Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಕೆಐಎಡಿಬಿ ರೈತರಿಗೆ ವೈಜ್ಞಾನಿಕ ಪರಿಹಾರ ಕೊಡಲಿ

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರ ತಾಲ್ಲೂಕಿನ
, ಕೊನಘಟ್ಟ, ಕೋಡಿಹಳ್ಳಿ, ನಾಗದೇನಹಳ್ಳಿ, ಆದಿನಾರಾಯಣ ಹೊಸಹಳ್ಳಿ ಗ್ರಾಮಗಳಲ್ಲಿ ರೈತರ ಕೃಷಿ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳುತ್ತಿರುವ ಕೆಐಎಡಿಬಿ ರೈತರಿಗೆ ವೈಜ್ಞಾನಿಕ ಪರಿಹಾರ ನೀಡುವಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವುದನ್ನು ವಿರೋಧಿಸಿ, ಸುಮಾರು 236 ದಿನಗಳಿಂದ ತಾಲೂಕಿನ ಕಡ್ಡಿಪುಡಿ ಕಾರ್ಖಾನೆ ರಸ್ತೆಯ ಕೊನಘಟ್ಟ ಸಮೀಪದ ಕಾಮನಬಂಡೆ ಬಳಿ ಅನಿರ್ದಿಷ್ಟಾವಧಿ ಧರಣಿಯನ್ನು ರೈತರು ಕೈಗೊಂಡಿದ್ದಾರೆ.

ಇಂದು ಗಣೇಶ ಹಬ್ಬ ಹಿನ್ನೆಲೆ, ಧರಣಿ ಸ್ಥಳದಲ್ಲೇ ಗಣಪತಿ ಮೂರ್ತಿಯನ್ನು ಪ್ರತಿಷ್ಟಾಪಿಸಿ ತಮಗೆ ಎದುರಾಗಿರುವ ವಿಘ್ನ ನಿವಾರಣೆ ಮಾಡುವಂತೆ ವಿಘ್ನ ನಿವಾರಕ ಗಣಪತಿಯ ಮೊರೆ ಹೋಗಿದ್ದಾರೆ.

ಜಮೀನು ವಶಪಡಿಸಿಕೊಳ್ಳುವ ಪ್ರದೇಶದಲ್ಲಿ ಭೂಮಿಯ ಬೆಲೆ ಎಕರೆಗೆ 3.5ಯಿಂದ 4 ಕೋಟಿ ರೂ.ವರೆಗೆ ಇದೆ. ಸರ್ಕಾರಿ ಬೆಲೆಯೇ 70 ಲಕ್ಷ ರೂ ವರೆಗೆ ಇದೆ. ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಭೂಮಿ ವಶ ಪಡಿಸಿಕೊಂಡರೆ ಆ ಭೂಮಿಗೆ ಪ್ರತಿ ಎಕರೆಗೆ 1:4 ಕೊಡಬೇಕು ಎಂಬ ನಿಯಮವಿದೆ. ಅದರಂತೆ ರೈತರ ಭೂಮಿಗೆ ಪ್ರತಿ ಎಕರೆಗೆ ಬೆಲೆ ನಿಗದಿ ಮಾಡಿದರೆ 2.70 ಕೋಟಿ ನೀಡಬೇಕಾಗುತ್ತದೆ. ಇದನ್ನು ಅನುಸರಿಸದೇ ಬಿಡುಗಾಸು ಕೊಟ್ಟು‌ನಮ್ಮಿಂದ ಭೂಮಿ‌ಕಬಳಿಸಲು ಮುಂದಾಗಿರುವುದು ಖಂಡನೀಯ. ಸೂಕ್ತ ಬೆಲೆ ನಿಗದಿ ಮಾಡುವವರೆಗೂ ನಮ್ಮ ಧರಣಿ ಮುಂದುವರಿಯುತ್ತದೆ ಎಂದು ಧರಣಿ‌ನಿರತ ರೈತ ರಾಮಾನಂಜಿನಪ್ಪ ಹೇಳಿದ್ದಾರೆ.

ಈಗ ನಡೆಯುತ್ತಿರುವ 971 ಎಕರೆ ಭೂಸ್ವಾಧೀನದಿಂದ ನಾಲ್ಕು ಗ್ರಾಮಗಳ 600 ಕುಟುಂಬಗಳು ಭೂಮಿ ಕಳೆದುಕೊಳ್ಳಲಿವೆ. ಫಲವತ್ತಾದ ಕೃಷಿ ಭೂಮಿ ಕಳೆದುಕೊಳ್ಳುತ್ತಿರುವ ರೈತರಿಗೆ ವೈಜ್ಞಾನಿಕ ಪರಿಹಾರವಾದರು ದೊರೆತರೆ ಬೇರೆಡೆ ನೆಲೆ ಕಂಡುಕೊಳ್ಳಲು ಸಹಕಾರಿಯಾಗಲಿದೆ. ಇಲ್ಲವಾದರೆ ಈ ಎಲ್ಲಾ ಕುಟುಂಬಗಳು ಕನಿಷ್ಠ ಬೆಲೆಗೆ ಭೂಮಿ ಕಳೆದುಕೊಂಡು ಬೀದಿಪಾಲಾಗಲಿವೆ ಎಂದರು.



ರೈತ ದೇಶದ ಅಭಿವೃದ್ಧಿಗಾಗಿ ತನ್ನ ಕರ್ಮ ಭೂಮಿ ಬಿಟ್ಟುಕೊಡುತ್ತಿದ್ದೇನೆ. ನೂರಾರು ದಿನಗಳ ಹೋರಾಟ ತಮಾಷೆಯಲ್ಲ. ಭೂಮಿ ಬಿಟ್ಟುಕೊಡುವುದು ರೈತನ ಬದುಕಿಗೆ ಕೊನೆಯ ಮೊಳೆ ಹೊಡೆದಂತೆ. ರೈತನಿಗೆ ಅನ್ಯಾಯ ಮಾಡಬಾರದು. ವೈಜ್ಞಾನಿಕ ಬೆಲೆ ನಿಗದಿ ಮಾಡಿ ಭೂಮಿ‌ಖರೀದಿಸಿ ಎಂದರು.

  

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹುಲಿಗುಂದಿ ಸಿದ್ದೇಶ್ವರಸ್ವಾಮಿಗೆ ಶ್ರಾವಣ ಮಾಸದ ವಿಶೇಷ ಪೂಜೆಕಣಿವೆಮಾರಮ್ಮ ದೇವಸ್ಥಾನವನ್ನು ಮುಜರಾಯಿಗೆ ಸೇರಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ರಕ್ಷಣಾಧಿಕಾರಿಗೆ ಮನವಿಹಜ್ ಯಾತ್ರಾರ್ಥಿಗಳಿಗೆ ಆರೋಗ್ಯ ತಪಾಸಣಾ ಶಿಬಿರಚಿಕ್ಕಮ್ಮನಹಟ್ಟಿ ಗ್ರಾಮದ ಯಶೋಧ ಕಣ್ಮರೆ: ಗುರುತು ಪತ್ತೆ ಮನವಿಗೌರಸಮುದ್ರ ಶ್ರೀ ಮಾರಮ್ಮ ಜಾತ್ರೆ: ಸೆ.14 ಮತ್ತು 15 ರಂದು ಮದ್ಯ ಮಾರಾಟ ನಿಷೇಧಸರ್ಕಾರಿ ಯೋಜನೆ ಹೆಸರಲ್ಲಿ ಖಾಸಗಿ ಫೈನಾನ್ಸ್ ವಂಚನೆ- ಎಂ.ಪಿ.ಪ್ರವೀಣ್ ಮನವಿಘಾಟಿ ಸುಬ್ರಮಣ್ಯದ ತೇರಿನ ಬೀದಿಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಶಿರವಾರ ಗ್ರಾಮದಲ್ಲಿ ಕೃಷಿ ಕೆಲಸದ ಅನುಭವ ಕಾರ್ಯಕ್ರಮಭದ್ರೆಗೆ ಗೋನೂರು ಕೆರೆ ಬಳಿ ಅದ್ದೂರಿ ಸ್ವಾಗತ, ಸಂಸದ, ಹಲವು ಮಠಾಧಿಪತಿಗಳು ಭಾಗಿಇಡಿ ದಾಳಿ: ಸತೀಶ್‌ ಜಾರಕಿಹೊಳಿ ಬೆಂಬಲಕ್ಕೆ ನಿಂತ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌