ಶಂಕರ್ ಟಾಕೀಸ್ ಕುಮಾರ್ ಸಹೋದರ ಉದ್ಯಮಿ ಜಿ.ಪಿ ಉಮೇಶ್ ಇನ್ನಿಲ್ಲ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಶಂಕರ್ ಟಾಕೀಸ್ ಕುಮಾರ್ ಸಹೋದರ ಚಿತ್ರದುರ್ಗ ನಗರದ ಬ್ಯಾಂಕ್ ಕಾಲೋನಿ ನಿವಾಸಿ ಜಿ.ಪಿ ಉಮೇಶ್(63) ಅವರು ಹೃದಯಘಾತದಿಂದ ನಿಧನರಾಗಿದ್ದಾರೆ.

- Advertisement - 

ಕಂದಾಯ ಪಾವತಿಸಲು ನಗರಸಭೆಗೆ ಹೋಗಿದ್ದಾಗ ಕುಸಿದು ಬಿದ್ದ ಜಿ.ಪಿ.ಉಮೇಶ್‌ರನ್ನು ಸ್ನೇಹಿತರು ಅವರ ಮನೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಆಸ್ಪತ್ರೆಗೆ ಹೋಗುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ.

- Advertisement - 

ಟೈಲ್ಸ್ ಮತ್ತು ಗ್ರಾನೈಟ್ ಗುತ್ತಿಗೆದಾರರಾಗಿದ್ದ ಜಿ.ಪಿ.ಉಮೇಶ್ ಅವರು ಪತ್ನಿ, ಓರ್ವ ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಜೋಗಿಮಟ್ಟಿ ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಗುರುವಾರ ಬೆಳಿಗ್ಗೆ ೧೧ ಗಂಟೆಗೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

 

- Advertisement - 

Share This Article
error: Content is protected !!
";