ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗರ್ಭಿಣಿಯರು, ಬಾಣಂತಿಯರು ಹಾಗೂ ನವಜಾತ ಶಿಶುಗಳನ್ನು ಕೊಂದ ಕೊಲೆಗಡುಕ ಕರ್ನಾಟಕ ಕಾಂಗ್ರೆಸ್ ಸರ್ಕಾರದ “ಅಸಮರ್ಥ ಆರೋಗ್ಯ ಮಂತ್ರಿ” ದಿನೇಶ್ ಗುಂಡೂರಾವ್, ಅಂಗೈ ಹುಣ್ಣಿಗೆ ಕನ್ನಡಿ ಬೇಕೆ? ಎಂದು ಜೆಡಿಎಸ್ ತೀಕ್ಷ್ಣವಾಗಿ ಪ್ರಶ್ನಿಸಿದೆ.
ಸಚಿವರೇ, ನಿಮ್ಮ ಪಕ್ಷದ ಹಿರಿಯ ಶಾಸಕರೇ ಇಲಾಖೆಯ ಬಂಡವಾಳವನ್ನು ಬಿಚ್ಚಿಟ್ಟಿದ್ದಾರೆ ಕೇಳಿಸಿಕೊಳ್ಳಿ. ನೀವು ಸದನಕ್ಕೆ ಗೈರು ಹಾಜರಾಗಿದ್ದೀರಿ. ನಿಮಗೆ ಮಾಹಿತಿ ಕೊರತೆ ಇದೆ ಎಂದು ಜೆಡಿಎಸ್ ತರಾಟೆ ತೆಗೆದುಕೊಂಡಿದೆ.
ಹದಗೆಟ್ಟಿರುವ ಆರೋಗ್ಯ ಇಲಾಖೆಯ ಬುರುಡೆ ಮಾಹಿತಿಗಳನ್ನು ಕಾಂಗ್ರೆಸ್‌ಶಾಸಕರೇ ಒಪ್ಪುತ್ತಿಲ್ಲ. ಬೇರೆ ಪಕ್ಷದವರಿಗೆ ಬುದ್ಧಿ ಹೇಳುವ ಮೊದಲು ನಿಮ್ಮ ಶಾಸಕರಿಗೆ ಮನವರಿಕೆ ಮಾಡಿ. ಆಡಳಿತ ಪಕ್ಷದ ವೈಫಲ್ಯಗಳನ್ನು ಪ್ರಶ್ನಿಸುವುದು ವಿರೋಧ ಪಕ್ಷದ ಜವಾಬ್ದಾರಿ.
ವಿಧಾನಸಭೆಯ ಕಲಾಪದಲ್ಲಿ ನಮ್ಮ ಪಕ್ಷದ ಶಾಸಕರು, ದಾಖಲೆಗಳ ಸಮೇತ ಅವರ ಕ್ಷೇತ್ರ ವ್ಯಾಪ್ತಿಯ ಸಮುದಾಯ ಆರೋಗ್ಯ ಕೇಂದ್ರ (CHC)ದಲ್ಲಿರುವ ವೈದ್ಯರನ್ನು ವಾಪಸ್‌ಕರೆಸಿಕೊಳ್ಳುತ್ತಿರುವ ಬಗ್ಗೆ ಧ್ವನಿ ಎತ್ತಿರುವ ವಿಷಯವನ್ನು ಹಂಚಿಕೊಂಡಿದ್ದೇವೆ ಎಂದು ಜೆಡಿಎಸ್ ತಿಳಿಸಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಟಿ, ಎಂಆರ್‌ಐ ಸ್ಕ್ಯಾನಿಂಗ್‌ಸೇವೆಗಳಿಲ್ಲ. ವೈದ್ಯರು, ಸಿಬ್ಬಂದಿ ಕೊರತೆ, ಮೂಲಸೌಕರ್ಯ ಕೊರತೆ. ರಾಜ್ಯದ ಹಲವೆಡೆ ಆಂಬ್ಯುಲೆನ್ಸ್‌ಸಮಸ್ಯೆ. ಸರ್ಕಾರಿ ವೈದ್ಯರು ಮುಷ್ಕರದ ಎಚ್ಚರಿಕೆ.
ಇನ್ನಾದರೂ ಬಡವರ ಆರೋಗ್ಯದ ವಿಷಯದಲ್ಲಿ ನಿರ್ಲಕ್ಷ್ಯ, ಅಸೆಡ್ಡೆ ತೋರುವುದನ್ನು ಬಿಟ್ಟು ಕಾಳಜಿವಹಿಸಿ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಿ ಎಂದು ಜೆಡಿಎಸ್ ತಾಕೀತು ಮಾಡಿದೆ.

