ದಲಿತರ ವಿರೋಧಿ ಸಿ.ಪಿ. ಯೋಗೇಶ್ವರ್‌

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಶಾಸಕರಾಗಿದ್ದಾಗ ಚನ್ನಪಟ್ಟಣ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಬಾಬಾ ಸಾಹೇಬ್‌ಡಾ. ಬಿ.ಆರ್‌. ಅಂಬೇಡ್ಕರ್‌ಭವನ ಮತ್ತು  ಡಾ. ಬಾಬು ಜಗಜೀವನ್‌ರಾಂ ಭವನಗಳ ನಿರ್ಮಾಣಕ್ಕೆ 5 ಕೋಟಿ ರೂ. ಅನುದಾನ ತಂದಿದ್ದರು. 

ಆದರೆ ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿಗೆ ಬಂದ ಆ ಹಣವನ್ನು ರದ್ದುಪಡಿಸಿ ಎಂದು  ಸರ್ಕಾರಕ್ಕೆ ಪತ್ರ ಬರೆದು ದಲಿತರ ವಿರೋಧಿ ಮನಸ್ಥಿತಿಯನ್ನು ತೋರಿಸಿದ್ದೀರಿ ಸಿಪಿ ಯೋಗೇಶ್ವರ್ ಎಂದು ಜೆಡಿಎಸ್ ಆರೋಪಿಸಿದೆ.
ಈಗ ಅದ್ಯಾವ ಮುಖ ಇಟ್ಟುಕೊಂಡು ದಲಿತರ ಬಳಿ ವೋಟು ಕೇಳುತ್ತೀರಿ..
?

ವಾಲ್ಮೀಕಿ ಹಗರಣ, ಪರಿಶಿಷ್ಟರ ಅಭಿವೃದ್ಧಿ ಹಣಲೂಟಿ ಹೊಡೆದಿರುವ ಕಾಂಗ್ರೆಸ್‌ಸರ್ಕಾರ ಮತ್ತು ಕಾಂಗ್ರೆಸ್‌ಪಕ್ಷ ದಲಿತರನ್ನು ಕೇವಲ ಮತಬ್ಯಾಂಕ್‌ಆಗಿ ಬಳಸಿಕೊಂಡು ವಂಚಿಸುತ್ತಲೇ ಬಂದಿದೆ. ಆ ಪಕ್ಷ ಸೇರಿದ ನಿಮ್ಮದು ಅಂತಹದ್ದೇ ಮನಸ್ಥಿತಿ ಎಂದು ಜೆಡಿಎಸ್ ಟೀಕಿಸಿದೆ.

 

 

- Advertisement -  - Advertisement -  - Advertisement - 
Share This Article
error: Content is protected !!
";