ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರು / ಭಕ್ತಾಧಿಗಳ ಅನುಕೂಲಕ್ಕಾಗಿ ನವೆಂಬರ್ 29 ರಿಂದ
ಹೊಸದಾಗಿ ಬೆಂಗಳೂರು - ನೀಲಕ್ಕಲ್ (ಪಂಪಾ-ಶಬರಿಮಲೈ) ಮಾರ್ಗದಲ್ಲಿ ವೋಲ್ವೋ ವಾಹನವನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ.
ವಾಹನವು ಬೆಂಗಳೂರು ಶಾಂತಿನಗರ ಬಸ್ ನಿಲ್ದಾಣದಿಂದ ಅಪರಾಹ್ನ 1.50 ಗಂಟೆಗೆ ಹೊರಟು ನೀಲಕ್ಕಲ್ (ಪಂಪಾ - ಶಬರಿಮಲೈ) ಗೆ ಮರುದಿನ ಬೆಳಗ್ಗೆ 6.45 ಗಂಟೆಗೆ ತಲುಪಲಿದೆ.
ಅದೇ ರೀತಿ ವೇಳಾಪಟ್ಟಿಯಂತೆ ಕಾರ್ಯಾಚರಣೆ ಮಾಡಲಾಗುವುದು. ಅದೇ ರೀತಿ ನೀಲಕ್ಕಲ್ (ಪಂಪಾ-ಶಬರಿಮಲೈ) ನಿಂದ ಸಂಜೆ 6.00 ಗಂಟೆಗೆ ಹೊರಟು ಬೆಂಗಳೂರು ಶಾಂತಿನಗರ ಬಸ್ ನಿಲ್ದಾಣಕ್ಕೆ ಮರುದಿನ ಬೆಳಗ್ಗೆ 10.00 ಗಂಟೆಗೆ ತಲುಪಲಿದೆ.
ವಯಸ್ಕರಿಗೆ ಪ್ರಯಾಣದರ ರೂ. 1750 ನಿಗದಿಪಡಿಸಿದೆ. ಸಾರ್ವಜನಿಕ ಪ್ರಯಾಣಿಕರು / ಭಕ್ತಾಧಿಗಳು ಇದರ ಸದುಪಯೋಗಪಡೆದುಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.


