Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಭಾರಿ ಬಿರುಗಾಳಿ ಎಬ್ಬಿಸಿದ ಕಾಕ್ರೋಚ್ ಜನತಾ ಪಾರ್ಟಿ

Advertisement
Advertisement

ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ವಿವಾದಾತ್ಮಕ ಹೇಳಿಕೆಯೊಂದರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾಗಿರುವ ಕಾಕ್ರೋಚ್ ಜನತಾ ಪಾರ್ಟಿಭಾರಿ ಬಿರುಗಾಳಿ ಎಬ್ಬಿಸಿದೆ. ಕೇವಲ ವಿಡಂಬನೆಗಾಗಿ ಆರಂಭವಾದ ಈ ಖಾತೆ, ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ಕೇಂದ್ರದ ಆಡಳಿತಾರೂಢ ಬಿಜೆಪಿಯ ಅಧಿಕೃತ ಪುಟವನ್ನೇ ಫಾಲೋವರ್ಸ್ ಸಂಖ್ಯೆಯಲ್ಲಿ ಹಿಂದಿಕ್ಕಿ ಹೊಸ ದಾಖಲೆ ಬರೆದಿದೆ.

ಕಳೆದ ವಾರವಷ್ಟೇ ಅಸ್ತಿತ್ವಕ್ಕೆ ಬಂದ ಈ ಡಿಜಿಟಲ್ ಪ್ರತಿಭಟನಾ ಪುಟ, ಭಾರತದ ರಾಜಕೀಯ ಮತ್ತು ಯುವ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.

ಕೇವಲ 5 ದಿನದಲ್ಲಿ 1 ಕೋಟಿಗೂ ಅಧಿಕ ಫಾಲೋವರ್ಸ್!:
ಇನ್‌ಸ್ಟಾಗ್ರಾಮ್‌ನಲ್ಲಿ ಖಾತೆ ಆರಂಭಿಸಿದ ಕೇವಲ 5 ದಿನಗಳಲ್ಲೇ ಈ ಪುಟ ಬರೋಬ್ಬರಿ 10 ಮಿಲಿಯನ್ (1 ಕೋಟಿ) ಗೂ ಅಧಿಕ ಫಾಲೋವರ್ಸ್ ಗಳಿಸುವ ಮೂಲಕ ಇತಿಹಾಸ ನಿರ್ಮಿಸಿದೆ. ಸದ್ಯ @cockroachjantaparty ಹೆಸರಿನ ಈ ಇನ್‌ಸ್ಟಾಗ್ರಾಮ್ ಖಾತೆಯು 10.6 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿದ್ದು, ಈ ಸಂಖ್ಯೆ ಕ್ಷಣಕ್ಷಣಕ್ಕೂ ತೀವ್ರವಾಗಿ ಏರಿಕೆಯಾಗುತ್ತಿದೆ.

ಪ್ರಮುಖ ರಾಜಕೀಯ ಪಕ್ಷಗಳ ಫಾಲೋವರ್ಸ್ ವಿವರ:
ಸದ್ಯ ಇನ್‌ಸ್ಟಾಗ್ರಾಮ್‌ನಲ್ಲಿ ದೇಶದ ಪ್ರಮುಖ ರಾಜಕೀಯ ಪಕ್ಷಗಳ ಅಧಿಕೃತ ಖಾತೆಗಳ ಫಾಲೋವರ್ಸ್ ಸಂಖ್ಯೆ ಹೀಗಿದೆ:

ಕಾಂಗ್ರೆಸ್ (@incindia): ಸುಮಾರು 13.2 ಮಿಲಿಯನ್ ಫಾಲೋವರ್ಸ್: ಕಾಕ್ರೋಚ್ ಜನತಾ ಪಾರ್ಟಿ (@cockroachjantaparty): 10.6 ಮಿಲಿಯನ್ ಫಾಲೋವರ್ಸ್:
ಬಿಜೆಪಿ (@bjp4india): ಸುಮಾರು 8.7 ಮಿಲಿಯನ್ ಫಾಲೋವರ್ಸ್:
ಆಮ್ ಆದ್ಮಿ ಪಾರ್ಟಿ: ಸುಮಾರು 1.9 ಮಿಲಿಯನ್ ಫಾಲೋವರ್ಸ್:
ರಾಜಕೀಯ ಪಕ್ಷಗಳ ಕೋಟ್ಯಂತರ ರೂಪಾಯಿ ಐಟಿ ಸೆಲ್ ಬಜೆಟ್‌ಗಳನ್ನೂ ಮೀರಿಸಿ, ಕೇವಲ ಒಂದು ವಾರದ ವಿಡಂಬನಾತ್ಮಕ ಪೇಜ್ ಈ ಮಟ್ಟದ ಜನಪ್ರಿಯತೆ ಪಡೆದಿರುವುದು ಇಡೀ ದೇಶದ ಗಮನ ಸೆಳೆದಿದೆ.

ಹಿನ್ನೆಲೆ: ಮುಖ್ಯ ನ್ಯಾಯಮೂರ್ತಿಗಳ ಹೇಳಿಕೆಗೆ ಯುವಸಮೂಹದ ಆಕ್ರೋಶ:
ಕಳೆದ ಶುಕ್ರವಾರ ವಿಚಾರಣೆಯೊಂದರ ವೇಳೆ ಮಾತನಾಡಿದ್ದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು, "ದೇಶದ ನಿರುದ್ಯೋಗಿ ಯುವಕರು 'ಜಿರಳೆಗಳಂತೆ' (Cockroaches) ವರ್ತಿಸುತ್ತಿದ್ದಾರೆ. ಅವರಲ್ಲಿ ಕೆಲವರು ಮಾಧ್ಯಮಗಳಲ್ಲಿ, ಇನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮತ್ತೊಂದಿಷ್ಟು ಜನ ಆರ್‌ಟಿಐ (RTI) ಕಾರ್ಯಕರ್ತರಾಗಿ ಕಾಟ ಕೊಡುತ್ತಿದ್ದಾರೆ" ಎಂದು ತೀಕ್ಷ್ಣವಾಗಿ ಟೀಕಿಸಿದ್ದರು.

ಮುಖ್ಯ ನ್ಯಾಯಮೂರ್ತಿಗಳ ಈ 'ಜಿರಳೆ' ಹೋಲಿಕೆ ದೇಶದ ಯುವಸಮುದಾಯ ಹಾಗೂ ನಿರುದ್ಯೋಗಿ ಯುವಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಅವಮಾನಕ್ಕೆ ವಿಭಿನ್ನವಾಗಿ ಪ್ರತಿಭಟನೆ ದಾಖಲಿಸಲು ಮುಂದಾದ ಯುವಕರು, ಸಾಮಾಜಿಕ ಜಾಲತಾಣಗಳಲ್ಲಿ "ಕಾಕ್ರೋಚ್ ಜನತಾ ಪಾರ್ಟಿ" ಎಂಬ ಪೇಜ್ ಆರಂಭಿಸಿ, ವ್ಯವಸ್ಥೆಯ ವಿರುದ್ಧ ವಿಡಂಬನಾತ್ಮಕ ಟ್ರೋಲ್‌ಗಳ ಮೂಲಕ ಆಕ್ರೋಶ ಹೊರಹಾಕುತ್ತಿದ್ದಾರೆ. ಸದ್ಯ ಈ ಟ್ರೆಂಡ್ ರಾಜಕೀಯವಾಗಿಯೂ ಭಾರಿ ಸದ್ದು ಮಾಡುತ್ತಿದೆ.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸೂರ್ಯನ ರೌದ್ರಾವತಾರ: ಒಂದೇ ದಿನ ಬಿಸಿಲಿಗೆ 22 ಬಲಿ, ಹಲವು ಜಿಲ್ಲೆಗಳಿಗೆ 'ರೆಡ್ ಅಲರ್ಟ್'ರಾಜ್ಯಾದ್ಯಂತ ಮುಂದಿನ 5 ದಿನ ವರುಣನ ಆರ್ಭಟ: ಹಲವು ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್'ಕಾಂಗ್ರೆಸ್‌ನಲ್ಲಿ ‘ಸಂಪುಟ’ ಸರ್ಕಸ್: ‘ಮಾಡು ಇಲ್ಲವೇ ಮಡಿ’ ಹೋರಾಟಕ್ಕೆ 35 ಶಾಸಕರು ಹೈಕಮಾಂಡ್ ದರ್ಬಾರ್‌ಗೆ!ನಕಲಿ ಡಾಕ್ಟರ್ ಅವತಾರ: ಹತ್ತಕ್ಕೂ ಹೆಚ್ಚು ಯುವತಿಯರಿಗೆ ಕೋಟಿ ಕೋಟಿ ವಂಚಿಸಿ ಅಮ್ಮ-ಮಗ ಎಸ್ಕೇಪ್!ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯ ವಾಹಿನಿಗೆ ಕರೆ ತನ್ನಿಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಸಚಿವ ಕೆ.ಹೆಚ್ ಮುನಿಯಪ್ಪಸರ್ಕಾರಿ ಅನುದಾನಿತ ಶಾಲೆಗೆ ಬೀಗ-ಕರುನಾಡ ರಾಷ್ಟ್ರೀಯ ಸೇನೆ ಆಗ್ರಹಗೋಹತ್ಯೆ ನಿಷೇಧಕ್ಕೆ ಶ್ರೀರಾಮ ಸೇನೆ ಆಗ್ರಹವೀರಶೈವ ಲಿಂಗಾಯತ ಸಮಾಜದ ಮುಖಂಡ ಮುತ್ತಣ್ಣ ನಿಧನಕಸ ವಿಂಗಡನೆ ಕುರಿತು ಜಾಗೃತಿ ಮೂಡಿಸುವ ವಿಶೇಷ ಅಭಿಯಾನಕ್ಕೆ ಚಾಲನೆ