Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಕ್ರಮ ಸಂಬಂಧ.. ಅತಿಥಿ ಉಪನ್ಯಾಸಕಿಯ ಕೊಲೆ

Advertisement
Advertisement

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಮದುವೆಗೆ ನಿರಾಕರಿಸಿದಳೆಂಬ ಕಾರಣಕ್ಕೆ ಅತಿಥಿ ಉಪನ್ಯಾಸಕಿಯನ್ನು ಕೊಲೆ ಮಾಡಿ
, ಆರೋಪಿಯೂ ಆತ್ಮಹತ್ಯೆ ಮಾಡಿ ಕೊಂಡಿರುವ ಧಾರುಣ ಘಟನೆ ತಾಲ್ಲೂಕಿನ ಜಿಂಕೆಬಚ್ಚಹಳ್ಳಿಯಲ್ಲಿ ನಡೆದಿದೆ.

ಏನಿದು ಘಟನೆ? ದೇವನಹಳ್ಳಿಯ ಖಾಸಗಿ ಕಾಲೇಜು ಒಂದರಲ್ಲಿ ಅತಿಥಿ ಉಪನ್ಯಾಸಕಿ ಯಾಗಿದ್ದ ಸರೋಜಾ(40) ಹಾಗೂ ರಾಮಾಂಜಿ (45) ಎಂಬುವವರು ಕಳೆದ ಒಂದು ವರ್ಷದಿಂದ ಪರಿಚಯವಿದ್ದರು. ಸಾಮಾಜಿಕ ಜಾಲತಾಣದ ಮೂಲಕ ಶುರುವಾದ ಈ ಸ್ನೇಹ ನಂತರ ಅಕ್ರಮ ಸಂಬಂಧಕ್ಕೆ ತಿರುಗಿತ್ತು.

ಕೊಲೆಗೆ ಕಾರಣವೇನು? ತನ್ನ ಪತಿಯಿಂದ ದೂರವಾಗಿದ್ದ ಸರೋಜಾಳನ್ನು ಮದುವೆಯಾಗುವಂತೆ ರಾಮಾಂಜಿ ಒತ್ತಾಯಿಸುತ್ತಿದ್ದ. ಆದರೆ ಸರೋಜಾ ಇದಕ್ಕೆ ಒಪ್ಪಿರಲಿಲ್ಲ. ಇದರಿಂದ ಕೆರಳಿದ ರಾಮಾಂಜಿ, ಆಕೆಯನ್ನು ಲಾಂಗ್ ಡ್ರೈವ್‌ಗೆಂದು ಕರೆದೊಯ್ದು ಜಿಂಕೆಬಚ್ಚ ಹಳ್ಳಿಬಳಿ ಭೀಕರವಾಗಿ ಹತ್ಯೆಗೈದು ಸಾಕ್ಷ್ಯ ನಾಶಪಡಿಸಲು ಕಾರಿನಲ್ಲಿ ಆಕೆಯ ಶವವಿರಿಸಿ ಕಾರಿಗೆ ಬೆಂಕಿ ಹಚ್ಚಿದ್ದಾನೆ.

ಆರೋಪಿಯೂ ಅಂತ್ಯ: ಕೊಲೆ ಮಾಡಿ ಪರಾರಿಯಾಗಿದ್ದ ರಾಮಾಂಜಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಆದರೆ ಈ ನಡುವೆ ಆರೋಪಿ ರಾಮಾಂಜಿ ಕೂಡ ದೊಡ್ಡಬಳ್ಳಾಪುರ ಸಮೀಪ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಬೆಳಕಿಗೆ ಬಂದಿದೆ.

news_1778110726_2_705.webp

 

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಕ್ಷಣಿಕ ಆವೇಶ ಮತ್ತು ಅನೈತಿಕ ಸಂಬಂಧಗಳು ಹೇಗೆ ಎರಡು ಜೀವಗಳನ್ನು ಬಲಿ ಪಡೆಯುತ್ತವೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸೃಜನಶೀಲತೆ ಮತ್ತು ಪ್ರಭುತ್ವ: ಜೂನ್ 21ರಂದು ಒಂದು ದಿನದ ವಿಚಾರ ಸಂಕಿರಣ ಮತ್ತು ಕವಿಗೋಷ್ಠಿಪಾತಬಲ್ಲಪಲ್ಲಿ ನರಸಿಂಹಪ್ಪ ಜೆ. ರವರಿಗೆ ಪಿಎಚ್.ಡಿ ಪದವಿ ಪ್ರದಾನದುರ್ಗದ 'ಅಜ್ಜ' ಅಜರಾಮರ!ಪೊಲೀಸ್ ಮಹಾ ನಿರ್ದೇಶಕರಿಗೆ ಕೆಯುಡಬ್ಲೂಜೆ ದೂರು ಸಂಘದ ಹೆಸರಿನ ಲೆಟರ್ ಹೆಡ್ ದುರ್ಬಳಕೆ: ಕ್ರಮಕ್ಕೆ ಆಗ್ರಹಗ್ರಾಮೀಣ ಸಾಹಿತ್ಯದ ಕೊಂಡಿ, ಹಿರಿಯ ಪತ್ರಕರ್ತ ಜಿ.ಎಸ್. ಉಜ್ಜಿನಪ್ಪ ಇನ್ನಿಲ್ಲ​ಮೇಕೆದಾಟು ಯೋಜನೆ: ಮೈತ್ರಿ ರಾಜಕಾರಣಕ್ಕೆ ಕರ್ನಾಟಕದ ಹಿತಬಲಿ ನೀಡಿದ ಕಾಂಗ್ರೆಸ್‌; ಆರ್‌ ಅಶೋಕ್ ತೀವ್ರ ವಾಗ್ದಾಳಿ​ರಾಜ್ಯದಲ್ಲಿ ಇವಿ ಉತ್ಪಾದನಾ ಸಾಮರ್ಥ್ಯ ವಿಸ್ತರಣೆ: ಸಚಿವ ಎಂ.ಬಿ. ಪಾಟೀಲ್ ಜೊತೆ ರಿವರ್ ಮೊಬಿಲಿಟಿ ಸಿಇಒ ಚರ್ಚೆಧಾರ್ಮಿಕ ಕ್ಷೇತ್ರ ತಿರುಮಲಕ್ಕೆ ಭೇಟಿ ನೀಡಿ, ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದ ಡಿ ಕೆ ಶಿವಕುಮಾರ್ ರಾಜ್ಯದ ಹಿತಕ್ಕೆ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಪಕ್ಷಾತೀತ ಬೆಂಬಲ: ಡಿ.ಕೆ. ಶಿವಕುಮಾರ್ ಸಂತಸಹಣಬಲ, ತೋಳ್ಬಲದ ನಡುವೆಯೂ ಜೆಡಿಎಸ್‌ ರಕ್ಷಣೆ: ಕಾರ್ಯಕರ್ತರೇ ಪಕ್ಷದ ಜೀವಾಳ ಎಂದ ಹೆಚ್.ಡಿ. ಕುಮಾರಸ್ವಾಮಿ