Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

'ಜೀನ್' ಹೇಳಿಕೆ ವಿವಾದ: ಶಾಸಕ ರಂಗನಾಥ್‌ಗೆ ತಿರುಗೇಟು ನೀಡಿದ ನಿಖಿಲ್

ಚಂದ್ರವಳ್ಳಿ ನ್ಯೂಸ್, ​ರಾಮನಗರ/ಕುಣಿಗಲ್:
"ಯಾರ ವಿರುದ್ಧವೂ ವೈಯಕ್ತಿಕ ವಾಗ್ದಾಳಿ ನಡೆಸುವುದು ನನ್ನ ರಾಜಕೀಯ ಸಂಸ್ಕಾರವಲ್ಲ. 'ಜೀನ್' ಎಂಬ ಪದವನ್ನು ರಾಜಕೀಯ ವಿದ್ಯಮಾನಗಳ ಸಾಮಾನ್ಯ ಅರ್ಥದಲ್ಲಿ ಬಳಸಿದ್ದೇನೆಯೇ ಹೊರತು ವೈಯಕ್ತಿಕ ನಿಂದನೆಯ ಉದ್ದೇಶ ನನಗಿರಲಿಲ್ಲ," ಎಂದು ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಅವರು ಕುಣಿಗಲ್ ಶಾಸಕ ಡಾ. ಹೆಚ್.ಡಿ. ರಂಗನಾಥ್ ಅವರಿಗೆ ಸ್ಪಷ್ಟನೆ ನೀಡಿದ್ದಾರೆ.

​ರಾಮನಗರದಲ್ಲಿ ನಡೆದ ಸಾಮೂಹಿಕ SIR ಅರ್ಜಿ ವಿತರಣೆ ಹಾಗೂ ಕುಣಿಗಲ್‌ನ ಬೂತ್ ಸಂಖ್ಯೆ 19 ರ ವಿದ್ಯಮಾನಗಳಿಗೆ ಹೋಲಿಸಿ ತಾನು ಆ ಮಾತುಗಳನ್ನಾಡಿದ್ದಾಗಿ ಹೇಳಿರುವ ನಿಖಿಲ್, ಇದೇ ವೇಳೆ ಕಾಂಗ್ರೆಸ್ ನಾಯಕರ ಇಬ್ಬಂದಿ ನಿಲುವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

Advertisement

​ಕಾಂಗ್ರೆಸ್‌ನ ಇಬ್ಬಂದಿ ರಾಜಕಾರಣಕ್ಕೆ ಪ್ರಶ್ನೆ:
​ಶಾಸಕ ರಂಗನಾಥ್ ಅವರ ಆಕ್ರೋಶವನ್ನು ಪ್ರಶ್ನಿಸಿರುವ ನಿಖಿಲ್ ಕುಮಾರಸ್ವಾಮಿ, ಕಾಂಗ್ರೆಸ್ ನಾಯಕರ ನಡೆಗೆ ಪ್ರತಿಯಾಗಿ ಕೆಲವು ನೇರ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

​ಕೀಳು ಮಟ್ಟದ ವೈಯಕ್ತಿಕ ದಾಳಿ: "ಹಿಂದೆ ಜೆಡಿಎಸ್‌ನಲ್ಲಿದ್ದು, ಇಂದು ಕಾಂಗ್ರೆಸ್ ಶಾಸಕರಾಗಿರುವವರು ನನ್ನ ತಂದೆ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ದಿನನಿತ್ಯ ಅತ್ಯಂತ ಕೀಳು ಮಟ್ಟದ ವೈಯಕ್ತಿಕ ದಾಳಿ ಮಾಡುತ್ತಿರುವಾಗ ನಿಮ್ಮ ಈ ಆಕ್ರೋಶ, ಕಳಕಳಿ ಎಲ್ಲಿ ಹೋಗಿತ್ತು?" ಎಂದು ಪ್ರಶ್ನಿಸಿದ್ದಾರೆ.

​'ಖಬರ್ದಾರ್' ಧಮಕಿಗೆ ಮೌನವೇಕೆ?: ಕುಮಾರಣ್ಣನವರ ಒಟ್ಟು ರಾಜಕೀಯ ಅನುಭವಕ್ಕಿಂತಲೂ ಕಡಿಮೆ ವಯಸ್ಸಿನ ಕಾಂಗ್ರೆಸ್ ಶಾಸಕರೊಬ್ಬರು ಬಹಿರಂಗವಾಗಿ ‘ಖಬರ್ದಾರ್ ಕುಮಾರಣ್ಣ’ ಎಂದು ಧಮಕಿ ಹಾಕಿದಾಗ ರಂಗನಾಥ್ ಅವರು ಏಕೆ ಧ್ವನಿ ಎತ್ತಲಿಲ್ಲ ಎಂದು ನಿಖಿಲ್ ಆಕ್ಷೇಪಿಸಿದ್ದಾರೆ. ಅಂದು ಧ್ವನಿ ಎತ್ತಿದ್ದರೆ ಇಂದಿನ ನಿಮ್ಮ ನಿಲುವನ್ನು ಗೌರವಿಸಬಹುದಿತ್ತು ಎಂದು ಅವರು ಹೇಳಿದ್ದಾರೆ.

​"ಹೆಚ್.ಡಿ. ದೇವೇಗೌಡರ ರಾಜಕಾರಣ ಹಾಗೂ ಆದರ್ಶಗಳನ್ನು ಹತ್ತಿರದಿಂದ ಕಂಡು ಬೆಳೆದವನು ನಾನು. ಅಧಿಕಾರಕ್ಕಾಗಿ ಇಂತಹ ಇಬ್ಬಂದಿ ರಾಜಕಾರಣ ಮಾಡುವುದು ಯಾರಿಗೂ ಶೋಭೆ ತರುವುದಿಲ್ಲ. ಇನ್ಮುಂದೆಯಾದರೂ ವೈಯಕ್ತಿಕ ಕೆಸರೆರಚಾಟ, ದ್ವೇಷದ ರಾಜಕಾರಣವನ್ನು ಬದಿಗಿಟ್ಟು, ಜನರ ನೈಜ ಸಮಸ್ಯೆಗಳ ಪರವಾಗಿ ಒಟ್ಟಾಗಿ ಹೋರಾಡೋಣ."
ನಿಖಿಲ್ ಕುಮಾರಸ್ವಾಮಿ.

​ ವೈಯಕ್ತಿಕ ಕೆಸರೆರಚಾಟಕ್ಕೆ ಆಸ್ಪದ ನೀಡದೆ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳ ಮೇಲೆ ರಾಜಕಾರಣ ಮಾಡೋಣ ಎಂದು ನಿಖಿಲ್ ಕುಮಾರಸ್ವಾಮಿ ಅವರು ಶಾಸಕ ರಂಗನಾಥ್ ಅವರಿಗೆ ಹಿತವಚನ ಹೇಳುವ ಮೂಲಕ ವಿವಾದಕ್ಕೆ ರಾಜತಾಂತ್ರಿಕ ತಿರುವು ನೀಡಿದ್ದಾರೆ.

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುಖ್ಯಮಂತ್ರಿಯವರ ತಾಂತ್ರಿಕ ಸಲಹೆಗಾರರಾಗಿ ನಿವೃತ್ತ ಕಾರ್ಯದರ್ಶಿ ಡಾ. ಕೆ. ಜೈಪ್ರಕಾಶ್ ನೇಮಕಜೆಎನ್‌ಯು ಪ್ರೊಫೆಸರ್ ಹಾಗೂ ಕಾಂಗ್ರೆಸ್ ಸಂಸದರಿಂದ ಲೈಂಗಿಕ ಕಿರುಕುಳ ಆರೋಪ, ಸೇವೆಯಿಂದ ವಜಾಆರ್‌ಬಿಐ ಬಿಗ್ ಶಾಕ್: ರೆಪೋ ದರ ಏರಿಕೆಯಿಂದ ಸಾಲಗಾರರಿಗೆ ಹೆಚ್ಚಳವಾದ ಇಎಂಐ ಬರೆ!ಎಸ್‌ಐಆರ್ ರದ್ದುಪಡಿಸುವಂತೆ ಜನತಾ ನ್ಯಾಯಾಲಯ ಸಮಾವೇಶ: ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹ10 ಸಚಿವರ ವಿರುದ್ಧ ಸ್ಟಿಂಗ್ ಆಪರೇಷನ್ ಸುಪಾರಿ - ಶಾಸಕ ಗಣಿಗ ರವಿ ಸ್ಫೋಟಕ ಪೆನ್‌ಡ್ರೈವ್ ಬಾಂಬ್!ಸಚಿವರಿಗೆ ಬಲೆ ಬೀಳಿಸಲು ಯತ್ನ: ಸಿಎಂ ಎಚ್ಚರಿಕೆ ನೀಡಿದ್ದಾರೆ ಎಂದ ಸತೀಶ್ ಜಾರಕಿಹೊಳಿಕೇಂದ್ರದೊಂದಿಗೆ ಜಿಎಸ್‌ಟಿ ಸಭೆ: ರಾಜ್ಯದ ಬಾಕಿ ಹಣದ ಕುರಿತು 'ಸಿಹಿ ಸುದ್ದಿ' ನೀಡಿದ ಸಿಎಂ ಡಿ.ಕೆ ಶಿವಕುಮಾರ್ ಸುಳಿವು!ಪ್ರಜ್ವಲ್ ರೇವಣ್ಣ ಜೈಲಿನಲ್ಲಿ ಮೊಬೈಲ್ ಪತ್ತೆ ಪ್ರಕರಣ: ಹಿಂಡಲಗಾ ಜೈಲಿಗೆ ಸ್ಥಳಾಂತರಪ್ರತಿಭಟನೆ ಹೆಸರಲ್ಲಿ ಎಲ್ಲವನ್ನೂ ಬಂದ್ ಮಾಡಲು ಆಗದು: ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್ದಾವಣಗೆರೆಯಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ವಕೀಲರ ಪಟ್ಟು: ಮಧ್ಯಕರ್ನಾಟಕದಲ್ಲಿ ತೀವ್ರಗೊಂಡ ಹೋರಾಟ