ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಐಶ್ವರ್ಯ ಹೋಟೆಲ್ ರಸ್ತೆಯಲ್ಲಿ ನಡೆದ ಘಟನೆಯಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಹನುಮಂತೆಗೌಡ ಹಾಗೂ ಪಿಎಸ್ಐ ಗಾದಿ ಲಿಂಗ ಗೌಡರ್ ನಡುವೆ ಗಲಾಟೆ ಸಂಭವಿಸಿ ಮಾತಿನ ಚಕಮಕಿ ನಡೆದಿದೆ.
ಶುಕ್ರವಾರ ತಡ ರಾತ್ರಿ 12:45ರ ಸಮಯದಲ್ಲಿ ಗಲಾಟೆ ನಡೆದಿದ್ದು ಸಮಯ ಆಗಿದೆ ಮನೆ ತೆರಳಿ ಎಂದು ಒಂದಿಷ್ಟು ಕಟು ಶಬ್ದ(ಅವಾಚ್ಯ)ಗಳಿಂದ ಪಿಎಸ್ಐ ಗಾದಿ ಲಿಂಗ ಗೌಡರ್ ಸೂಚನೆ ನೀಡಿದ್ದಾರೆ. ಇದೇ ಕಾರಣಕ್ಕೆ PSI ವಿರುದ್ದ ಬಿಜೆಪಿ ಮುಖಂಡ ಹನುಮಂತೆಗೌಡ ರೇಗಾಡಿದ್ದಾರೆ. ಆಗ ಹನುಮಂತೆ ಗೌಡರ ಕೆನ್ನೆಗೆ ಪಿಎಸ್ಐ ಗಾದಲಿಂಗ ಗೌಡರ್ ಬಾರಿಸಿದ್ದಾರೆ. ಬಳಿಕ ಪಿಎಸ್ಐ ಮೇಲೆ ಹನುಮಂತೆ ಗೌಡ ಕೂಡಾ ಹಲ್ಲೆ ಮಾಡಿದ ವಿಡಿಯೋ ಸಖತ್ ವೈರಲ್ ಆಗಿದೆ.
ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಹನುಮಂತೇಗೌಡ ಮತ್ತು ಪಿಎಸ್ಐ ಗಾದಿ ಲಿಂಗ ಗೌಡರ್ ಇಬ್ಬರು ದಾಖಲಾಗಿದ್ದಾರೆ.
ಈ ಕುರಿತು ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.