Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟ

Advertisement
Advertisement

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ನಗರ ಪ್ರದೇಶದ ಮಕ್ಕಳನ್ನು ಹಿಂದಿಕ್ಕಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಅಭೂತಪೂರ್ವ ಸಾಧನೆ ಮಾಡಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ದಾಖಲೆಯ ಶೇ 92.77 ರಷ್ಟು ಫಲಿತಾಂಶ ಬಂದಿದ್ದರೆ, ನಗರ ಪ್ರದೇಶದಲ್ಲಿ ಶೇ 92.01 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. "ಈ ಫಲಿತಾಂಶವು ಗ್ರಾಮೀಣ ಭಾಗದ ಮಕ್ಕಳ ಪ್ರತಿಭೆ, ಶ್ರಮ ಹಾಗೂ ಸಾಧಿಸುವ ಛಲಕ್ಕೆ ಸಾಕ್ಷಿಯಾಗಿದೆ" ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ವಿಭಾಗವಾರು ಫಲಿತಾಂಶದ ವಿವರ: ಈ ಬಾರಿಯ ಫಲಿತಾಂಶದಲ್ಲಿ ವಿಜ್ಞಾನ ವಿಭಾಗವು ಎಂದಿನಂತೆ ಮುಂಚೂಣಿಯಲ್ಲಿದೆ. ವಿವಿಧ ವಿಭಾಗಗಳ ತೇರ್ಗಡೆ ಪ್ರಮಾಣ ಹೀಗಿದೆ.

ವಿಭಾಗ ಫಲಿತಾಂಶದ ಶೇಕಡಾವಾರು ವಿಜ್ಞಾನ ಶೇ 96.01, ವಾಣಿಜ್ಯ ಶೇ 92.84, ಕಲಾ ವಿಭಾಗ ಶೇ 83.31. ಸರ್ಕಾರಿ ಕಾಲೇಜುಗಳ ಐತಿಹಾಸಿಕ ಸುಧಾರಣೆ ಈ ವರ್ಷದ ಫಲಿತಾಂಶದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜುಗಳು ಗಮನಾರ್ಹ ಪ್ರಗತಿ ಸಾಧಿಸಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸರ್ಕಾರಿ ಕಾಲೇಜುಗಳ ಫಲಿತಾಂಶದಲ್ಲಿ ಬರೋಬ್ಬರಿ ಶೇ 11.99 ರಷ್ಟು ಸುಧಾರಣೆ ಕಂಡುಬಂದಿದ್ದು, ಒಟ್ಟಾರೆ ಕ್ರೋಢೀಕೃತ ಫಲಿತಾಂಶ ಶೇ 73.04 ರಷ್ಟು ದಾಖಲಾಗಿದೆ.

ಸಾಧನೆಯ ಹಿಂದಿನ ಸೀಕ್ರೆಟ್ ಏನು?ಗುಣಮಟ್ಟದ ಶಿಕ್ಷಣಕ್ಕಾಗಿ ಇಲಾಖೆ ಕೈಗೊಂಡ ಹಲವು ಮಹತ್ವದ ಕ್ರಮಗಳೇ ಈ ಯಶಸ್ಸಿಗೆ ಕಾರಣ ಎಂದು ಸಚಿವರು ತಿಳಿಸಿದ್ದಾರೆ.

ವಿಶೇಷ ಪ್ರಶ್ನೆ ಬ್ಯಾಂಕ್‌ಗಳ ಸಿದ್ಧತೆ:
ಡಿಸೆಂಬರ್ ಒಳಗೆ ಸಂಪೂರ್ಣ ಪಠ್ಯಕ್ರಮ ಮುಕ್ತಾಯ. ಮಾದರಿ ಪ್ರಶ್ನೆ ಪತ್ರಿಕೆಗಳ ಲಭ್ಯತೆ ಹಾಗೂ ರಾಜ್ಯ ಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆಗಳು. ಉಪನ್ಯಾಸಕರಿಗೆ ಸಾಮರ್ಥ್ಯ ವೃದ್ಧಿ ತರಬೇತಿ. ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದ್ದ ಮೆಗಾ ಪೋಷಕರು-ಶಿಕ್ಷಕರ ಸಭೆಗಳು.

ಪರೀಕ್ಷೆ-2 ರ ಫಲಿತಾಂಶದ ವಿವರ:
 
ದ್ವಿತೀಯ ಪಿಯುಸಿಯ ಪರೀಕ್ಷೆ-2 ಬರೆದ ವಿದ್ಯಾರ್ಥಿಗಳ ಫಲಿತಾಂಶವೂ ಲಭ್ಯವಾಗಿದ್ದು, ವಿವರ ಹೀಗಿದೆ:
ಕಲಾ ವಿಭಾಗ: ಒಟ್ಟು 33,453 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ಶೇ 43.72 ರಷ್ಟು ಫಲಿತಾಂಶ ಬಂದಿದೆ. 
ವಾಣಿಜ್ಯ ವಿಭಾಗ: 23,615 ವಿದ್ಯಾರ್ಥಿಗಳು ಹಾಜರಾಗಿದ್ದು, ಶೇ 43.27 ರಷ್ಟು ತೇರ್ಗಡೆಯಾಗಿದ್ದಾರೆ.
ವಿಜ್ಞಾನ ವಿಭಾಗ: ಪರೀಕ್ಷೆ ಬರೆದ 23,469 ವಿದ್ಯಾರ್ಥಿಗಳಲ್ಲಿ ಶೇ 50.79 ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.

ಫಲಿತಾಂಶ ವೀಕ್ಷಿಸುವುದು ಹೇಗೆ?:
ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಕೆಳಗಿನ ಅಧಿಕೃತ ಜಾಲತಾಣಗಳು ಅಥವಾ ಆಪ್ ಮೂಲಕ ವೀಕ್ಷಿಸಬಹುದಾಗಿದೆ:karresults.nic.indpue-exam.karnataka.gov.inಕರ್ನಾಟಕ ಒನ್ (Karnataka One) ಮೊಬೈಲ್ ಅಪ್ಲಿಕೇಶನ್ ಮುಖಾಂತರವೂ ಫಲಿತಾಂಶ ಪಡೆಯಬಹುದು.

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST