Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಾಹಿತಿ, ಪತ್ರಕರ್ತ ಜಿ.ಎಸ್. ಉಜ್ಜಿನಪ್ಪ ಸಮಾಜಮುಖಿ ಸೇವೆ ಅಜರಾಮರ: ಡಾ. ಡಿ. ಧರಣೇಂದ್ರಯ್ಯ

Advertisement
Advertisement

ಚಂದ್ರವಳ್ಳಿ ನ್ಯೂಸ್, ​ಹಿರಿಯೂರು:
"ಚಿತ್ರದುರ್ಗ ಜಿಲ್ಲೆಯ ಪ್ರಸಿದ್ಧ ಸಾಹಿತಿ ಹಾಗೂ ಹಿರಿಯ ಪತ್ರಕರ್ತರಾದ ಜಿ.ಎಸ್. ಉಜ್ಜಿನಪ್ಪನವರು ಸಾಮಾಜಿಕ ಬದ್ಧತೆ ಹಾಗೂ ಪ್ರಾಮಾಣಿಕತೆಗೆ ಒತ್ತು ಕೊಟ್ಟು, ಪ್ರಗತಿಪರ ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ಇಡೀ ಸಮಾಜಕ್ಕೆ ಆಸ್ತಿಯಾಗಿದ್ದರು," ಎಂದು ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ. ಡಿ. ಧರಣೇಂದ್ರಯ್ಯ ಅಭಿಪ್ರಾಯಪಟ್ಟರು.

​ಪಟ್ಟಣದ ಸರ್ಕಾರಿ ನಿವೃತ್ತ ತಾಲೂಕು ನೌಕರರ ಸಂಘದ ಆವರಣದಲ್ಲಿ ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಘಟಕ, ತಾಲೂಕು ಮಕ್ಕಳ ಸಾಹಿತ್ಯ ವೇದಿಕೆ ಹಾಗೂ ಕಳವಿಭಾಗಿ ಶ್ರೀ ರಂಗನಾಥ ಸ್ವಾಮಿ ಸಾಂಸ್ಕೃತಿಕ ಕಲಾಸಂಘ ಸಕ್ಕರ ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಸಾಹಿತಿ, ಪತ್ರಕರ್ತ ಜಿ.ಎಸ್. ಉಜ್ಜಿನಪ್ಪ ಹಾಗೂ ನಿವೃತ್ತ ಮುಖ್ಯ ಶಿಕ್ಷಕ ಸಿ.ಆರ್. ಏಕಾಂತಪ್ಪ ಇವರುಗಳ ನುಡಿ ನಮನಕಾರ್ಯಕ್ರಮದಲ್ಲಿ ಅವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

​40 ವರ್ಷಗಳ ಪತ್ರಿಕೋದ್ಯಮ, 16ಕ್ಕೂ ಹೆಚ್ಚು ಕೃತಿಗಳ ಕೊಡುಗೆ!:
​ಡಾ. ಧರಣೇಂದ್ರಯ್ಯ ಅವರು ಜಿ.ಎಸ್. ಉಜ್ಜಿನಪ್ಪ ಅವರ ಸಾಧನೆಯನ್ನು ಸ್ಮರಿಸುತ್ತಾ ಹೀಗೆ ಹೇಳಿದರು:

​"ಜಿ.ಎಸ್. ಉಜ್ಜಿನಪ್ಪನವರು ಪ್ರೀತಿ, ವಾತ್ಸಲ್ಯ ಹಾಗೂ ಮಾನವೀಯ ಮೌಲ್ಯಗಳ ಸಾಕಾರ ಮೂರ್ತಿಯಾಗಿದ್ದರು. ತಾಲೂಕಿನ ಗೌನಹಳ್ಳಿ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿದ ಇವರು, ಜಯಲಕ್ಷ್ಮಿ ಮಿಲ್‌ನಲ್ಲಿ ಕಾರ್ಮಿಕರಾಗಿ ಬದುಕು ಆರಂಭಿಸಿದರು. ನಂತರ ಲೋಕವಾಣಿ ಪತ್ರಿಕೆಯ ವರದಿಗಾರರಾಗಿ, ಲಂಕೇಶ್ ಪತ್ರಿಕೆಯ ಏಜೆನ್ಸಿಯಾಗಿ ಹಾಗೂ 'ಟೈಮ್ಸ್ ಆಫ್ ಇಂಡಿಯಾ' ಪತ್ರಿಕೆಯ ಜಿಲ್ಲಾ ವರದಿಗಾರರಾಗಿ 40 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದರು."

​ಸಾಹಿತ್ಯ ಕೊಡುಗೆ: ಇವರು ಕಥೆ, ಕಾದಂಬರಿ, ಸಣ್ಣ ಕಥೆ, ವ್ಯಕ್ತಿಚಿತ್ರ ಸೇರಿದಂತೆ 16ಕ್ಕೂ ಹೆಚ್ಚು ಕೃತಿಗಳನ್ನು ನಾಡಿಗೆ ನೀಡಿದ್ದಾರೆ. ನೆನಪೆಂಬ ನಿಧಿ’, ‘ಹಬ್ಬಿದ ಮೇಲೆ ಮಧ್ಯದೊಳಗೆ’, ‘ದಾರಿಗೆ ಜೊತೆ ಇಲ್ಲ’, ‘ಗೌನಳ್ಳಿ ಎಂಬ ಗ್ರಾಮ ಭಾರತ’, ‘ಗೌನಳ್ಳರು’, ‘ಎ. ಭೀಮಪ್ಪ ನಾಯಕಇವರ ಪ್ರಮುಖ ಕೃತಿಗಳಾಗಿವೆ.

​ಅಂತರರಾಷ್ಟ್ರೀಯ ಮೆರಗು: ಇವರು ಬರೆದ ಎತ್ತಪ್ಪ ಮತ್ತು ಜುಂಜಪ್ಪಕೃತಿಗಳು ಇಂಗ್ಲಿಷ್‌ಗೆ ಅನುವಾದಗೊಂಡು ಆ ಸಾಹಿತ್ಯ ಕ್ಷೇತ್ರಕ್ಕೆ ಹೊಸ ಮೆರಗು ತಂದುಕೊಟ್ಟಿವೆ.

​ಮಾರ್ಗದರ್ಶಕತ್ವ: ಚಿತ್ರದುರ್ಗದ ಮುರುಘ ಮಠದ ಒಡನಾಡಿಯಾಗಿ 25 ವರ್ಷ ಸೇವೆ ಸಲ್ಲಿಸಿದ್ದ ಇವರು, ಪಿಎಚ್‌.ಡಿ ಸಂಶೋಧಕರಿಗೆ, ಕಿರಿಯ ಪತ್ರಕರ್ತರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸದಾ ಮಾರ್ಗದರ್ಶಕರಾಗಿದ್ದರು.

​ಶಿಕ್ಷಣ ಕ್ಷೇತ್ರಕ್ಕೆ ಸಿ.ಆರ್. ಏಕಾಂತಪ್ಪನವರ ಸೇವೆ ಅನನ್ಯ:
​ನಿವೃತ್ತ ಮುಖ್ಯಶಿಕ್ಷಕಿ ಟಿ. ಯಮುನಾ ಅವರು ಮಾತನಾಡಿ, ನಿವೃತ್ತ ಮುಖ್ಯ ಶಿಕ್ಷಕ ಸಿ.ಆರ್. ಏಕಾಂತಪ್ಪನವರ ಬದುಕಿನ ಘಟನೆಗಳನ್ನು ಸ್ಮರಿಸಿದರು.

​ಏಕಾಂತಪ್ಪನವರು ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ ನೆಚ್ಚಿನ ಮಾರ್ಗದರ್ಶಕರಾಗಿದ್ದರು.

​ಕರ್ನಾಟಕ ಜಾನಪದ ಪರಿಷತ್ತು, ಮಕ್ಕಳ ಸಾಹಿತ್ಯ ವೇದಿಕೆ ಹಾಗೂ ನಿವೃತ್ತ ನೌಕರರ ಸಂಘದಲ್ಲಿ ಸಕ್ರಿಯರಾಗಿದ್ದರು.

​ಪ್ರತಿ ವರ್ಷ ಬಡ ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕ, ಸಮವಸ್ತ್ರ ಹಾಗೂ ನೋಟು ಪುಸ್ತಕಗಳನ್ನು ವಿತರಿಸುತ್ತಾ, ಶಿಕ್ಷಕರ ಸಮಸ್ಯೆಗಳಿಗೆ ಸದಾ ಸ್ಪಂದಿಸುವ ಮೂಲಕ ನಿರಂತರ ಸಮಾಜ ಸೇವೆಯಲ್ಲಿ ತೊಡಗಿದ್ದರು.

​​ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ಕಾರಿ ನಿವೃತ್ತ ತಾಲೂಕು ನೌಕರರ ಸಂಘದ ಉಪಾಧ್ಯಕ್ಷ ಜಿ. ಏಕಾಂತಪ್ಪ ವಹಿಸಿದ್ದರು.

​ವೇದಿಕೆಯಲ್ಲಿ ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷ ಎಸ್.ಜಿ. ರಂಗಸ್ವಾಮಿ ಸಕ್ಕರ, ತಾಲೂಕು ಮಕ್ಕಳ ಸಾಹಿತ್ಯ ವೇದಿಕೆ ಅಧ್ಯಕ್ಷ ಜೆ. ನಿಜಲಿಂಗಪ್ಪ, ಕಸಾಪ ಮಾಜಿ ಅಧ್ಯಕ್ಷ ಹರ್ತಿಕೋಟಿ ಮಹಾಸ್ವಾಮಿ, ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷೆ ಎನ್. ಯಶೋದಮ್ಮ, ಕಾರ್ಯದರ್ಶಿ ಕೆ. ಗುರುಸಿದ್ದಪ್ಪ ಉಪಸ್ಥಿತರಿದ್ದರು.

​ಅಲ್ಲದೆ, ಜಿ.ಎಸ್. ಉಜ್ಜಿನಪ್ಪನವರ ಸಹೋದರ ಜಿ.ಎಸ್. ಬಸವರಾಜ್, ಮಗಳು ಜಿ.ಯು. ಹೇಮಲತಾ, ಸೊಸೆ ಸಿ. ಮಂಜುಳಾ ಹಾಗೂ ಪ್ರಮುಖರಾದ ಎಂ.ಬಿ. ಲಿಂಗಪ್ಪ, ಎಚ್.ಎಸ್. ಚಂದ್ರವದನ, ಎಂ.ವಿ. ನಾಗರತ್ನಮ್ಮ, ರಾಧಿಕಾ, ಸರೋಜಮ್ಮ, ನರಸಿಂಹಯ್ಯ, ಶಂಭುಲಿಂಗಪ್ಪ, ಲಕ್ಷ್ಮಣಪ್ಪ, ತಿಪ್ಪೇಸ್ವಾಮಿ, ಶಾಂತಮ್ಮ ಸೇರಿದಂತೆ ಹಲವರು ಭಾಗವಹಿಸಿ ನುಡಿ ನಮನ ಸಲ್ಲಿಸಿದರು.

 

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.