ಚಂದ್ರವಳ್ಳಿ ನ್ಯೂಸ್, ಪೋರಬಂದರ್(ಗುಜರಾತ್):
ಗುಜರಾತ್ ನ ಪೋರಬಂದರ್ ವಿಮಾನ ನಿಲ್ದಾಣದಲ್ಲಿ ಭಾರತೀಯ ಕೋಸ್ಟ್ ಗಾರ್ಡ್‌ನ (ಐಸಿಜಿ) ಹೆಲಿಕ್ಯಾಪ್ಟರ್ ಪತನಗೊಂಡಿದ್ದು, ಮೂವರು ಸಿಬ್ಬಂದಿಗಳು ಸಾವನ್ನಪ್ಪಿರುವ ಘಟನೆ ಭಾನುವಾರ ಮಧ್ಯಾಹ್ನ 12.10ಕ್ಕೆ ಸಂಭವಿಸಿದೆ.
ಐಸಿಜಿಯ ಅಡ್ವಾನ್ಸ್ಡ್ ಲೈಟ್ ಹೆಲಿಕ್ಯಾಪ್ಟರ್ (ಎಎಲ್‌ಹೆಚ್) ಪೋರಬಂದರ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವ ಸಮಯದಲ್ಲಿ ಧರೆಗಪ್ಪಳಿಸಿದೆ ಎಂದು ಪೋರಬಂದರ್ ಪೊಲೀಸ್ ವರಿಷ್ಠಾಧಿಕಾರಿ ಭಗೀರಥ ಸಿಂಗ್ ಜಡೇಜಾ ತಿಳಿಸಿದರು.
ಹೆಲಿಕ್ಯಾಪ್ಟರ್ ಪತನ ಆಗುತ್ತಿದ್ದಂತೆ ಅದರಲ್ಲಿದ್ದ ಮೂವರು ಸಿಬ್ಬಂದಿಯನ್ನು ಹೆಲಿಕ್ಯಾಪ್ಟರ್‌ನಿಂದ ಹೊರತೆಗೆದ ಕೂಡಲೇ ಪೋರಬಂದರ್‌ನ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಗಂಭೀರ ಸ್ವರೂಪದ ಗಾಯಗಳಾಗಿದ್ದರಿಂದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು ಎಂದು ಕಮಲಾ ಬಾಗ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಾಜೇಶ್ ಕಾನ್ಮಿಯಾ ಮಾಹಿತಿ ನೀಡಿದರು.