Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸತ್ಯಶೋಧನಾ ವರದಿ ಸಲ್ಲಿಸಿದ ಶಾಸಕ ಎಸ್. ಆರ್. ವಿಶ್ವನಾಥ್

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೋಗಿಲು ಬಡಾವಣೆ ಬಂಡೆ ಸರ್ವೆ ನಂ. 99 ರಲ್ಲಿ ಕಳೆದ ಎರಡು ವರ್ಷಗಳಿಂದ ಅಕ್ರಮವಾಗಿ ಬಾಂಗ್ಲಾ ನಿವಾಸಿಗಳು, ರೋಹಿಂಗ್ಯಾಗಳು ಅಕ್ರಮ ಮನೆ, ಶೆಡ್ ಕಟ್ಟಿಕೊಂಡು ವಾಸ ಇದ್ದರು ಎಂದು ಬಿಜೆಪಿ ಸತ್ಯಶೋಧನಾ ಸಮಿತಿ ಅಧ್ಯಕ್ಷ ಎಸ್. ಆರ್. ವಿಶ್ವನಾಥ್ ಆರೋಪಿಸಿದ್ದಾರೆ.
ಕೋಗಿಲು ಅಕ್ರಮ ಮನೆಗಳ ತೆರವು ಪ್ರಕರಣ ಸಂಬಂಧ ಶಾಸಕ ಎಸ್. ಆರ್. ವಿಶ್ವನಾಥ್ ನೇತೃತ್ವದ ಸತ್ಯಶೋಧನಾ ತಂಡ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ‌ಗೆ ಅಧ್ಯಯನ ವರದಿ ಸಲ್ಲಿಕೆ ಮಾಡಿತು.


ಬಳಿಕ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಇದು ಮೊದಲು ದೊಡ್ಡ ಬಂಡೆ ಜಾಗ, ಖರಾಬು ಜಾಗ. ಕಟ್ಟಡ ತ್ಯಾಜ್ಯ ಹಾಕಿ ಹಳ್ಳ ಮುಚ್ತಾ ಬಂದ್ರು. ಕಾಂಗ್ರೆಸ್​ನ ಸ್ಥಳೀಯ ಮುಖಂಡರು ಅಕ್ರಮ ಸೈಟ್ ಮಾಡ್ತಿದ್ರು. ಬಿಬಿಎಂಪಿ ಘನತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಆ ಜಾಗ ರಿಸರ್ವ್​ ಆಗಿತ್ತು. ಅಲ್ಲಿ ಗುಡಿಸಲುಗಳನ್ನು ಕಟ್ಕೊಂಡಿದ್ರು‌. ಇದರ ಪಕ್ಕದಲ್ಲಿ ಈಗಲೂ ಅಕ್ರಮ ಗುಡಿಸಲುಗಳು ಇವೆ. ಅದನ್ನು ಇನ್ನೂ ತೆರವು ಮಾಡಿಲ್ಲ. ಸರ್ಕಾರ ಅಕ್ರಮ ಗುಡಿಸಲುಗಳನ್ನು ತೆರವು ಮಾಡಿತ್ತು. ಅದು ಸರಿ ಇತ್ತು. ನಂತರ ಪಿಣರಾಯಿ ವಿಜಯನ್, ವೇಣುಗೋಪಾಲ್ ಮಧ್ಯಪ್ರವೇಶ ಆಯ್ತು. ಚುನಾವಣಾ ದೃಷ್ಟಿಯಿಂದ ಅಲ್ಲಿದ್ದವರಿಗೆ ಪುನರ್ವಸತಿಗೆ ಇಬ್ರೂ ಸೂಚಿಸಿದ್ರು ಎಂದು ಆರೋಪಿಸಿದರು.


ಬಾಂಗ್ಲಾ ನುಸುಳುಕೋರರ ಶಿಫ್ಟ್:
ಕೋಗಿಲು ಪ್ರದೇಶಕ್ಕೆ ಮಂತ್ರಿ‌ಜಮೀರ್
, ಶಾಸಕ ಕೃಷ್ಣಬೈರೇಗೌಡ, ಡಿಕೆಶಿ ಎಲ್ಲರೂ ಬಂದ್ದರು. ಕಾಂಗ್ರೆಸ್ ನಾಯಕರ ಎಡಬಲದಲ್ಲಿ ಇದ್ದವರೇ ಅಕ್ರಮ ನಿವಾಸಿಗಳ ವಾಸ್ತವ್ಯಕ್ಕೆ ಕಾರಣ. 165 ಕುಟುಂಬಗಳಿಗೆ ಪುನರ್ವಸತಿ ಕೊಡಲು ಸರ್ಕಾರ ತರಾತುರಿ‌ಮಾಡಿತು. ಆ ಜನರ ಹಿನ್ನೆಲೆ ಪರಿಶೀಲಿಸದೇ ಪುನರ್ವಸತಿಗೆ ಘೋಷಣೆ ಮಾಡಿದರು.

ಮನೆಗಳ ಹಂಚಿಕೆಗೆ ನಿಯಮ ಉಲ್ಲಂಘನೆ ಮಾಡಲಾಗ್ತಿದೆ. 10.30 ಲಕ್ಷದ ಮನೆಗಳನ್ನು 2.5 ಲಕ್ಷ ಕೊಟ್ರೆ ಸಾಕು ಕೊಡ್ತೀವಿ ಅಂತ ಹೊರಟಿದ್ದಾರೆ. ನಮ್ಮ ಸತ್ಯಶೋಧನೆ ಸಮಿತಿ ಸ್ಥಳ ಪರಿಶೀಲನೆ ಮಾಡಿತು. ನಾವು ಹೋಗಿದ್ದಾಗ ರೋಹಿಂಗ್ಯಾ, ಬಾಂಗ್ಲಾದವರು ಇರಲಿಲ್ಲ. ಅವರನ್ನು ಶಿಫ್ಟ್ ಮಾಡಿದ್ರು. ಸುತ್ತಮುತ್ತಲಿನ ಬಡಾವಣೆಗ ಜನರನ್ನು ತಂದು ಇರಿಸಿದ್ರು ಎಂದು ವಿಶ್ವನಾಥ್ ಅವರು ದೂರಿದರು.

ನಿಜವಾದ ಸ್ಥಳೀಯ ಮುಸ್ಲಿಮರು ಆಗಿದ್ರೆ ನಮ್ಮ ವಿರೋಧವಿಲ್ಲ. ಬಾಂಗ್ಲಾ, ರೋಹಿಂಗ್ಯಾಗಳಿಗೆ ಮನೆ ಕೊಟ್ಟರೆ ನಾವು ಸುಮ್ಮನೆ ಇರಲ್ಲ. ಅಷ್ಟೂ ಜನ ಅರ್ಜಿ ಹಾಕಿಕೊಂಡಿದ್ದವರ ಆಧಾರ್ ಕಾರ್ಡ್​ಗಳನ್ನು ನಾವು ಸಂಗ್ರಹ ಮಾಡಿದ್ವಿ. ಖನಿಜ ಭವನದಲ್ಲಿರುವ ಆಧಾರ್ ಕಚೇರಿಗೆ ಈ ದಾಖಲೆ ಕಳಿಸಿದ್ವಿ.

ಡಿಸಿ ಕಡೆಯಿಂದ ಬರಬೇಕು ಅಂದಾಗ, ನಾವು ಡಿಸಿಗೂ ಕೊಟ್ವಿ. ಇಲ್ಲಿವರೆಗೂ ಡಿಸಿ ಕಚೇರಿಯಿಂದ ಆಧಾರ್ ಕಾರ್ಡ್ ಕಚೇರಿಗೆ ನಾವು ಕೊಟ್ಟ ಆಧಾರ್ ಕಾರ್ಡ್​ಗಳ ದಾಖಲೆ ಸಲ್ಲಿಕೆ ಮಾಡಿಲ್ಲ. ಡಿಸಿ ಅವರೇ ತಮ್ಮ ಬಳಿ ನಾವು ಕೊಟ್ಟ ಆಧಾರ್ ಕಾರ್ಡ್​ಗಳನ್ನು ಇಟ್ಕೊಂಡಿದ್ದಾರೆ. ಕೋಗಿಲು ಲೇಔಟ್‌ನಲ್ಲಿದ್ದವರು ರೋಹಿಂಗ್ಯಾಗಳು, ಬಾಂಗ್ಲಾದವರು. ಬೆಂಗಳೂರಿನಲ್ಲಿ 2 ಲಕ್ಷಕ್ಕೂ ಹೆಚ್ಚು ರೋಹಿಂಗ್ಯಾಗಳು/ ಬಾಂಗ್ಲಾದವರು ಇದ್ದಾರೆ. ಇವರೆಲ್ಲರ ಬಳಿ ಆಧಾರ್ ಕಾರ್ಡ್, ವೋಟರ್ ಕಾರ್ಡ್​ಗಳೂ ಇವೆ ಎಂದು ಶಾಸಕರು ಆರೋಪಿಸಿದರು.


ಬೆಂಗಳೂರಿನಲ್ಲಿ ಐದು ವರ್ಷ ವಾಸ ಇದ್ದಾರೆ ಅಂತ ದೃಢಪಡಿಸಲು ಕಂದಾಯ ಇಲಾಖೆ ದೃಢೀಕರಣ ಪತ್ರ‌ಕೊಡಬೇಕು. 26 ಜನ ಅರ್ಹ ಫಲಾನುಭವಿಗಳು ಅಂತ ಸರ್ಕಾರ ಗುರುತಿಸಿದೆ. ಆದ್ರೆ ಈ ಜನರೂ ಇಲ್ಲಿಯವರಲ್ಲ. ಉಳಿದವರ ಹಿನ್ನೆಲೆಯನ್ನು ಅಧಿಕಾರಿಗಳಿಗೆ ಪತ್ತೆ ಮಾಡಲು ಇಲ್ಲಿವರೆಗೂ ಆಗಿಲ್ಲ. ಕೋಗಿಲು ಲೇಔಟ್ ತೆರವು ಬಗ್ಗೆ ಮೊದಲು ತಗಾದೆ ಎತ್ತಿದ್ದು ಕೇರಳ ಸಿಎಂ ಪಿಣರಾಯಿ ವಿಜಯನ್‌. ಆದರೆ ಅಲ್ಲಿ ಒಬ್ಬರೂ ಕೇರಳದವರೂ ಇಲ್ಲ. ನಾವು ಹಲವು ಶಿಫಾರಸು ಮಾಡಿದ್ದೇವೆ. ಇಂಥ ಸ್ಥಳಗಳಲ್ಲಿ ಗುಡಿಸಲು ಹಾಕಿಕೊಂಡವರು ಬಹುತೇಕ ರೋಹಿಂಗ್ಯಾಗಳು. ಹಣ ಕೊಟ್ಟು ಗಡಿ ದಾಟಿ ಬಂದವರು ಅವರೆಲ್ಲ. ಅವರ ಭಾಷೆ ಉರ್ದುನೂ ಅಲ್ಲ, ಹಿಂದಿಯೂ ಅಲ್ಲ. ಅವರ ಭಾಷೆ ನಮಗೆ ಅರ್ಥ ಆಗಲ್ಲ ಎಂದು ಹೇಳಿದರು.

ಅಪಾಯ ಇದೆ :
ನುಸುಳಿಕೋರರಾದ ಬಾಂಗ್ಲಾ
, ರೋಹಿಂಗ್ಯಾಗಳು2 ಲಕ್ಷಕ್ಕೂ ಅಧಿಕ ಬೆಂಗಳೂರಿನಲ್ಲಿದ್ದಾರೆ. ಇವರನ್ನು ವಶಕ್ಕೆ ಪಡೆದ ಹಿನ್ನೆಲೆ ಪರಿಶೀಲಿಸಿ ಅವರ ದೇಶಕ್ಕೆ ವಾಪಸ್ ಕಳಿಸಬೇಕು. ಅಕ್ರಮ ವಲಸಿಗರಿಗೆ ನಿಯಮ ಮೀರಿ ಮನೆಗಳ ಹಂಚಿಕೆ ಮಾಡಬಾರದು. ಪೊಲೀಸರು ಅಕ್ರಮ ನುಸುಳುಕೋರರ ಹಿನ್ನೆಲೆ ಪರಿಶೀಲನೆ ಮಾಡಬೇಕು. ಸರ್ಕಾರ ಇದರ ಬಗ್ಗೆ ಸೂಕ್ತ ತನಿಖೆ ಮಾಡಲಿ. ಸರ್ಕಾರದಿಂದ ತನಿಖೆ ಆಗದಿದ್ದರೆ ಎನ್ಐಎ ತನಿಖೆ ಮಾಡಿಸಲಿ.

ಇವರೆಲ್ಲ ಹೊರ ದೇಶದವರು, ಎನ್ಐಎ ತನಿಖೆ ಮಾಡಿಸಬೇಕು. ಬಾಂಗ್ಲಾದವರು ಅಂತ ಮುಖಚರ್ಯೆ ನೋಡಿ ಪತ್ತೆ ಹಚ್ಚೋದು ಕಷ್ಟ. ಅಲ್ಲಿದ್ದ ಸ್ಥಳೀಯರೇ ಹೇಳಿದ್ದಾರೆ, ಇಲ್ಲಿ ಬಾಂಗ್ಲಾದವರೂ ಇದ್ರು‌. ಇದರ ಬಗ್ಗೆ ಸೂಕ್ತ ತನಿಖೆ ಆಗಬೇಕು. ಅವರ ಬಳಿ ದಾಖಲೆ ಯಾರು ಮಾಡಿಕೊಟ್ರು ಅನ್ನೋದು ಬಹಿರಂಗ ಆಗಬೇಕು. ಅಕ್ರಮ ನುಸುಳುಕೋರರಿಂದ ದೇಶದ ಭದ್ರತೆಗೆ, ರಾಜ್ಯದ ಭದ್ರತೆಗೆ ಅಪಾಯ ಇದೆ ಎಂದು ಅವರು ಎಚ್ಚರಿಸಿದರು.

 

 

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ