Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಲೆಯಲ್ಲಿ ಸಿಲುಕಿದ್ದ ಹೆಬ್ಬಾವನ್ನು ರಕ್ಷಿಸಿದ ಗ್ರಾಮಸ್ಥರು

Advertisement
Advertisement

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬೆಳವಂಗಲ ಹೋಬಳಿ ಹುಲುಕುಡಿ ಬೆಟ್ಟದ ತಪ್ಪಲಿನ ಮಾಡೇಶ್ವರ ಗ್ರಾಮದ ಸಮೀಪ ಬೃಹತ್ ಗಾತ್ರದ ಹೆಬ್ಬಾವು ಮೀನು ಹಿಡಿಯಲು ಹಾಕಿದ್ದ ಹಳೆಯ ಬಲೆಗೆ ಬೃಹತ್ ಗಾತ್ರದ ಹೆಬ್ಬಾವು ಸಿಲುಕಿಕೊಂಡು ಒದ್ದಾಡುತ್ತಿದ್ದಾಗ
,ಸ್ಥಳೀಯರು ಗಮನಿಸಿದ ವೇಳೆ ಹೆಬ್ಬಾವು ಬಲೆಯಲ್ಲಿ ಸಿಕ್ಕಿಹಾಕಿಕೊಂಡು ಹೊರಬರಲು ಹರಸಾಹಸ ಪಡುತ್ತಿತ್ತು. ಬಲೆಯಿಂದ ತಪ್ಪಿಸಿಕೊಳ್ಳಲು ನಡೆಸಿದ ಪ್ರಯತ್ನದ ಪರಿಣಾಮ ಅದರ ಬಾಯಿ  ರಕ್ತಸ್ರಾವವಾಗಿರುವುದು ಕಂಡುಬಂದಿದೆ.

ಹೆಬ್ಬಾವನ್ನು ಕಂಡ ಗ್ರಾಮಸ್ಥರು ಆರಂಭದಲ್ಲಿ ಆತಂಕಗೊಂಡರೂ ಧೈರ್ಯದಿಂದ ಕಾರ್ಯಾಚರಣೆ ನಡೆಸಿ, ಬಲೆಯನ್ನು ಕತ್ತರಿಸಿ ಹೆಬ್ಬಾವನ್ನು ರಕ್ಷಿಸಿದ್ದಾರೆ. ಬಳಿಕ ಘಟನೆ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಹೆಬ್ಬಾವಿನ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿ, ಅಗತ್ಯ ಚಿಕಿತ್ಸೆ ಹಾಗೂ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.

ಅರಣ್ಯ ಪ್ರದೇಶಗಳ ಸಮೀಪ ಹಳೆಯ ಮೀನಿನ ಬಲೆಗಳು, ಪ್ಲಾಸ್ಟಿಕ್ ಹಾಗೂ ಇತರೆ ತ್ಯಾಜ್ಯ ವಸ್ತುಗಳನ್ನು ಎಸೆಯುವುದರಿಂದ ವನ್ಯಜೀವಿಗಳಿಗೆ ಗಂಭೀರ ಅಪಾಯ ಉಂಟಾಗುತ್ತಿದೆ. ಮೀನಿನ ಬಲೆಯಲ್ಲಿ ಸಿಲುಕಿ ಹೆಬ್ಬಾವು ಸಂಕಷ್ಟಕ್ಕೆ ಸಿಲುಕಿರುವ ಈ ಘಟನೆ ಪರಿಸರ ಸಂರಕ್ಷಣೆ ಮತ್ತು ವನ್ಯಜೀವಿ ರಕ್ಷಣೆಯ ಕುರಿತು ಹೆಚ್ಚಿನ ಜಾಗೃತಿಯ ಅಗತ್ಯವನ್ನು ಮತ್ತೊಮ್ಮೆ ನೆನಪಿಸಿದೆ.

ಸ್ಥಳೀಯರು ವನ್ಯಜೀವಿಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕು ಹಾಗೂ ಇಂತಹ ತ್ಯಾಜ್ಯ ವಸ್ತುಗಳನ್ನು ಅರಣ್ಯ ಪ್ರದೇಶಗಳಲ್ಲಿ ಎಸೆಯದಂತೆ ಎಚ್ಚರಿಕೆ ವಹಿಸಬೇಕಾಗಿದೆ. ಪ್ರಾಣಿ ಪಕ್ಷಿ ಜೀವ ಜಂತು ಭೂಮಿಯ ಮೇಲೆ ಉಳಿದರೆ ಪ್ರಕೃತಿ ಹಾಗೂ ಮಾನವ ಉಳಿಯಲು ಸಾದ್ಯ  ಎಂಬುದು ಎಲ್ಲರೂ ಮನವರಿಕೆ ಮಾಡಿಕೊಳ್ಳಬೇಕಿದೆ.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನ್ಯಾಷನಲ್ ಫ್ರೈಡ್ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಪಟ್ಟಣ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸಿ.ನಾರಾಯಣಸ್ವಾಮಿ ಆಯ್ಕೆಕೆ.ಹೆಚ್ ಮುನಿಯಪ್ಪ ರವರ ಹಿರಿತನಕ್ಕೆ ತಕ್ಕ ಖಾತೆ ನೀಡಬೇಕು-ಆರ್.ವಿ ಮಹೇಶ್ಹಸಿರ ಒಡಲಿಗೆ ಚಿಣ್ಣರ ಪ್ರೀತಿಯ ಸ್ಪರ್ಶ: ಕರಗಿದ ಕಲ್ಲುಕೋಟೆಯ ನಾಡು!ಮಲ್ಲಿಕಾರ್ಜುನ ಖರ್ಗೆ, ಪವನ್ ಖೇರಾ ಸೇರಿ ಮೂವರಿಂದ ನಾಮಪತ್ರ ಸಲ್ಲಿಕೆಬಿಜೆಪಿಗೆ ಅಣ್ಣಾಮಲೈ ಗುಡ್‌ಬೈ: 6 ವರ್ಷಗಳ ಸುದೀರ್ಘ ಸಂಬಂಧ ಅಂತ್ಯ, ರಾಜೀನಾಮೆ ಅಂಗೀಕರಿಸಿದ ಹೈಕಮಾಂಡ್ಸರ್ಕಾರಕ್ಕೆ ಮೊದಲ ಶಾಕ್: ಸಚಿವ ಸ್ಥಾನಕ್ಕೆ ರಾಮಲಿಂಗಾರೆಡ್ಡಿ ರಾಜೀನಾಮೆ!ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈತಪ್ಪಿಲ್ಲ, ಅದು ಪಕ್ಷದ ‘ಒಬ್ಬರಿಗೆ ಒಂದು ಹುದ್ದೆ’ ಸೂತ್ರ: ಸಚಿವ ಸತೀಶ್ ಜಾರಕಿಹೊಳಿಖಾತೆ ಕಿಚ್ಚು: ಸಚಿವರ ಅಸಮಾಧಾನದ ಸವಾಲಿಗೆ 'ಕನಕಪುರ ಬಂಡೆ' ರೆಡಿ!ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಶಂಕಿತ ಉಗ್ರನ ಬಂಧನ: ತುಮಕೂರು ಪೊಲೀಸರ ಭರ್ಜರಿ ಕಾರ್ಯಾಚರಣೆ!