Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Education News

ರಾಮಾಯಣ ಮತ್ತು ಮಹಾಭಾರತಗಳು ಭಾರತದ ಮಹಾನ್ ಚರಿತ್ರೆಯಾಗಿವೆ: ಬಿಂದುಶ್ರೀ

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಶ್ರೀಮದ್ ರಾಮಾಯಣ ಮತ್ತು ಮಹಾಭಾರತಗಳೆಂಬ ಮಹಾಕಾವ್ಯಗಳು  ಭಾರತದ ಮಹಾನ್ ಚರಿತ್ರೆಯಾಗಿವೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಶಾರದಾ ಬಾಲಕ ಸಂಘದ ವಿದ್ಯಾರ್ಥಿನಿ ಕುಮಾರಿ ಬಿಂದುಶ್ರೀ ತಿಳಿಸಿದರು.  


ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ "ವಿವೇಕ ವಿಹಾರ ವಿದ್ಯಾರ್ಥಿ ಶಿಬಿರ" ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು "ಶ್ರೀಮದ್ ರಾಮಾಯಣದ ಬಾಲಖಂಡ"ದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.


ನಾರದಾ ಮಹರ್ಷಿಗಳಿಂದ ಹೇಳಲ್ಪಟ್ಟು ಮಹರ್ಷಿ ವಾಲ್ಮೀಕಿಗಳಿಂದ ರಚಿಸಲ್ಪಟ್ಟ   ರಾಮಾಯಣ ಮಹಾಕಾವ್ಯವು ಒಟ್ಟು ಇಪ್ಪತ್ನಾಲ್ಕು ಸಾವಿರ ಶ್ಲೋಕಗಳನ್ನು ಬಾಲಖಂಡ, ಅಯೋಧ್ಯಾಖಂಡ, ಕಿಷ್ಕಿಂಧಾ ಖಂಡ, ಅರಣ್ಯಖಂಡ, ಯುದ್ಧಖಂಡ, ಸುಂದರಖಂಡ, ಉತ್ತರಖಂಡಗಳೆಂಬ ಏಳು ಖಂಡಗಳನ್ನು ಒಳಗೊಂಡಿದ್ದು ಅದರಲ್ಲಿ ಶ್ರೀರಾಮನ ಬಾಲ್ಯಜೀವನದ ವಿವರಣೆ ನೀಡುವ ಬಾಲಖಂಡವು ರಾಮಾಯಣದ ಬಗ್ಗೆ ಪೀಠಿಕೆ ರೂಪದ ಚರಿತ್ರೆಯನ್ನು ತಿಳಿಸುತ್ತದೆ ಎಂದು ಬಾಲಖಂಡದ ವಿವಿಧ ವಿಷಯಗಳ ಬಗ್ಗೆ ಮಾತನಾಡಿದರು.

ಶಿಬಿರದ ಪ್ರಯುಕ್ತ ಮಕ್ಕಳಿಂದ ಓಂಕಾರ, ದಿವ್ಯತ್ರಯರ ಪ್ರಣಾಮಮಂತ್ರ, ಶ್ರೀರಾಮಕೃಷ್ಣರ ನಾಮಸ್ಮರಣೆ, ಸ್ವಾಮಿ ವಿವೇಕಾನಂದರ ಶಕ್ತಿಮಂತ್ರ, ಸ್ವದೇಶ ಮಂತ್ರ, ಚೈತನ್ಯದಾಯಕ ನುಡಿಗಳ ಪಠಣ, ಅಮ್ಮಾ ಶಾರದಾಮಾತೆ, ಯತೀಶ್ ಎಂ ಸಿದ್ದಾಪುರ ಅವರು   "ಜಯ ದುರ್ಗಾ" ನಾಮಾವಳಿ ಹೇಳಿಕೊಟ್ಟರೆ ಸಂತೋಷ್ ಕುಮಾರ್ ಅವರು ಮಕ್ಕಳಿಗೆ ವಿವಿಧ ಆಟಗಳನ್ನು ಆಡಿಸಿದರು.                                      ತರಗತಿಯಲ್ಲಿ ಪೂಜ್ಯ ಮಾತಾಜೀ ತ್ಯಾಗಮಯೀ, ಸುಧಾಮಣಿ,ಡಾ.ಭೂಮಿಕ ಅದ್ವೈತ್,ವಿವಿಕ್ತ, ವಶಿಷ್ಠಾ, ಜಶ್ವಿತಾ , ಲಕ್ಷ್ಮೀ , ಯಶಸ್,ನೇಹ, ಹರ್ಷವರ್ಧನ್, ಚರಣ್ಯ,ಸಂಜನಾ,ಭೂಮಿಕಾ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.

 

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೆಪಿಎಸ್‌ಸಿ ಅಕ್ರಮ, ರೆಸಾರ್ಟ್ ಪರೀಕ್ಷೆ ಹಗರಣ: ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಹೆಚ್.ಡಿ. ಕುಮಾರಸ್ವಾಮಿ ಆಗ್ರಹಸಾರ್ವಜನಿಕರ ಅಹವಾಲುಗಳ ನಿರಂತರ ಪರಿಶೀಲನೆ, ಅಧಿಕಾರಿಗಳ ಹೊಣೆಗಾರಿಕೆಯಾಗಿದೆ- ಡಾ.ಶಾಲಿನಿ ರಜನೀಶ್ಗೃಹಜ್ಯೋತಿ ಉಚಿತ ವಿದ್ಯುತ್ ಯೋಜನೆ: ಮರು ಪರಿಶೀಲನೆ ಅವಧಿ ಸೆಪ್ಟೆಂಬರ್ 30ರ ವರೆಗೆ ವಿಸ್ತರಣೆ!ಚುನಾವಣಾ ವ್ಯವಸ್ಥೆ ಹದಗೆಟ್ಟಿದೆ, ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ಸಿದ್ದರಾಮಯ್ಯ ಬಾಂಬ್!ಪ್ರಧಾನಿ ವಿರುದ್ಧ ಕಿಡಿಕಾರಿದ್ದ ರುಚಿಕಾ ಸಿಂಗ್‌ಗೆ ಕಾಂಗ್ರೆಸ್ ಬೆಂಬಲ: ಭವ್ಯಾ ನರಸಿಂಹಮೂರ್ತಿಯಿಂದ "ಧೀರ ಬಾಲಕಿ" ಶ್ಲಾಘನೆ!ವಿವಾಹೇತರ ಸಂಬಂಧಕ್ಕೆ ಅಡ್ಡ ಬಂದ ಪತಿಯ ಭೀಕರ ಹತ್ಯೆ; 2 ಲಕ್ಷ ಸುಪಾರಿ ಕೊಟ್ಟಿದ್ದ ಪತ್ನಿ, ಪ್ರಿಯಕರ ಜೈಲಿಗೆ!13 ಕನ್ನಡಿಗರ ನಾಪತ್ತೆ: ಪತ್ತೆಗೆ ಕ್ರಮ, ಕೆಪಿಎಸ್‌ಸಿ ಹಗರಣದ ತನಿಖೆಯಲ್ಲಿ ಮಧ್ಯಪ್ರವೇಶಿಸಲ್ಲ – ಸಿಎಂ ಡಿಕೆಶಿ775 'ಅರಣ್ಯ ವೀಕ್ಷಕ' ಹುದ್ದೆಗಳ ಭರ್ತಿಗೆ ಪರಿಷ್ಕೃತ ಅಧಿಸೂಚನೆ: ಲಿಖಿತ ಪರೀಕ್ಷೆಯಿಲ್ಲದೆ ಭರ್ತಿ!ರೈಲ್ವೆ ಹಳಿ ದಾಟುವಾಗ ಎಕ್ಸ್‌ಪ್ರೆಸ್ ರೈಲು ಡಿಕ್ಕಿ; ಅಜ್ಜಿ ಹಾಗೂ ಇಬ್ಬರು ಮೊಮ್ಮಕ್ಕಳು ದುರಂತ ಸಾವು!ಪತಿಗೆ ಕ್ರೌರ್ಯ, ಪ್ರತ್ಯೇಕ ವಾಸ: ಕೆಳ ಕೋರ್ಟ್ ಆದೇಶ ರದ್ದುಗೊಳಿಸಿ ವಿಚ್ಛೇದನ ಮಂಜೂರು ಮಾಡಿದ ಹೈಕೋರ್ಟ್!