LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮಕ್ಕಳ, ಮಹಿಳೆಯರ ನೈರ್ಮಲ್ಯ ಅರಿವು ಪ್ರಮುಖ ಗುರಿ

Advertisement
Advertisement

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕದ ಶಾಲೆಗಳು
, ಕಾಲೇಜುಗಳು, ಸ್ವಸಹಾಯ ಸಂಘಗಳು ಹಾಗೂ ಆಶಾ ಕಾರ್ಯಕರ್ತೆಯರಲ್ಲಿ ಮುಟ್ಟಿನ ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುವುದು ಯೋಜನೆಯ ಪ್ರಮುಖ ಗುರಿಯಾಗಿದೆ.  ಕಂಪನಿಯ ಸಾಮಾಜಿಕ ಹೊಣೆಗಾರಿಕೆಯ ಭಾಗವಾಗಿ ಸ್ಯಾನಿಟರಿ ಪ್ಯಾಡ್‌, ನೈರ್ಮಲ್ಯ ಕಿಟ್‌ಗಳನ್ನು ವಿತರಿಸಲಾಗುವುದು ಎಂದು ಟಿಜೆಡ್ ಎಂಒ ಇಂಡಿಯಾ ಸೌತ್ ಪ್ರೈವೇಟ್ ಲಿಮಿಟೆಡ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಅಲೀನಾ ಪೊಸ್ಟುನ್ನಿ ಹೇಳಿದರು.

ಕರ್ನಾಟಕ ಸಮಾಜ ಸೇವಾ ಟ್ರಸ್ಟ್  ಹಾಗೂ ಟಿಜೆಡ್ ಎಂಒ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಸಹಯೋಗದಲ್ಲಿ ಕೆಎಸ್ಎಸ್ ಟಿ ಮಕ್ಕಳ ಮತ್ತು ಮಹಿಳಾ ಯೋಜನೆ ಅಡಿಯಲ್ಲಿ ನಡೆದ ನೈರ್ಮಲ್ಯ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮಕ್ಕಳ ಹಾಗೂ ಮಹಿಳೆಯರ ಆರೋಗ್ಯ ಮತ್ತು ನೈರ್ಮಲ್ಯ ಜಾಗೃತಿಯನ್ನು ಉತ್ತೇಜಿಸುವ ಉದ್ದೇಶ ಹೊಂದಲಾಗಿದೆ ಎಂದರು.

 ಶಾಲಾ ಮಕ್ಕಳು ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ನೈರ್ಮಲ್ಯದ ಮಹತ್ವ, ಅದರ ಪ್ರಯೋಜನಗಳು ಹಾಗೂ ನಿರ್ಲಕ್ಷ್ಯದಿಂದ ಉಂಟಾಗುವ ಸಮಸ್ಯೆಗಳ ಕುರಿತು ಶ್ರೀ ಮಾತಾ ಮಹಿಳಾ ಟ್ರಸ್ಟ್ ಅಧ್ಯಕ್ಷೆ ವೀಣಾ ಪಿ. ವಿವರವಾಗಿ  ತಿಳಿಸಿದರು.

ಪೀಣ್ಯ ಕೈಗಾರಿಕಾ ಅಸೋಸಿಯೇಷನ್ ಅಧ್ಯಕ್ಷ ದಾನಪ್ಪ ಮಾತನಾಡಿ, ಸಂಸ್ಥೆ ಮತ್ತು ಕಂಪನಿಗಳು ತಮ್ಮ ಸಿಎಸ್ಆರ್  ನಿಧಿಯನ್ನು ಸಮರ್ಪಕವಾಗಿ ಬಳಸಿಕೊಂಡು ಸಾರ್ವಜನಿಕರ ಅಗತ್ಯಗಳಿಗೆ ಅನುಗುಣವಾಗಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸುವುದು ಅತ್ಯಂತ ಮಹತ್ವದ್ದಾಗಿದೆ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ಸಮಾಜ ಸೇವಾ ಟ್ರಸ್ಟ್‌ನ ಅಧ್ಯಕ್ಷ ಅರುಣ್ ಕುಮಾರ್ ಮಾತನಾಡಿ, ಟ್ರಸ್ಟ್ ಹಲವು ವರ್ಷಗಳಿಂದ ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿದಂತೆ ವಿವಿಧ ಸಾಮಾಜಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಸಾರ್ವಜನಿಕರ ಅಭಿವೃದ್ಧಿ ಹಾಗೂ ಶಿಕ್ಷಣಕ್ಕೆ ಆದ್ಯತೆ ನೀಡುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ ಎಂದರು.

ಈ ವೇಳೆ  ಕರ್ನಾಟಕ ಸಮಾಜ ಸೇವಾ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಮಂಜುನಾಥ್ ನಾಯಕ್,  ಬಸವ ಸೆಂಟರ್ ಆಫ್ ನಾರ್ತ್ ಅಮೆರಿಕ ಹಾಗೂ ಜ್ಞಾನ ಜ್ಯೋತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಶೈಲಕುಮಾರ್ ಹಾದಿಮನಿ,  ಜಯಕಿರಣ್ ಫೌಂಡೇಷನ್ ಅಧ್ಯಕ್ಷ ಕಿರಣ್ ಕುಮಾರ್, ಕಾಸ್ಸಿಯಾ ಕೌನ್ಸಿಲ್ ಸದಸ್ಯ ಆನಂದ್ ರಾವ್ ಸೇರಿ ಹಲವರು ಪಾಲ್ಗೊಂಡಿದ್ದರು.

 

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತುಂತರು ಮಳೆಯ ನಡುವೆ ಸಂಭ್ರಮದಿಂದ ನಡೆದ ಗಾಳಿಪಟ ಹಬ್ಬಆ.10 ರಂದು ಭಾರತ ಬಿಟ್ಟು ತೊಲಗಿ ಚಳುವಳಿ ಆಯೋಜನೆಶೀಬಾರ ಮಠದ ವನದಲ್ಲಿ ಇಂದು ಶ್ರಮದಾನ, ಶಿವಯೋಗ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮಜವಗೊಂಡನಹಳ್ಳಿಯಲ್ಲಿ ಕಾಮಗೇತಿ ಇಮ್ಮಡಿ ಚಿಕ್ಕಣ್ಣ ನಾಯಕರ ಆಡಳಿತಾವಧಿಯ ಲಿಪಿಗಲ್ಲು ಪತ್ತೆಪೊಲೀಸ್ ನೇಮಕಾತಿ ಪರೀಕ್ಷೆ ಕೆ.ಇ.ಎ ಮಾರ್ಗಸೂಚಿಗಳ ಪಾಲನೆ ಕಡ್ಡಾಯ-ಜಿಲ್ಲಾಧಿಕಾರಿ ಟಿ.ವೆಂಕಟೇಶ್ಅಡುಗೆ ತಯಾರಕ ಎಂ.ಮಹಮ್ಮದ್ ಚಮನ್ ಅವರಿಗೆ ಆತ್ಮೀಯ ಬಿಳ್ಕೋಡುಗೆನಿವೃತ್ತಿ, ವರ್ಗಾವಣೆ ಹೊಂದಿದ ಅಧಿಕಾರಿಗಳಿಗೆ ಬೀಳ್ಕೊಡುಗೆಬಬ್ಬೂರು ಫಾರಂನಲ್ಲಿ ರೈತರಿಗೆ ಸಮಗ್ರ ಕೃಷಿ ಪದ್ಧತಿ ಕುರಿತು ಮೂರು ದಿನಗಳ ವಸತಿಯುಕ್ತ ಉಚಿತ ತರಬೇತಿಸಂಗೀತ ಪ್ರೇಮಿಗಳ ಹೃದಯದಲ್ಲಿ ಎಸ್. ಜಾನಕಮ್ಮ ಶಾಶ್ವತ ಡಾ.ಕೆ.ಜೆ. ಕಾಂತರಾಜ್ಕ್ಷೇತ್ರ ಶಿಕ್ಷಣಾಧಿಕಾರಿ ಬೈಲಾಂಜಿನಪ್ಪ ನವರಿಗೆ ಬೀಳ್ಕೊಡುಗೆ