ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜಕೀಯಕ್ಕಿಂತ ಸೇವೆ ದೊಡ್ಡದು: ನಿತ್ಯ ಅನ್ನದಾನದ ಮೂಲಕ ಮಾದರಿಯಾದ ತೇಜಸ್ವಿನಿ ಅನಂತ್ ಕುಮಾರ್!.
ಹಸಿದ ಹೊಟ್ಟೆಗೆ ಅನ್ನ ನೀಡುವುದು ಅತ್ಯಂತ ದೊಡ್ಡ ಪುಣ್ಯಕಾರ್ಯ ಎಂದು ನಮ್ಮ ಸಂಸ್ಕೃತಿ ಹೇಳುತ್ತದೆ. ಆ ಮಾತನ್ನು ಕೇವಲ ಹೇಳಿಕೆಯಲ್ಲಿ ಅಲ್ಲ, ನಿತ್ಯ ಕಾರ್ಯರೂಪದಲ್ಲಿ ತೋರಿಸುತ್ತಿರುವ ಒಂದು ಮಹತ್ಕಾರ್ಯ ಇಂದು ಸಮಾಜದ ಮುಂದೆ ಮಾದರಿಯಾಗಿ ನಿಂತಿದೆ.
ಕೇಂದ್ರದ ಮಾಜಿ ಮಂತ್ರಿಗಳಾದ ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಅವರ ಸಾರಥ್ಯದಲ್ಲಿ ಅದಮ್ಯ ಚೇತನ ಸಂಸ್ಥೆಯ ಮೂಲಕ ನಡೆಯುತ್ತಿರುವ ನಿತ್ಯ ಉಚಿತ ದಾಸೋಹ ನಿಜವಾಗಿಯೂ ಮೆಚ್ಚುವಂತಹ, ಗೌರವಿಸುವಂತಹ ಮಹತ್ಕಾರ್ಯವಾಗಿದೆ.
ಇಂದಿನ ಕಾಲದಲ್ಲಿ ರಾಜಕೀಯವೆಂದರೆ ಅಧಿಕಾರ, ಹುದ್ದೆ, ಪ್ರಚಾರ, ರಾಜಕೀಯ ಲಾಭಗಳ ಸುತ್ತಲೇ ತಿರುಗುತ್ತಿರುವಾಗ, ಪ್ರತಿದಿನ ಸಾವಿರಾರು ಜನರ ಹಸಿವನ್ನು ನೀಗಿಸುವಂತಹ ಸೇವಾ ಮನೋಭಾವದಿಂದ ನಡೆಯುತ್ತಿರುವ ಈ ಅನ್ನದಾನ ಕಾರ್ಯ ನಿಜಕ್ಕೂ ಸಮಾಜಕ್ಕೆ ಮಾದರಿಯಾಗಿದೆ. ಹಸಿದ ಹೊಟ್ಟೆಗೆ ಅನ್ನ ನೀಡುವುದು ದೇವರ ಸೇವೆಗೆ ಸಮಾನ ಎಂಬುದನ್ನು ಈ ಕಾರ್ಯ ಮತ್ತೊಮ್ಮೆ ಸಾಬೀತುಪಡಿಸುತ್ತಿದೆ.
ಇದುವರೆಗೂ ಅನೇಕ ರಾಜಕಾರಣಿಗಳನ್ನು ನೋಡಿದ್ದೇವೆ. ಆದರೆ ನಿರಂತರವಾಗಿ, ವ್ಯವಸ್ಥಿತವಾಗಿ, ಸಾವಿರಾರು ಜನರಿಗೆ ಪ್ರತಿದಿನ ಅನ್ನ ನೀಡುವಂತಹ ಮಹತ್ಕಾರ್ಯವನ್ನು ಕೈಗೊಂಡಿರುವ ಉದಾಹರಣೆಗಳು ತುಂಬಾ ವಿರಳ. ಇಂತಹ ಕಾರ್ಯವನ್ನು ಮಾಡುತ್ತಿರುವುದು ನಿಜಕ್ಕೂ ಅಸಾಧಾರಣ ಹಾಗೂ ಅಪೂರ್ವ ಸೇವೆ ಎಂದು ಹೇಳಲೇಬೇಕು.
ಈ ಮಹತ್ಕಾರ್ಯವನ್ನು ನಿರಂತರವಾಗಿ ಮುಂದುವರಿಸುತ್ತಿರುವ ಶ್ರೀಮತಿ ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಕೋಟಿ ಕೋಟಿ ಅಭಿನಂದನೆಗಳು ಮತ್ತು ಹೃತ್ಪೂರ್ವಕ ಧನ್ಯವಾದಗಳು. ಇವರ ಸೇವಾ ಮನೋಭಾವ, ಮಾನವೀಯತೆ ಮತ್ತು ಸಮಾಜದತ್ತ ಇರುವ ಕಾಳಜಿ ನಿಜವಾಗಿಯೂ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಅವರ ಈ ಪುಣ್ಯಕಾರ್ಯವನ್ನು ನೋಡಿ ಇತರೆ ರಾಜಕಾರಣಿಗಳು ಕಲಿಯಬೇಕಾದದ್ದು ನಿಜಕ್ಕೂ ಬೆಟ್ಟದಷ್ಟಿದೆ. ಸಮಾಜ ಸೇವೆ ಎಂದರೆ ಮಾತಿನಲ್ಲಿ ಅಲ್ಲ, ಕಾರ್ಯದಲ್ಲಿ ತೋರಿಸಬೇಕು ಎಂಬುದಕ್ಕೆ ಈ ದಾಸೋಹ ಕಾರ್ಯವೇ ದೊಡ್ಡ ಉದಾಹರಣೆ.
ಇಂತಹ ಸೇವೆಗಳನ್ನು ವಿರೋಧಿಗಳೂ ಸಹ ಮೆಚ್ಚಲೇಬೇಕಾಗುತ್ತದೆ. ಏಕೆಂದರೆ ಅನ್ನದಾನ ಎನ್ನುವುದು ರಾಜಕೀಯದ ಗಡಿಗಳನ್ನು ದಾಟಿ ಮಾನವೀಯತೆಯ ಮಹತ್ವವನ್ನು ಸಾರುವ ಮಹಾದಾನ.
ಅನ್ನದಾನವೇ ಮಹಾದಾನ – ಸೇವೆಯೇ ನಿಜವಾದ ಮಹತ್ವ! ಸಮಾಜ ಸೇವೆಯೇ ಸಾರ್ಥಕ ರಾಜಕೀಯ! .
ಲೇಖನ:ಶ್ರೀನಿವಾಸ್ ಕೆ ಟಿ, ಸಮಾಜ ಚಿಂತಕ, ಬೆಂಗಳೂರು.

