Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಯುಗಾದಿ

Advertisement
ಯುಗಾದಿ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು :

ಯುಗ ಯುಗಾದಿ ಕಳೆದರೂ
ಯುಗ ಯುಗಗಳೆ ಕಳೆದರೂ
ಹಸಿವು ಮರಳಿ ಬರುತಿದೆ
ಹೊಸ ವರುಷಕೆ
ಹೊಸಹರುಷವು
ಮತ್ತೆ ಮತ್ತೆ ಮರೆಸಿದೆ

ಯುಗ ಯುಗಾದಿ ಕಳೆದರು
ಯುಗ ಯುಗಗಳೆ ಕಳೆದರು
ಅಪಮಾನ
ಮರಳಿ ಮರಳಿ ಬರುತಿದೆ
ಅತ್ತೂ ಅತ್ತೂ ರಕ್ತ ಕಣ್ಣೀರು ಸುರಿಸಿದೆ

ಯುಗಸ್ಥ ಯುಗಾದಿ ಕಳೆದರು
ಯುಗ ಯುಗಗಳೆ ಕಳೆದರು
ಅಸ್ಪೃಶ್ಯತೆ ಮರಳಿ ಮರಳಿ ಬರುತಿದೆ
ಗುಡಿ ಚರ್ಚ್ ಮಸೀದಿ
ದೂರ ದೂರ ನಗುತಿವೆ

ಯುಗ ಯುಗಾದಿ ಕಳೆದರು
ಯುಗ ಯುಗಗಳೆ ಕಳೆದರು
ಜಾತೀಯತೆ ಮರಳಿ ಮರಳಿ ಬರುತಿದೆ
ಕೆರೆ ಕಟ್ಟೆ ಬಾವಿ ನಳದ ನೀರು
ಕೖ ಸನ್ನೆ ಕುಹಕ ಮಾಡಿ ನುಡಿತಿವೆ

ಯುಗ ಯುಗಾದಿ ಕಳೆದರು
ಯುಗ ಯುಗಗಳೆ ಕಳೆದರು
ಶೋಷಣೆ ಮರಳಿ ಮರಳಿ ಬರುತಿದೆ
ಶೋಷಕರ ಅಟ್ಟಹಾಸ
ದಿನ ದಿನವು ಮಿತಿಮೀರಿದೆ

ಯುಗ ಯುಗಾದಿ ಕಳೆದರು
ಯುಗ ಯುಗಗಳೆ ಕಳೆದರು
ಅತ್ಯಾಚಾರ ಮರಳಿ ಮರಳಿ ಬರುತಿದೆ
ಕಾಮುಕರ ಕಪಿ ಮುಷ್ಟಿಗೆ ಹೆಣ್ಣು ಜೀವ ಅಳುತಿದೆ

ಯುಗ ಯುಗಾದಿ ಕಳೆದರು
ಯುಗ ಯುಗಗಳೆ ಕಳೆದರು
ಅಧರ್ಮ ಮರಳಿ ಮರಳಿ ಬರುತಿದೆ
ಕಾವಿಬಟ್ಟೆ ಕೋವಿ ಆಗಿ
ಬಡಜನರ ಜೀವ ಸುಡುತಿದೆ

ಯುಗ ಯುಗಾದಿ ಕಳೆದರು
ಯುಗ ಯುಗಗಳೆ ಕಳೆದರು
ಭ್ರಷ್ಟಾಚಾರ ಮರಳಿ ಮರಳಿ
ಬರುತಿದೆ
ಖಾದಿ ಖಾಕಿ ಊರು ಕೇರಿ
ಕತ್ತು ಕೊಯ್ದು ಕೇಕೆ ಹಾಕಿ ಕುಣಿತಿವೆ

ಬೆಲ್ಲ ಇಲ್ಲ ಬೇವೇ ಎಲ್ಲ
ಬಡವ ಮಹಿಳೆ ದಲಿತರಿಗಷ್ಟೇ ಏತಕೆ?

ಕವಿತೆ:ಡಾ. ತಿಪ್ಪೇಸ್ವಾಮಿ ಕೆರೆಯಾಗಳಹಳ್ಳಿ
ಕನ್ನಡ ಉಪನ್ಯಾಸಕರು
ಚಿತ್ರದುರ್ಗ
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ