ಕೆಂಪೇಗೌಡರು ಕಟ್ಟಿದ ಬೆಂಗಳೂರಿನ ಮೇಲೆ ವಕ್ಫ್ ಬೋರ್ಡ್ ವಕ್ರದೃಷ್ಟಿ!

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೆಂಪೇಗೌಡರು ಕಟ್ಟಿದ ಬೆಂಗಳೂರಿನ ಮೇಲೆ ವಕ್ಫ್ ಬೋರ್ಡ್ ವಕ್ರದೃಷ್ಟಿ! ಬಿದ್ದಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಟ್ವೀಟ್ ಮಾಡಿ ಆರೋಪಿಸಿದ್ದಾರೆ.

ಕೃಷಿ ಜಮೀನು, ಸ್ಮಶಾನ, ದೇವಸ್ಥಾನಗಳು, ಮಠ-ಮಾನ್ಯಗಳು, ಕೆರೆಗಳು ಎಲ್ಲಕ್ಕೂ ನೋಟಿಸ್ ನೀಡಿದ್ದಾಯ್ತು, ಈಗ ನಾಡಪ್ರಭು ಕೆಂಪೇಗೌಡರು ಕಟ್ಟಿದ ನಮ್ಮೆಲ್ಲರ ಹೆಮ್ಮೆಯ ಬೆಂಗಳೂರು ನಗರದ ಮೇಲೆ ಬಿದ್ದಿದೆ ವಕ್ಫ್ ಬೋರ್ಡ್ ನ ವಕ್ರದೃಷ್ಟಿ ಬಿದ್ದಿದೆ.

ನಮ್ಮ ಬೆಂಗಳೂರಿನ ಹೃದಯ ಭಾಗವಾದ ಮೆಜೆಸ್ಟಿಕ್, ಕೆ.ಆರ್.ಮಾರ್ಕೆಟ್, ಬಳೆ ಪೇಟೆ, ಕಾಟನ್ ಪೇಟೆ ಕೂಡಾ ನಮ್ಮದೇ ಆಸ್ತಿ ಎನ್ನುತ್ತಿದೆ ವಕ್ಫ್ ಬೋರ್ಡ್.

ಸಿಎಂ ಸಿದ್ದರಾಮಯ್ಯನವರೇ, ವಕ್ಫ್ ಆಸ್ತಿ ಹೆಸರಿನಲ್ಲಿ ನಡೆಯುತ್ತಿರುವ ದಬ್ಬಾಳಿಕೆ ದಿನಕಳೆದಂತೆ ಗಂಭೀರ ಸ್ವರೂಪ ಪಡೆಯುತ್ತಿದ್ದು, ಇದಕ್ಕೆ ಆದಷ್ಟು ಬೇಗ ಲಗಾಮು ಹಾಕದಿದ್ದರೆ ಜನ ದಂಗೆ ಎದ್ದು ದೊಡ್ಡ ಕಾನೂನು ಸುವ್ಯವಸ್ಥೆ ಸಮಸ್ಯೆಯಾಗುವುದು ನಿಶ್ಚಿತ ಎಂದು ಅಶೋಕ್ ಎಚ್ಚರಿಸಿದ್ದಾರೆ.

ಈ ಕೂಡಲೇ ವಿಧಾನಮಂಡಲದ ವಿಶೇಷ ಅಧಿವೇಶನ ಕರೆದು ಈ ಬಗ್ಗೆ ಚರ್ಚೆಗೆ ಅವಕಾಶ ಮಾಡಿಕೊಡಿ. ವಕ್ಫ್ ಕಾಯ್ದೆಗೆ ಸೂಕ್ತ ತಿದ್ದುಪಡಿ ತರುವ ಮೂಲಕ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವತ್ತ ಗಮನ ಹರಿಸಿ ಎಂದು ವಿಪಕ್ಷ ನಾಯಕ ಅಶೋಕ್ ತಾಕೀತು ಮಾಡಿದ್ದಾರೆ.

 

- Advertisement -  - Advertisement -  - Advertisement - 
Share This Article
error: Content is protected !!
";