Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಯಾಗಲಿ

Advertisement
Advertisement

ಚಂದ್ರವಳ್ಳಿ ನ್ಯೂಸ್, ​ಚಿತ್ರದುರ್ಗ :
ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆಯಾಗುವುದಾದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆರವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವಂತೆ ದಲಿತ ಛಲವಾದಿ ಮಹಾಸಭಾ ಕರ್ನಾಟಕದ ರಾಜ್ಯಾಧ್ಯಕ್ಷ ಹೆಚ್.ಕೆ.ಬಸವರಾಜ್ ಹೈಕಮಾಂಡನ್ನು ಒತ್ತಾಯಿಸಿದರು.

ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅರವತ್ತು ವರ್ಷಗಳಿಂದಲೂ ಮಲ್ಲಿಕಾರ್ಜುನ ಖರ್ಗೆರವರು ಕಾಂಗ್ರೆಸ್‌ಗೆ ನಿಷ್ಟೆ, ಪ್ರಾಮಾಣಿಕತೆಯಿಂದಿದ್ದಾರೆ. ಇವರಿಗಿಂತಲು ಅನುಭವಿ ರಾಜಕಾರಣಿ ಕಾಂಗ್ರೆಸ್ ಪಕ್ಷಕ್ಕೆ ಬೇರೆ ಯಾರು ಸಿಗುವುದಿಲ್ಲ.

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡ ಮಲ್ಲಿಕಾರ್ಜುನ ಖರ್ಗೆ ಸಿ.ಎಂ. ಆಗುವುದಾದರೆ ನನಗೂ ಸಂತೋಷ ಎಂದು ಹೇಳಿದ್ದಾರೆ. ಇಂತಹ ಅವಕಾಶ ಮತ್ತೆ ಸಿಗುವುದಿಲ್ಲ. ಹಿಂದೆ ಮುಂದೆ ನೋಡದೆ ಧೈರ್ಯದಿಂದ ಹೊರಬನ್ನಿ ಇಲ್ಲವಾದಲ್ಲಿ ದಲಿತರ ಶಾಪಕ್ಕೆ ಗುರಿಯಾಗುತ್ತೀರ ಎಂದರು.

ಎಂಟು ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ.ಜಿ.ಪರಮೇಶ್ವರ್ ರಾಜ್ಯದಲ್ಲಿ ಎರಡು ಸಲ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಕಾರಣರಾಗಿದ್ದಾರೆ. ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ, ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆ.ಹೆಚ್.ಮುನಿಯಪ್ಪ, ಲೋಕೋಪಯೋಗಿ ಸಚಿವ ಸತೀಶ್‌ಜಾರಕಿಹೊಳಿ ಇವರುಗಳ ಪೈಕಿ ಯಾರನ್ನಾದರೂ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಲಿ.

ಮಲ್ಲಿಕಾರ್ಜುನ ಖರ್ಗೆರವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟರೆ ಎಲ್ಲರೂ ಒಪ್ಪುತ್ತಾರೆ. ಕಾಂಗ್ರೆಸ್‌ನಲ್ಲಿ ಖರ್ಗೆರವರಿಗೆ ಉತ್ತುಂಗ ಸ್ಥಾನ ಕೊಟ್ಟಿರಬಹುದು. ಆದರೆ ಸಂವಿಧಾನಾತ್ಮಕವಾಗಿ ನಿರ್ಣಾಯಕ ಸ್ಥಾನಮಾನಗಳನ್ನು ನೀಡಿದಾಗ ಮಾತ್ರ ಛಲವಾದಿ ಜನಾಂಗಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸಿದಂತಾಗುತ್ತದೆ. 

ಒಂದು ವೇಳೆ ಮಲ್ಲಿಕಾರ್ಜುನ ಖರ್ಗೆರವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡದಿದ್ದರೆ ಶೀಘ್ರದಲ್ಲಿಯೇ ಚಿತ್ರದುರ್ಗ ಇಲ್ಲವೇ ದಾವಣಗೆಯಲ್ಲಿ ಐದು ಲಕ್ಷಕ್ಕಿಂತ ಹೆಚ್ಚು ದಲಿತ ಸಮುದಾಯವನ್ನು ಸೇರಿಸಿ ಸಮಾವೇಶದ ಮೂಲಕ ನಮ್ಮ ಕೂಗನ್ನು ಕಾಂಗ್ರೆಸ್ ನಾಯಕರುಗಳಿಗೆ ಮುಟ್ಟಿಸುವುದರ ಜೊತೆಗೆ ಕಾಂಗ್ರೆಸ್ ಮೇಲಿಟ್ಟಿರುವ ನಿಷ್ಠೆಯನ್ನು ತೊರೆಯಬೇಕಾಗುತ್ತದೆಂದು ಎಚ್ಚರಿಸಿದರು.

ಛಲವಾದಿ ಸಮಾಜದ ಜಿಲ್ಲಾಧ್ಯಕ್ಷ ಹೆಚ್.ಸಿ.ನಿರಂಜನಮೂರ್ತಿ, ಮುಖಂಡರಾದ ಹೆಚ್.ಅಣ್ಣಪ್ಪಸ್ವಾಮಿ, ದಯಾನಂದ್, ಎಸ್.ಎನ್.ರವಿಕುಮಾರ್, ಶಿವಪ್ರಸಾದ್ ಎಸ್. ಜಯರಾಂ ಕೆ, ಚಂದ್ರಪ್ಪ, ಪ್ರದೀಪ್‌ಕುಮಾರ್, ನವೀನ್‌ಕುಮಾರ್ ಎಂ, ರಂಸ್ವಾಮಿ ಚಿಕ್ಕಪುರ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
"ಕೆಲವರ ಮಾತು ಕೇಳಿ ಬಿಡದಿ ಟೌನ್‌ಶಿಪ್ ಕೈಬಿಡಲ್ಲ": ಸಚಿವ ಯತೀಂದ್ರಬಿತ್ತನೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಲು ಸಿಎಂ ಶಿವಕುಮಾರ್ ಸೂಚನೆಮಹಿಳೆಯರಿಗೆ ಉಚಿತ 'ಸ್ಮಾರ್ಟ್ ಕಾರ್ಡ್'; ಶೀಘ್ರದಲ್ಲೇ ಅಂತಿಮ ರೂಪುರೇಶೆ ಎಂದ ಸಚಿವ ಬೈರತಿ ಸುರೇಶ್ವಿಧಾನ ಪರಿಷತ್ ಚುನಾವಣೆ: ಕ್ರಾಸ್ ವೋಟಿಂಗ್ ಭೀತಿ; ಬಿಡದಿ ರೆಸಾರ್ಟ್‌ಗೆ ಕಾಂಗ್ರೆಸ್ ಶಾಸಕರು ಶಿಫ್ಟ್!ಐಎಎಫ್ ಅಧಿಕಾರಿಯ ಪತ್ನಿ ಮೇಲೆ ಅತ್ಯಾಚಾರ; ಬಲವಂತದ ಮತಾಂತರಕ್ಕೆ ಯತ್ನ ಇಬ್ಬರ ಬಂಧನ"ಶ್ರೀರಾಮನೇ ಲೆಕ್ಕ ಕೊಡುವಾಗ ಆರ್‌ಎಸ್‌ಎಸ್ ಯಾಕೆ ಕೊಡಬಾರದು?": ಪ್ರಿಯಾಂಕ್ ಖರ್ಗೆ ನೇರ ಪ್ರಶ್ನೆದೂರು ದಾಖಲಾಗುವ ಮುನ್ನವೇ ವಚನಾನಂದ ಶ್ರೀಗೆ ನಿರೀಕ್ಷಣಾ ಜಾಮೀನು! ಹೈಕೋರ್ಟ್ ಆಘಾತನಗರಾಭಿವೃದ್ಧಿ ಜವಾಬ್ದಾರಿ ವಹಿಸಿಕೊಂಡ ಕೃಷ್ಣಬೈರೇಗೌಡ; ಮೊದಲ ಸಭೆಯಲ್ಲೇ ಅಧಿಕಾರಿಗಳಿಗೆ 'ರಾಕೆಟ್ ಸೈನ್ಸ್' ಕ್ಲಾಸ್!ಮಹಜರು ವೇಳೆ ಪೊಲೀಸರ ಮೇಲೆಯೇ ಹಲ್ಲೆ; ಕೊಲೆ ಆರೋಪಿ ಮಧು ಕಾಲಿಗೆ ಬಿದ್ದಿತು ಗುಂಡೇಟು!ರೌಡಿಪಟ್ಟಿಯಿಂದ ಸೈಲೆಂಟ್ ಸುನೀಲ, ಒಂಟೆ ರೋಹಿತ್ ಮುಕ್ತಿ? ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಪೊಲೀಸರ ಸಜ್ಜು!