ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನಗರದ ಸಾರ್ವಜನಿಕರೇ ಗಮನಿಸಿ, ವಾಣಿವಿಲಾಸ ಜಲಾಶಯದಿಂದ (ವಿ.ವಿ. ಸಾಗರ) ನಗರಕ್ಕೆ ಕುಡಿಯುವ ನೀರು ಪೂರೈಸುವ ಪ್ರಮುಖ ಪೈಪ್‌ಲೈನ್‌ನಲ್ಲಿ ತಾಂತ್ರಿಕ ದೋಷ ಹಾಗೂ ವಿದ್ಯುತ್ ಕೈಕೊಟ್ಟ ಹಿನ್ನೆಲೆಯಲ್ಲಿ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಹಿರಿಯೂರು ನಗರಸಭೆ ಪೌರಾಯುಕ್ತ ಎ.ವಾಸೀಂ ತಿಳಿಸಿ ಸಾರ್ವಜನಿಕರು ಸಹಕರಿಸುವಂತೆ ಕೋರಿದ್ದಾರೆ.
ನೀರಿನ ವ್ಯತ್ಯಯಕ್ಕೆ ಕಾರಣಗಳೇನು?ತಾಂತ್ರಿಕ ದುರಸ್ತಿ:
ವಾಣಿವಿಲಾಸ ಜಲಾಶಯದಿಂದ ನೀರು ಪೂರೈಸುವ ರೇಸಿಂಗ್ ಮೇನ್ ವಾಲ್ವ್ ನ ಚೆಕ್‌ನಾಟ್ ದುರಸ್ತಿಯಲ್ಲಿದೆ. ಅಲ್ಲದೆ ಜೂನ್ 25ರ ಗುರುವಾರ ವಿ.ವಿ ಸಾಗರ ಭಾಗದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿತ್ತು.
ನೀರು ಪೂರೈಕೆಯ ಪರಿಷ್ಕೃತ ವೇಳಾಪಟ್ಟಿ ಹೀಗಿದೆ:
ತಾಂತ್ರಿಕ ಸಮಸ್ಯೆ ಹಾಗೂ ಕರೆಂಟ್ ಇಲ್ಲದ ಕಾರಣ ನೀರು ಸರಬರಾಜಿನ ದಿನಗಳಲ್ಲಿ ಒಂದು ದಿನದ ವಿಳಂಬ ಉಂಟಾಗಲಿದೆ.
ನಿಗದಿಯಾಗಿದ್ದ ದಿನ ಪರಿಷ್ಕೃತ ನೀರು ಪೂರೈಕೆಯ ದಿನ ಜೂನ್ 25ರ ಗರುವಾರ ನೀರು ಬರಬೇಕಿದ್ದ ಪ್ರದೇಶಗಳಿಗೆ ಶುಕ್ರವಾರ ನೀರು ಸರಬರಾಜು ಮಾಡಲಾಗುವುದು. ಶುಕ್ರವಾರ ನೀರು ಬರಬೇಕಿದ್ದ ಪ್ರದೇಶಗಳಿಗೆ ಶನಿವಾರ ನೀರು ಪೂರೈಸಲಾಗುವುದು.
ಶನಿವಾರ ನೀರು ಬರಬೇಕಿದ್ದ ಪ್ರದೇಶಗಳಿಗೆ ಭಾನುವಾರ ನೀರು ಸರಬರಾಜು ಆಗಲಿದೆ. ಒಟ್ಟಾರೆಯಾಗಿ ನಗರದಾದ್ಯಂತ ನೀರಿನ ಸರಬರಾಜಿನಲ್ಲಿ ಒಂದು ದಿನದ ವ್ಯತ್ಯಾಸ ಉಂಟಾಗುವುದರಿಂದ, ಸಾರ್ವಜನಿಕರು ಲಭ್ಯವಿರುವ ನೀರನ್ನು ಮಿತವಾಗಿ ಬಳಸಿ, ನಗರಸಭೆಯೊಂದಿಗೆ ಸಹಕರಿಸಬೇಕಾಗಿ ಪೌರಾಯುಕ್ತರು ಪ್ರಕಟಣೆಯಲ್ಲಿ ಕೋರಿದ್ದಾರೆ.



