Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶಾಲೆಯಲ್ಲಿ ‘ಬೇಟಿ ಬಚಾವೋ, ಬೇಟಿ ಪಡಾವೋ’ ಕಾರ್ಯಕ್ರಮ ಯಶಸ್ವಿ

Advertisement
Advertisement

ಚಂದ್ರವಳ್ಳಿ ನ್ಯೂಸ್, ಕಣಜನಹಳ್ಳಿ:
ಹೆಣ್ಣು ಮಕ್ಕಳ ರಕ್ಷಣೆ ಮತ್ತು ಅವರ ಶಿಕ್ಷಣಕ್ಕೆ ಪ್ರತಿಯೊಬ್ಬರೂ ಆದ್ಯತೆ ನೀಡಬೇಕು ಎಂದು ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ರೇಣುಕಾ ಕರೆ ನೀಡಿದರು.

​ಗ್ರಾಮದ ಸರ್ಕಾರಿ ಶಾಲಾ ಕೊಠಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಬೇಟಿ ಬಚಾವೋ, ಬೇಟಿ ಪಡಾವೋಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಹೆಣ್ಣು ಮಕ್ಕಳ ಸಬಲೀಕರಣಕ್ಕೆ ಪೋಷಕರು ಮತ್ತು ಸಮಾಜ ಜಂಟಿಯಾಗಿ ಶ್ರಮಿಸಬೇಕಾದ ಅಗತ್ಯವನ್ನು ಅವರು ಈ ಸಂದರ್ಭದಲ್ಲಿ ಪ್ರತಿಪಾದಿಸಿದರು.

​​ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರದೀಪ್ ಅವರು, ಗ್ರಾಮೀಣ ಭಾಗದಲ್ಲಿ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಸಿಗುವಂತಾಗಲು ಪಂಚಾಯಿತಿ ಮಟ್ಟದಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಸದಾ ಸಿದ್ಧ ಎಂದರು.

​KMSPB ಸಂಸ್ಥೆಯ ಜಯರಾಮ್, ಶಾಲೆಯ ಮುಖ್ಯೋಪಾಧ್ಯಾಯ ಗಣೇಶ್ ಹಾಗೂ ಶಿಕ್ಷಕ ಗಿರಿರಾಜ್ ಅವರು ಬೇಟಿ ಬಚಾವೋ, ಬೇಟಿ ಪಡಾವೋಯೋಜನೆಯ ಮಹತ್ವ ಹಾಗೂ ಹೆಣ್ಣು ಮಕ್ಕಳ ಶಿಕ್ಷಣದಿಂದ ಸಮಾಜದಲ್ಲಿ ಆಗುವ ಧನಾತ್ಮಕ ಬದಲಾವಣೆಗಳ ಕುರಿತು ಜಾಗೃತಿ ಮೂಡಿಸುವ ಭಾಷಣ ಮಾಡಿದರು.

​​ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ಮೇಘನಾ, ಲಕ್ಷ್ಮಿದೇವಿ, ಶ್ರೀದೇವಿ, ರಂಜಿತಾ, ಶೃತಿ, ದುರ್ಗಮ್ಮ, ದೇವಿರಮ್ಮ, ಭಾಗ್ಯಮ್ಮ, ಸಿದ್ದಗಂಗಮ್ಮ, ಪಾರ್ವತಮ್ಮ ಹಾಗೂ ಜಯಮ್ಮ ಉಪಸ್ಥಿತರಿದ್ದರು. ಅಲ್ಲದೆ, ಅಂಗನವಾಡಿ ಸಹಾಯಕಿಯರಾದ ಮುದ್ದಮ್ಮ ಮತ್ತು ಗಾಯತ್ರಮ್ಮ ಅವರು ಭಾಗವಹಿಸಿದ್ದರು.

​ಶಾಲಾ ಮಕ್ಕಳು, ಅಂಗನವಾಡಿ ಪುಟಾಣಿಗಳು, ಮಕ್ಕಳ ತಾಯಂದಿರು ಹಾಗೂ ಊರಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

 

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗ್ರಾಮೀಣ ಪತ್ರಕರ್ತರ ಬಸ್ ಪಾಸ್, ಮಾಧ್ಯಮ ಸಂಜೀವಿನಿ ಯೋಜನೆ ಶೀಘ್ರ ಜಾರಿಗೆ ಕೆಯುಡಬ್ಲ್ಯೂಜೆ ಆಗ್ರಹಜೂನ್ 20ರಂದು ಜಿಲ್ಲಾಸ್ಪತ್ರೆಯಲ್ಲಿ ಉಚಿತ ಮೂತ್ರಕೋಶ ತಪಾಸಣೆಟಿ. ಎಂ. ಸಿ. ಬ್ಯಾಂಕ್ ಸರ್ವ ಸದಸ್ಯರ ಸಭೆದೊಡ್ಡಬಳ್ಳಾಪುರ ತಿರುವಣ್ಣ ಮಲೈ ಮಾರ್ಗದ ಕೆಎಸ್ಆರ್ ಟಿಸಿ ಸೇವೆ ಮುಂದುವರೆಸಲು ಒತ್ತಾಯಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಹಳೆಯ ವಿದ್ಯಾರ್ಥಿಗಳಿಂದ ಗೌರವ ಪುರಸ್ಕಾರ"ಸಿಎಂ ಆದ ಮೇಲಾದರೂ ನೀಲಿ ಚಿತ್ರ, ಪೋಸ್ಟರ್ ಮಾಡೋದು ಬಿಡ್ತಾರೆ ಅಂದ್ಕೊಂಡಿದ್ದೆ" – ಡಿಕೆಶಿ ವಿರುದ್ಧ ಹೆಚ್‌ಡಿಕೆ ಬಾಂಬ್!ಹಿರಿಯೂರಿನಲ್ಲಿ ರೈತರ ಕುಂದುಕೊರತೆ ಸಭೆ: ವಿವಿಧ ಇಲಾಖೆಗಳಿಂದ ಸ್ಥಳದಲ್ಲೇ ಪರಿಹಾರಮಧ್ಯರಾತ್ರಿ ಸ್ನೇಹಿತನಿಗೆ ಕರೆ ಮಾಡಿ ಪಿಎಸ್‌ಐ ಬಸವರಾಜ ಹೆರೂರ್ ಆತ್ಮಹತ್ಯೆ!ವಿಧಾನ ಪರಿಷತ್ ಚುನಾವಣೆ ತಲ್ಲಣ; ಕ್ರಾಸ್ ವೋಟಿಂಗ್ ಭೀತಿಯಲ್ಲಿ ಕಾಂಗ್ರೆಸ್ ಶಾಸಕರುಪಿಎಚ್‌ಡಿ ವಿದ್ಯಾರ್ಥಿನಿ ಲೈಂಗಿಕ ಸಂಪರ್ಕ; ಪ್ರಾಧ್ಯಾಪಕ ದೇವರಾಜನ್ ಅಮಾನತು