Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಉಗ್ರರ ದಾಳಿಯಲ್ಲಿ ಮೃತ ಪಟ್ಟವರಿಗೆ ಕನಸವಾಡಿಯಲ್ಲಿ ಶ್ರದ್ದಾಂಜಲಿ

Advertisement
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕಾಶ್ಮೀರದ ಪಹಲ್ಗಾಮ್‌ನಲ್ಲಿ
  ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರಿ ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ ಹೋಬಳಿಯ ಕನಸವಾಡಿ ಯಲ್ಲಿ  ವಿವಿಧ   ಸಂಘಟನೆಗಳ  ವತಿಯಿಂದ  ಮುಂಬತ್ತಿಯೊಂದಿಗೆ ಮೌನ ಮೆರವಣಿಗೆ ನಡೆಯಿತು.  ಕನಸವಾಡಿಯ ಬೆಳವಂಗಲ ಕ್ರಾಸ್ ನಿಂದ ಶನಿಮಹಾತ್ಮ ದೇವಸ್ದಾನದವರೆಗೆ ಕಾಲು ನಡಿಗೆಯೊಂದಿಗೆ ಮೊಂಬತ್ತಿ ಹಚ್ಚಿ ಮೌನ ಮೆರವಣಿಗೆ ನಡೆಸಿ ಸಂಘಟನೆಗಳ‌ಮುಖಂಡರು ಮತ್ತು  ಕಾರ್ಯಕರ್ತರು  ಕಾಶ್ಮೀರ ಹತ್ಯಾಕಾಂಡವನ್ನು ಖಂಡಿಸಿದರು.

     ಮೆರವಣಿಗೆ ಯಲ್ಲಿ‌ಮಾತನಾಡಿದ ಸಂಘಟನೆಗಳ ಮುಖಂಡರು, ಕಾಶ್ಮೀರದ ಪೆಹಲ್ಗಾಮ್‌ನಲ್ಲಿ  ನಡೆದ ಉಗ್ರರ ದಾಳಿಯನ್ನು  ದೇಶದ ಎಲ್ಲಾ‌‌ಜನರು‌‌‌ಖಂಡಿಸ ಬೇಕಾಗಿದೆ.  ಭಾರತ ಭಾವೈಕ್ಯತೆ ಉಗ್ರರು ಮಾರಕ ವಾಗಿದ್ದಾರೆ. 26 ಮಂದಿಯನ್ನು  ಹತ್ಯೆ ಮಾಡಿರುವ ಉಗ್ರವಾದಿ ಗಳಿಗೆ ಕಠಿಣ ಶಿಕ್ಷೆಯಾಗಬೇಕು. ಇಂತಹ ಪ್ರಕರಣ ಮತ್ತೆ ಮರುಕಳಿಸದಂತೆ ಕಾನೂನು‌ಮತ್ತು ಭದ್ರತಾ ವ್ಯವಸ್ಥೆ  ಸಮಪರ್ಕವಾಗಿ ಕಾರ್ಯನಿರ್ವಹಿಸ ಬೇಕಾಗಿದೆ ಎಂದರು.

ಮೆರವಣಿಗೆಯಲ್ಲಿ ಮಧುರೆ ಕಲಾವಿದರ ಸಂಘ ,ಇಸ್ತೂರು ಕೋದಂಡ ರಾಮಸ್ವಾಮಿ ಭಜನಾ ಸಂಘ, ಶ್ರೀ ಅಭಯ ಆಂಜನೇಯಸ್ವಾಮಿ ಸಮಿತಿ ಮತ್ತು ಮಧುರೆ ಹೋಬಳಿಯ  ವಿವಿಧ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳ ಮುಖಂಡರು ಭಾಗವಹಿಸಿದ್ದರು.

ದೊಡ್ಡಬಳ್ಳಾಪುರ ‌ನಗರದ ಸಮೀಪವಿರುವ. ಅನಿಬೆಸೆಂಟ್ ಪಾರ್ಕ್  ನಲ್ಲಿ  ನಡೆಯುತ್ತಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ, ರಾಜ್ಯ  ಸಂಸ್ಥೆ ಆಯೋಜಿಸಿದ್ದ  ರೋವರ್ಸ್ ಮತ್ತು ರೇಂಜರ್ಸ ಗಳ ಕೌಶಲ್ಯ ತರಬೇತಿ ಶಿಬಿರದ ಶಿಬಿರಾರ್ಥಿಗಳಿಂದ ಪೆಹಲ್ಗಾಮ್  ನಲ್ಲಿ ನಡೆದ ಭಯೋತ್ಪಾದಕರ ಧಾಳಿಗೆ ಬಲಿಯಾದ ದೇಶದ ನಾಗರಿಕರಿಗೆ ಮೊಂಬತ್ತಿ ಹಿಡಿದು ಮೆರವಣಿಗೆ  ನಡೆಸಿ  ಗೌರವ ನಮನ  ಸಲ್ಲಿಸಿದರು.  ಜಿಲ್ಲಾ ಮುಖ್ಯ ಆಯುಕ್ತರು ನಾಗರಾಜು ಮಾತನಾಡಿದರು. ಕಾರ್ಯಕ್ರಮದಲ್ಲಿ  ಜಿಲ್ಲಾ ಸಹಾಯಕ ಆಯುಕ್ತ ವೆಂಕಟರಾಜು , ಚಂದ್ರು, ನಿತಿನ್ ಅಮೀನ್, ವಿಶ್ವನಾಥ್, ನವೀನ್ ಕುಮಾರ್, ಅಶೋಕ್ ಕುಮಾರ್, ನಿಹಾಲ್ , ಸುಮಾ, ಶೋಭಾ ಮತ್ತು ಶಿಬಿರಾರ್ಥಿಗಳು  ಭಾಗವಹಿಸಿದ್ದರು.

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ