Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Traveling Tips

ಸವಿ ನೆನಪುಗಳು ಬೇಕು ಸವಿಯಲೀ ಬದುಕು

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸವಿ ನೆನಪುಗಳು ಬೇಕು ಸವಿಯಲೀ ಬದುಕು......
ಶಬ್ದ ಅಥವಾ ಧ್ವನಿ ಕ್ರಮಬದ್ಧತೆಯ -  ಶಿಸ್ತುಬದ್ಧತೆಯ  ತರಂಗಗಳನ್ನು ಸಂಗೀತ ಎಂದು ಗ್ರಹಿಸಬಹುದೇ
? ಅಥವಾ, ಆ ಶಬ್ದಗಳ ಸುಶ್ರಾವ್ಯತೆ ಮಾತ್ರ ಸಂಗೀತವೇ ? ಅಥವಾ, ಧ್ವನಿ ಮತ್ತು ವಾದ್ಯಗಳ ಸಮ್ಮಿಲನದ ಭಾಷೆಗೆ ಸಂಗೀತ ಎನ್ನಬಹುದೇ. ಅಥವಾ, ಸಾಹಿತ್ಯ ಧ್ವನಿ ವಾದ್ಯಗಳ ಮಿಲನದ ಪ್ರಕ್ರಿಯೆಯೇ ಸಂಗೀತವೇ.. ಅಥವಾ, ಧ್ವನಿಯ ಸ್ವರ ಲಯ ತಾಳಗಳ ರೂಪವೇ ಸಂಗೀತ ಸೃಷ್ಟಿಸುತ್ತದೆಯೇ.....

ಅದರ ನಿಜವಾದ ಅರ್ಥ ಏನೇ ಇರಲಿ ಮನುಷ್ಯ ಜೀವಿಯ ಬದುಕಿನಲ್ಲಿ ಅತಿಹೆಚ್ಚು ಆಕರ್ಷಕ ಧ್ವನಿ ಎಂದರೆ ಅದು ಸಾಮಾನ್ಯವಾಗಿ ಹಾಡುಗಳು ಎಂದು ಕರೆಯಲ್ಪಡುವ ಧ್ವನಿ ತರಂಗಗಳು.......

ಬಹುಶಃ ಹುಟ್ಟಿದ ಮಗುವಿನಿಂದ ವೃದ್ದರವರೆಗೆ ಒಂದಲ್ಲ ಒಂದು ರೀತಿಯ ಹಾಡುಗಳ ಮೋಹ ಅವರ ಮನಸ್ಸುಗಳ ಮೇಲೆ ಪ್ರಭಾವ ಬೀರುವುದನ್ನು ಕಾಣಬಹುದು......

ಕೇವಲ ಭಾರತ ದೇಶ ಮಾತ್ರವಲ್ಲ ಇಡೀ ಸೃಷ್ಟಿಯ ಮನುಷ್ಯ ಪ್ರಾಣಿಯ ಎಲ್ಲರಿಗೂ ಇದು ಅನ್ವಯಿಸುತ್ತದೆ. ಭಾಷೆಗಳನ್ನು ಮೀರಿ ಅನೇಕ ವೈವಿಧ್ಯಮಯ ಪ್ರಕಾರಗಳಲ್ಲಿ ಇದು ಅಸ್ತಿತ್ವದಲ್ಲಿದೆ.....

ಜನಪದವೇ ಇರಲಿ, ಪಾಶ್ಚಿಮಾತ್ಯವೇ ಇರಲಿ, ಮಧ್ಯಪ್ರಾಚ್ಯದ ಅಥವಾ ಆಫ್ರಿಕಾದ ಸಂಗೀತವೇ ಇರಲಿ ಒಟ್ಟಿನಲ್ಲಿ ಹಾಡುಗಳು ಮನುಷ್ಯ ಜೀವನದ ಅವಿಭಾಜ್ಯ ಅಂಗವಾಗಿದೆ. ಅದು ಎಲ್ಲಾ ಕಾಲಮಾನಗಳನ್ನು ಮೀರಿ ಬೆಳೆದಿದೆ......

ಆಧುನಿಕತೆ ಮತ್ತು ತಂತ್ರಜ್ಞಾನ ಬೆಳೆದಂತೆ ಮುಖ್ಯವಾಗಿ ಸಿನಿಮಾ ರಂಗದ ಅಭಿವೃದ್ಧಿಯೊಂದಿಗೆ ಈ ಕ್ಷಣದಲ್ಲಿ ಹಾಡುಗಳು ಉತ್ತುಂಗಕ್ಕೇರಿದೆ......

ಸಂಕೀರ್ಣ ಬದುಕಿನ ಜಂಜಡಗಳಿಂದ ನರಳುತ್ತಿರುವ ಮನುಷ್ಯ ಮನರಂಜನೆ ಅಥವಾ ಮನಸ್ಸುಗಳ ಪುನಶ್ಚೇತನಕ್ಕಾಗಿ ಸಂಗೀತದ ಮೊರೆ ಹೋಗುವುದು ಸಾಮಾನ್ಯವಾಗಿ ನಾವು‌ಗಮನಿಸಿದ್ದೇವೆ ಮತ್ತು ಅನುಭವಿಸಿದ್ದೇವೆ.......

ಸಪ್ತ ಸ್ವರಗಳ ಸಹಾಯದಿಂದ ನವರಸಗಳನ್ನು ಹೊಮ್ಮಿಸುವ ಸಂಗೀತ ನಮ್ಮ ಭಾವನೆಗಳೊಂದಿಗೆ ಅಲೆಅಲೆಯಾಗಿ ತೇಲುತ್ತಾ ಸಾಗುವ ಪರಿ ಅನನ್ಯ....

ಎಷ್ಟೋ ಪ್ರೇಮಿಗಳಿಗೆ, ಎಷೋ ವಿರಹಿಗಳಿಗೆ, ಎಷ್ಟೋ ನೋವುಂಡವರಿಗೆ, ಎಷ್ಟೋ ಕನಸುಗಾರರಿಗೆ, ಎಷ್ಟೋ ನಿರಾಶಾವಾದಿಗಳಿಗೆ, ಎಷ್ಟೋ ಹೃದಯಹೀನರಿಗೆ  ಒಂದು ಹಾಡು ಆ ಕ್ಷಣದ ಜೀವ ದ್ರವ್ಯ....

ಭಾವನೆಗಳು ಅಕ್ಷರ ರೂಪದ ಸಾಹಿತ್ಯವಾಗಿ ಮೂಡಿದ ಮೇಲೆ ಆ ಅಕ್ಷರಗಳು ಮತ್ತೆ ಭಾವನೆಗಳಾಗಿ ಹಾಡಿನ ಮೂಲಕ ಪರಿವರ್ತನೆ ಹೊಂದಿ ಕೆಲವೊಮ್ಮೆ ಮತ್ತೆ ಅಕ್ಷರಗಳಾಗಿ ಮತ್ತೆ ಭಾವನೆಗಳಾಗುವ ಸರಪಳಿಯ ಕೊಂಡಿಯೇ ಅತ್ಯದ್ಭುತ.....

ಕೆಲವು ಅಪರೂಪದ ಸ್ವಾಭಾವಿಕ ಪ್ರತಿಭೆಗಳು ಎಲ್ಲಾ ಕ್ಷೇತ್ರಗಳಲ್ಲೂ ಉದಯಿಸಿವೆ. ಹೆಚ್ಚು ಶ್ರಮವಿಲ್ಲದೆ, ( ಅವರ ಪ್ರತಿಭೆಯ ಕಾರಣದಿಂದಾಗಿ ) ಆದರೆ ಶ್ರದ್ಧೆ ಮತ್ತು ಸಮರ್ಪಣಾ ಮನೋಭಾವದಿಂದ ತುಂಬಾ ಸರಳವಾಗಿ ಆ ಪ್ರತಿಭೆಯನ್ನು ದುಡಿಸಿಕೊಂಡಿದ್ದಾರೆ. ಸುಖದ ಅನುಭವ ನಮಗೆ ಆಗಬೇಕಾದರೆ ಕಷ್ಟದ ಅರಿವು ಸಹ ಇರಲೇಬೇಕು ಎಂಬ ಸಮಧಾನದೊಂದಿಗೆ.........

ಬದುಕಿನ ಪಯಣದಲ್ಲಿ ಅನೇಕರಿಗೆ ಲಲಿತ ಕಲೆಗಳು ಸ್ಪೂರ್ತಿ ಪ್ರೇರಣೆ ಪ್ರಭಾವವನ್ನು ಹೊಂದುವ ಬಗೆಯನ್ನು ನೆನೆಯುತ್ತಾ. ನಮ್ಮೆಲ್ಲರ ಬದುಕಿನ, ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ.
ಲೇಖನ-ವಿವೇಕಾನಂದ. ಎಚ್. ಕೆ.9663750451.....


 

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
"ನಾನೇ ಕ್ರೂರಿ, ನಾನೇ ಪ್ರೇಮಿ": ಆತ್ಮಾವಲೋಕನದ ಸಂದೇಶ ನೀಡಿದ ಡಾ.ಬಸವ ಕುಮಾರ ಸ್ವಾಮೀಜಿ ಭಾವನಾತ್ಮಕ ಮಾತುಗಳು!ಬುಡಬುಡಕಿ ಬಂದನಾರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ: ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ಅಭಯಸಾರಿಗೆ ಡಿಪೋ ಹಾಗೂ ವಸತಿ ಗೃಹಗಳ ಉದ್ಘಾಟನೆಗೆ ಒತ್ತಾಯಿಸಿ ಸಚಿವ ರಘುಮೂರ್ತಿಯವರಿಗೆ ಮನವಿ ವಾಸವಿ ಕಾಲೋನಿಯ ಗಣೇಶ ಸನ್ನಿಧಿಯಲ್ಲಿ ಶ್ರೀಶಾರದಾಶ್ರಮದ ಭಕ್ತರಿಂದ ವಿಶೇಷ ಭಜನೆಹರಿಯಬ್ಬೆ ನಾಗಭೂಷಣ ಡಿ. ಅವರಿಗೆ 'ಕರ್ನಾಟಕ ಸೋಷಿಯಲ್ ಸರ್ವಿಸ್ ಅವಾರ್ಡ್' ಗೌರವಬಯಲುಸೀಮೆಯ ಜೀವನಾಡಿ: ಚಿತ್ರದುರ್ಗ ಜಿಲ್ಲೆಗೆ ಹರಿದುಬಂದ ಭದ್ರೆ - ಸಂಭ್ರಮವೋ ಸಂಭ್ರಮ!ಗಂಗಾ ಕಲ್ಯಾಣ: 13 ಫಲಾನುಭವಿಗಳಿಗೆ ಮೋಟಾರ್ ಪಂಪ್ ವಿತರಿಸಿದ ಸಚಿವ ಟಿ.ರಘುಮೂರ್ತಿದಾವಣಗೆರೆಯಲ್ಲಿ ಇಂದು ರಾಜ್ಯಮಟ್ಟದ 'ವಿದ್ಯಾರತ್ನ' ಪ್ರಶಸ್ತಿ ಪ್ರದಾನ: 18 ಜನ ಶಿಕ್ಷಕರ ಆಯ್ಕೆತಾಲೂಕಿನ ಹುಲಿಕುಂಟೆಯಲ್ಲಿ ಹೊಸ ಕೆಎಸ್‌ಆರ್‌ಟಿಸಿ ಉಪವಿಭಾಗ ಹಾಗೂ ಬಸ್ ಡಿಪೋ: ಸಚಿವ ಡಾ. ಜಿ. ಪರಮೇಶ್ವರ್