ್ತು ಜೂನಿಯರ್ ಯೋಗಾಸನ ಚಾಂಪಿಯನ್ಶಿಪ್- 2026ಗೆ ಕರ್ನಾಟಕ ರಾಜ್ಯ ತಂಡಕ್ಕೆ ಆಯ್ಕೆಯಾಗಿರುವ ದೊಡ್ಡಬಳ್ಳಾಪುರ ನಿಸರ್ಗ ಯೋಗ ಕೇಂದ್ರದ 8 ರಿಂದ 10ವರ್ಷದ ಬಾಲಕ ವಿಭಾಗದಲ್ಲಿ ಡಿ.ಎಂ. ಆರ್ಯ,ಕೆ.ಎನ್. ಋತ್ವಿಕ್.
ಬಾಲಕಿರ ವಿಭಾಗದಲ್ಲಿ ಕೆ. ಸಾನ್ವಿ, ಎಂ.ಎಚ್. ಹನಿಕಾ, ಬಿ.ಪಿ.ಸಾನ್ವಿತ
10 ರಿಂದ12 ವರ್ಷದ ಬಾಲಕರ ವಿಭಾಗ ದಲ್ಲಿ ಎಸ್. ಯಶ್ವಿನ್
ಬಾಲಕಿಯರ ಭಾಗದಲ್ಲಿ ಎಸ್.ಅಪೂರ್ವ, ಎನ್ ಖುಷಿ ಪ್ರಿಯ.
12 ರಿಂದ 14 ವರ್ಷದ ಬಾಲಕರ ವಿಭಾಗದಲ್ಲಿJ.ಸಿ. ವೇದಿಕ್ ಶೆಟ್ಟಿ, S.ಕುಶಲ್
ಬಾಲಕಿಯರ ವಿಭಾಗದಲ್ಲಿ ಹೆಚ್ .ಆರ್. ಗೌತಮಿ, ಕೆ.ಎಮ್.ಹಿತಾಶ್ರೀ.
14 ರಿಂದ 16 ವರ್ಷದ ಬಾಲಕರ ವಿಭಾಗದಲ್ಲಿ ಪಿ. ಎಸ್.ಶಶಾಂಕ್. 16 ರಿಂದ 18 ವರ್ಷದ ಬಾಲಕಿಯರ ವಿಭಾಗದಲ್ಲಿ ಅರದೇಶನಹಳ್ಳಿಯ ಆರ್.ಅರ್ಪಿತ ಆಯ್ಕೆಯಾಗಿದ್ದು ರಾಷ್ಟ್ರೀಯ ಸ್ಪರ್ಧೆಗೆ ತೆರಳುತ್ತಿರುವ ಯೋಗಪಟಗಳಿಗೆ
ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಮೆಚೂರ್ ಯೋಗಾ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷರಾದಂತಹ ಪ್ರೊಫೆಸರ್ ಎಂ.ಜಿ. ಅಮರ್ನಾಥ್, ನಿಸರ್ಗ ಯೋಗ ಕೇಂದ್ರದ ಅಧ್ಯಕ್ಷೆ ಶ್ರೀಮತಿ ಎಂ.ಎ.ಲಕ್ಷ್ಮಿ ರವೀಂದ್ರ, ಕರ್ನಾಟಕ ರಾಜ್ಯ ಅಮೆಚುರ್ ಯೋಗ ಸ್ಪೋರ್ಟ್ಸ್ಅಸೋಸಿಯೇಷನ್ ಉಪಾಧ್ಯಕ್ಷ ಕೆ.ಆರ್. ಶ್ಯಾಮ ಸುಂದರ್ ಮತ್ತು ಕಾರ್ಯದರ್ಶಿಗಳಾದ ಎ.ನಟರಾಜ (ಯೋಗ) ಮತ್ತು ನಿಸರ್ಗ ಯೋಗ ಕೇಂದ್ರದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಪದಾಧಿಕಾರಿಗಳು ಸ್ಪರ್ದಿಗಳಿಗೆ ಶುಭವನ್ನು ಕೋರಿದ್ದಾರೆ.




