ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಐಸಿಎಸ್‌ಇ (ICSE) 10ನೇ ತರಗತಿಯ ಫಲಿತಾಂಶದಲ್ಲಿ ಚಿತ್ರದುರ್ಗದ ಡಾನ್ ಬಾಸ್ಕೋ ಶಾಲೆಯ ವಿದ್ಯಾರ್ಥಿನಿ ನಗರದ ಕೆಹೆಚ್ ಬಿ ಕಾಲೋನಿ ನಿವಾಸಿ ಚಂದನಾ ಎಸ್. ಯಾದವ್ ಅತ್ಯುತ್ತಮ ಅಂಕಗಳನ್ನು ಪಡೆಯುವ ಮೂಲಕ ಶಾಲೆಗೆ ಹಾಗೂ ಪೋಷಕರಿಗೆ ಕೀರ್ತಿ ತಂದಿದ್ದಾರೆ.
ಚಂದನಾ ಅವರು ಒಟ್ಟು 96.6% ಅಂಕಗಳನ್ನು ಗಳಿಸಿ ಸಾಧನೆ ಮಾಡಿದ್ದಾರೆ. ಅವರ ವಿಷಯವಾರು ಸಾಧನೆ ಈ ಕೆಳಗಿನಂತಿದೆ:
ಕನ್ನಡ: 98, ಇತಿಹಾಸ, ಪೌರನೀತಿ ಮತ್ತು ಭೂಗೋಳ: 99, ಕಂಪ್ಯೂಟರ್ ಅಪ್ಲಿಕೇಶನ್ಸ್: 98, ಇಂಗ್ಲಿಷ್: 96, ಗಣಿತ: 95, ವಿಜ್ಞಾನ: 94.
ಪೋಷಕರ ಹರ್ಷ:
ಹಿರಿಯೂರು ತಾಲೂಕಿನ ಕೃಷ್ಣಾಪುರದ ಚಂದನಾ ಅವರು ವಕೀಲ ಶಿವ ಯಾದವ್ ಸಿ. ಹಾಗೂ ಪಿಡಿಒ ವಿಶಾಲಾಕ್ಷಿ ಎಸ್. ದಂಪತಿಯ ಪುತ್ರಿಯಾಗಿದ್ದು, ಮಗಳ ಈ ಅದ್ಭುತ ಸಾಧನೆಗೆ ಪೋಷಕರು ಮತ್ತು ಶಾಲಾ ಮಂಡಳಿಯು ಹರ್ಷ ವ್ಯಕ್ತಪಡಿಸಿದೆ. ವಿದ್ಯಾರ್ಥಿನಿಯ ನಿರಂತರ ಪರಿಶ್ರಮ ಮತ್ತು ಶಿಸ್ತಿನ ಓದಿಗೆ ಈ ಯಶಸ್ಸು ಸಂದಿದೆ ಎಂದು ಶ್ಲಾಘಿಸಲಾಗಿದೆ.
ಈ ಯಶಸ್ಸಿಗೆ ಶಾಲೆಯ ಶಿಕ್ಷಕರು ಉಪನ್ಯಾಸಕ ವೃಂದ, ಪೋಷಕರು ಹಾಗೂ ಸ್ನೇಹಿತರು ಹರ್ಷ ವ್ಯಕ್ತಪಡಿಸಿ, ಚಂದನ ಅವರ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.


