Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಸಮಾಜದ ಪ್ರತಿಭಾವಂತರಿಗೆ ಪ್ರೋತ್ಸಾಹ ಅಗತ್ಯ: ಟಿಬಿ ಜಯಚಂದ್ರ

news_1789951150_8_164.webp

 

Advertisement

 ಚಂದ್ರವಳ್ಳಿ ನ್ಯೂಸ್, ​ಬೆಂಗಳೂರು: ​
ಸಮಾಜದ ಬೆಳವಣಿಗೆಗೆ ಪ್ರತಿಭಾವಂತರಿಗೆ ಪ್ರೋತ್ಸಾಹ ಅಗತ್ಯ. ಇಂದು ಶೇ.
90 ಉದ್ಯೋಗಗಳು ಖಾಸಗಿ ವಲಯದಲ್ಲಿಯೇ ಸೃಷ್ಟಿಯಾಗುತ್ತಿವೆ. ಹಾಗಾಗಿ, ಸಂಘವು ವಿದ್ಯಾರ್ಥಿಗಳಿಗೆ, ನಿರುದ್ಯೋಗಿ ಯುವಜನರಿಗೆ ಸೂಕ್ತ ಉದ್ಯೋಗ ಮಾರ್ಗದರ್ಶನ ನೀಡಬೇಕೆಂದು ಶಾಸಕ, ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಹೇಳಿದರು.

ಬಸವೇಶ್ವರ ನಗರದಲ್ಲಿ ಕುಂಚಿಟಿಗ ಅಧಿಕಾರಿ ಮತ್ತು ನೌಕರರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸಮುದಾಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಮಾತನಾಡಿ, ಸಂಘವು 72 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಶ್ಲಾಘನೀಯ. ವಿದ್ಯಾರ್ಥಿಗಳ ಪರಿಶ್ರಮಕ್ಕೆ ಸಿಗುವ ಈ ರೀತಿಯ ಮಾನ್ಯತೆ, ಪ್ರೋತ್ಸಾಹ ಅವರ ಭವಿಷ್ಯದ ಸಾಧನೆಗೆ ದೊಡ್ಡ ಆತ್ಮವಿಶ್ವಾಸ ನೀಡುತ್ತದೆ ಎಂದು ತಿಳಿಸಿದರು. 

 

​ಸಮಾಜದ ಜವಾಬ್ದಾರಿ: ನಾವೆಲ್ಲರೂ ಜನ್ಮತಃ ಯಾವುದೇ ಜಾತಿಯಲ್ಲಿ ಹುಟ್ಟಿದರೂ, ಸಮಾಜಕ್ಕೆ ಮತ್ತು ಸಮುದಾಯಕ್ಕೆ ನೀಡಬೇಕಾದ ಜವಾಬ್ದಾರಿಗಳಿರುತ್ತವೆ. ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ನಂಬಿಕೆಯಿಂದ ಸಮಾಜವನ್ನು ಕಟ್ಟುವ ಕೆಲಸ ಮಾಡಬೇಕು. ತಮ್ಮ ರಾಜಕೀಯ ರಂಗದ ಅನುಭವಗಳನ್ನು ನೆನಪಿಸಿಕೊಂಡ ಶಾಸಕರು, ನೀರಾವರಿ ಯೋಜನೆಗಳು, ಶೈಕ್ಷಣಿಕ ವಸತಿ ನಿಲಯಗಳ ನಿರ್ಮಾಣದ ಮೂಲಕ ಸಮುದಾಯ ಹಾಗೂ ಪ್ರದೇಶದ ಅಭಿವೃದ್ಧಿಗೆ ಕೈಗೊಂಡ ಶ್ರಮವನ್ನು ಹಂಚಿಕೊಂಡರು.  ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಸಂಖ್ಯೆಯ ಪ್ರತಿಭಾವಂತ ಮಕ್ಕಳಿಗೆ ಈ ರೀತಿಯ ಪ್ರೋತ್ಸಾಹ, ಸಹಾಯ ಧನ ತಲುಪುವಂತಾಗಲಿ ಎಂದು ಅವರು ಹಾರೈಸಿದರು. 

ಶಿಕ್ಷಣಕ್ಕೆ ನೀಡುವ ನೆರವು ಶ್ರೇಷ್ಠವಾದದ್ದು: ಜಲಸಂಪನ್ಮೂಲ ಇಲಾಖೆಯ ನಿವೃತ್ತ ಕಾರ್ಯದರ್ಶಿ ಡಾ.ಕೆ.ಜಯಪ್ರಕಾಶ್ ಮಾತನಾಡಿ, ವಿದ್ಯಾರ್ಥಿಗಳಿಗೆ ನೀಡುವ ಶಿಕ್ಷಣದ ಅವಕಾಶ, ವಿದ್ಯಾರ್ಥಿವೇತನವು ಕೇವಲ ಹಣಕಾಸಿನ ನೆರವಲ್ಲ, ಅದು ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ, ಕುಟುಂಬಕ್ಕೆ ಆಶಾಕಿರಣ ಮೂಡಿಸುವ ಕಾರ್ಯ ಎಂದು ತಿಳಿಸಿದರು.

ನಾವು ನಿರ್ಮಿಸುವ ರಸ್ತೆಗಳು ಅಥವಾ ಅಣೆಕಟ್ಟುಗಳಿಗೆ ನಿರ್ದಿಷ್ಟ ಆಯುಷ್ಯವಿರುತ್ತದೆ. ಆದರೆ, ಒಬ್ಬ ವಿದ್ಯಾರ್ಥಿಗೆ ನೀಡುವ ನೆರವು ತಲೆಮಾರುಗಳವರೆಗೆ ಧನಾತ್ಮಕ ಪರಿಣಾಮ ಬೀರುತ್ತದೆ ಎಂದು ಶಿಕ್ಷಣದ ಮಹತ್ವವನ್ನು ಬಣ್ಣಿಸಿದರು.

ಕೇಂದ್ರ ನೀರಾವರಿ ಇಲಾಖೆ ನಿವೃತ್ತ ಅಧಿಕಾರಿ ಅಳಗೇಷನ್ ರಂಗಸ್ವಾಮಿ ಮಾತನಾಡಿ, ಪ್ರೊಪರ್‌ ಪ್ರೀ ಪ್ಲಾನಿಂಗ್‌ ಪ್ರೆವೆಂಟ್ಸ್‌ ಪೂರ್ ಪರ್ಫಾರ್ಮೆನ್ಸ್‌ (ಸರಿಯಾದ ಪೂರ್ವಯೋಜನೆಯು ಕಳಪೆ ಪ್ರದರ್ಶನ ತಡೆಯುತ್ತದೆ) ಎಂಬ 6 ಪಿ ಸೂತ್ರವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ಜಿ.ಎಚ್.ನಾಗಹನುಮಯ್ಯ ಮಾತನಾಡಿ, ಗ್ರಾಮೀಣ ಭಾಗದ ಉದಯೋನ್ಮುಖ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ವಿದ್ಯಾರ್ಥಿವೇತನ, ಪ್ರಶಸ್ತಿ ನೀಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

​ಕೊರೊನಾ ಸಾಂಕ್ರಾಮಿಕದ ಕಾರಣದಿಂದಾಗಿ ಕಳೆದ ಕೆಲವು ವರ್ಷಗಳಿಂದ ಈ ಕಾರ್ಯಕ್ರಮ ಸ್ಥಗಿತಗೊಂಡಿತ್ತು. ಆದರೆ, ಈ ವರ್ಷದಿಂದ ಇದನ್ನು ಮರುಆರಂಭಿಸಲಾಗುತ್ತಿದ್ದು, ಪ್ರಥಮ ವರ್ಷದ ವೈದ್ಯಕೀಯ, ತಾಂತ್ರಿಕ, ಕೃಷಿ ಹಾಗೂ ಪಶುವೈದ್ಯಕೀಯ ಪದವಿ ಕೋರ್ಸ್‌ಗಳಿಗೆ ಸೇರಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಂಘದ ಆಡಳಿತ ಮಂಡಳಿಯ ತೀರ್ಮಾನದಂತೆ ವಿದ್ಯಾರ್ಥಿವೇತನ ಮತ್ತು ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದರು.

​ಸಾಧಕರಿಗೆ ಗೌರವ ಸನ್ಮಾನ: ಕುಂಚಿಟಿಗ ಸಮುದಾಯದ ಶಾಸಕ, ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ​ಜಲಸಂಪನ್ಮೂಲ ಇಲಾಖೆಯ ನಿವೃತ್ತ ಕಾರ್ಯದರ್ಶಿ ಕೆ.ಜಯಪ್ರಕಾಶ್, ಕೇಂದ್ರ ನೀರಾವರಿ ಇಲಾಖೆ ನಿವೃತ್ತ ಅಧಿಕಾರಿ ಅಳಗೇಷನ್‌ ರಂಗಸ್ವಾಮಿ, ಕರ್ನಾಟಕ ಕ್ರಿಕೆಟ್‌ ಅಕಾಡೆಮಿ ಸದಸ್ಯ ಸಿ.ಆರ್‌.ರಮೇಶ್ ಸೇರಿದಂತೆ ವೈದ್ಯಕೀಯ, ಎಂಜಿನಿಯರಿಂಗ್, ಕೃಷಿ, ತೋಟಗಾರಿಕೆ, ಪದವಿ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು.

ಸಂಘ ಅಧ್ಯಕ್ಷ ಎಸ್.ಕೆ.ಲಕ್ಷ್ಮಣ್ ​ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ​ಉಪಾಧ್ಯಕ್ಷರಾದ ರಾಮಾಂಜನಪ್ಪ, ​ಡಾ.ಭೋಗಣ್ಣ, ಕಾರ್ಯದರ್ಶಿ ನಾಗಹನುಮಯ್ಯ, ಖಜಾಂಚಿ ​ಡಿ.ಟಿ.ವಿಜಯಕುಮಾರ್, ಪದಾಧಿಕಾರಿಗಳು, ಸದಸ್ಯರು, ವಿದ್ಯಾರ್ಥಿಗಳು, ಪೋಷಕರು ಇತರರಿದ್ದರು.

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲುಬೌದ್ಧಿಕ ಶ್ರೇಷ್ಠತೆಯ ವ್ಯಸನದಿಂದ ಅಂಬೇಡ್ಕರ್ ಚಳುವಳಿ ಹಿಮ್ಮುಖವಾಗಿ ಚಲಿಸುತ್ತಿದೆ