Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಯುವ ರೈತ ಮತ್ತು ರೈತ ಮಹಿಳೆಯರಿಗೆ ಮೂರು ದಿನಗಳ ಉಚಿತ ತರಬೇತಿ

Advertisement
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹಿರಿಯೂರು ತಾಲ್ಲೂಕಿನ ಬಬ್ಬೂರುಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಇದೇ ಸೆ.09 ರಿಂದ 11 ರವರೆಗೆ ಚಿತ್ರದುರ್ಗ ಜಿಲ್ಲೆಯ ಆಸಕ್ತ ರೈತರಿಗೆ ಉದ್ಯಮಶೀಲತೆ ಸ್ಥಾಪನೆ ಹಾಗೂ ಬೆಳವಣಿಗೆ ಕುರಿತು ಮೂರು ದಿನಗಳ ಉಚಿತ ತರಬೇತಿ ಕಾರ್ಯಕ್ರಮ ಹಮ್ಮಿಕೋಳ್ಳಲಾಗಿದೆ.

ಸೆ.09ರಂದು ಬೆಳಗ್ಗೆ 10ಕ್ಕೆ ಹಿರಿಯೂರು ಕೃಷಿ ವಿಜ್ಞಾನ ಕೇಂದ್ರದ ಗೃಹ ವಿಜ್ಞಾನದ ವಿಜ್ಞಾನಿಗಳಾದ ಡಾ.ಜೆ.ಎಂ.ಸರಸ್ವತಿ ಅವರು ಹೊಸದಾಗಿ ವಿವಿಧ ಪ್ರಾರಂಭಿಕ ಆದಾಯ ಉತ್ಪನ್ನ ಚಟುವಟಿಕೆಗಳು, ಅವುಗಳ ಆಯ್ಕೆಯ ಮಾನದಂಡ, ವಿಸ್ತøತ ವರದಿ ತಯಾರಿಕೆ, ಬೆಳವಣಗೆ ಕುರಿತು ವಿಷಯ ಮಂಡನೆ ಮಾಡುವರು. ಪಿಎಂಎಫ್‍ಎಂಇ ಯೋಜನೆಯಡಿ ವಿವಿಧ ಆಹಾರ ಸಂಸ್ಕರಣೆ ಘಟಕಗಳ ಸ್ಥಾಪನೆ ಕುರಿತು ಮೋಹನ್ ಕುಮಾರ್ ಇವರು ಮಾಹಿತಿ ನೀಡುವರು.

ಸೆ.10ರಂದು ವಾಣಿವಿಲಾಸಪುರದ ಶ್ರೀರಾಮ ಆತ್ಮ ಆಹಾರ ಭದ್ರತಾ ಗುಂಪಿನ ಪಿ.ಸುಮತಿ ಅವರು, ವಿವಿಧ ಸ್ವಉದ್ಯೋಗ ಚಟುವಟಿಕೆಗಳಾದ ಸಿರಿಧಾನ್ಯಗಳ ಮೌಲ್ಯವರ್ಧನೆ ಆಧಾರಿತ ಉತ್ಪನ್ನಗಳು, ಬಾಳೆಕಾಯಿಯಿಂದ ತಯಾರಿಸುವ ಚಿಪ್ಸ್, ಉಪ್ಪಿನಕಾಯಿ, ಬಾಳೆ ಹುಡಿ, ಶೇಂಗಾ ಚಿಕ್ಕಿ, ಉಂಡೆ ಮತ್ತು ಶೇಂಗಾ ಬೆಣ್ಣೆ ಮಾಡುವ ವಿಧಾನದ ಕುರಿತು ತಿಳಿಸುವರು. ಜೇನು ತಜ್ಞ ಶಾಂತವೀರಯ್ಯ ಅವರು ಜೇನು ಕೃಷಿ ಮತ್ತು ಜೇನು ಕೃಷಿಯ ಉಪ ಉತ್ಪನ್ನಗಳ ಕುರಿತು ಮಾಹಿತಿ ನೀಡುವರು.

ಸೆ.11ರಂದು ಮರಡಿದೇವಿಗೆರೆಯ ಸಾಂಪ್ರದಾಯಿಕ ಆಹಾರ ತಜ್ಞರಾದ ಡಾ. ಈಶ್ವರನ್ ಪಿ ತೀರ್ಥ ಅವರು ವಿವಿಧ ಮೌಲ್ಯವರ್ಧನೆ ಆಧಾರಿತ ಎಣ್ಣಗಾಯಿ, ಹರ್ಬಲ್ ಟೀ, ಕಷಾಯ, ಮಾಲ್ದಿ, ಮಾಲ್ಟ್, ಹೂವಿನ ಟೀ  , ಮುಗಿಲಮೆಣಸಿನ ಕಾಯಿ ಚಟ್ನೀ ಕುರಿತು ವಿಷಯ ಮಂಡನೆ ಮಾಡುವರು. ನಂತರ ಸಿರಿಧಾನ್ಯಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಕುರಿತು ಪರಿಸಿರಿ ನ್ಯಾಚುರಲ್ಸ್, ಲಕ್ಕಿಹಳ್ಳಿಯ  ಲೋಕೇಶ್ ರೈತರಿಗೆ ಮಾಹಿತಿ ನೀಡುವರು.

ಕೆನರಾ ಬ್ಯಾಂಕ್ ಚಿತ್ರದುರ್ಗದ ಆರ್ಥಿಕ ಸಾಕ್ಷರತಾ ಕೇಂದ್ರದ ಆರ್ಥಿಕ ಸಲಹೆಗಾರ ತಿಪ್ಪೇಸ್ವಾಮಿ ಅವರು ಬ್ಯಾಂಕ್‍ನಿಂದ ದೊರೆಯುವ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ನೀಡುವರು.

ಆದ ಪ್ರಯುಕ್ತ ಆಸಕ್ತ 40 ಜನ ರೈತ ಭಾಂದವರು ತರಬೇತಿಯಲ್ಲಿ ಭಾಗವಹಿಸಲು ಮೊಬೈಲ್ ಸಂಖ್ಯೆ 8277931058 ಗೆ ಕರೆಮಾಡಿ ತರಬೇತಿಯ ಸದುಪಯೋಗ ಪಡೆದು ಕೊಳ್ಳಬಹುದು.

ಮೊದಲು ನೋಂದಾವಣಿ ಮಾಡಿಕೊಂಡ 40 ಜನ ರೈತಭಾಂದವರಿಗೆ ಆದ್ಯತೆ ಮೇರೆಗೆ ತರಬೇತಿಗೆ ಪರಿಗಣಿಸಲಾಗುವುದು ಹಾಗೂ ತರಬೇತಿಗೆ ಹಾಜರಾಗುವ ರೈತಬಾಂಧವರು ಕಡ್ಡಾಯವಾಗಿ ತಮ್ಮ ಎಫ್‍ಐಡಿ ಕಾರ್ಡ್ ಅಥವಾ ಚುನಾವಣೆ ಗುರುತಿನ ಚೀಟಿಯನ್ನು ತರಬೇಕು ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಹಾಗೂ ಮುಖ್ಯಸ್ಥ ಆರ್.ರಜನೀಕಾಂತ ಕೋರಿದ್ದಾರೆ.



 



Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ