Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕೃಷಿ ಮೂಲ ಪುರುಷ ಬಲರಾಮ ದೇವರ ಜಯಂತಿ ಆಚರಣೆ

Advertisement
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಭಾರತೀಯ ಕಿಸಾನ್ ಸಂಘದ ಜಿಲ್ಲಾ ಹಾಗು ತಾಲ್ಲೂಕ್
ವತಿಯಿಂದ ರೈತರ ಆರಾಧ್ಯ ದೈವ ಕೃಷಿಯ ಮೂಲ ಪುರುಷ ಬಲರಾಮ ದೇವರ ಜಯಂತೋತ್ಸವ ಕಾರ್ಯಕ್ರಮ ಅಚರಣೆ ಮಾಡಲಾಯಿತು.

 ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಆಚರಣೆಯಲ್ಲಿ ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ನಾಗರಾಜಯ್ಯ ರವರು  ಬಲರಾಮ ದೇವರಿಗೆ  ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.ಭಾರತೀಯ ಕಿಸಾನ್ ಸಂಘ  ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸೈದ್ಧಾಂತಿಕವಾಗಿ ಸಂಬಂಧ ಹೊಂದಿರುವ ಭಾರತದ ಅತಿದೊಡ್ಡ ರೈತ ಸಂಘಟನೆಯಾಗಿದೆ. ಇದನ್ನು 1978 ರಲ್ಲಿ ದತ್ತೋಪಂತ್ ಥೇಂಗಡಿ ಅವರು ಸ್ಥಾಪಿಸಿದ ಈ ಸಂಘಟನೆಯು ರೈತರ ಹಿತಾಸಕ್ತಿಗಳನ್ನು ಕಾಪಾಡುವುದು, ಕೃಷಿ ಉನ್ನತೀಕರಣ, ಮತ್ತು ದೇಶದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತದೆ. ಇದು ರಾಜಕೀಯ ರಹಿತ ಸಂಸ್ಥೆಯಾಗಿದೆ. 

ಭಾರತವು ಕೃಷಿ ಪ್ರಧಾನ ದೇಶವಾಗಿದ್ದು, ಅದರೆ ಗ್ರಾಮೀಣ ಜನಸಂಖ್ಯೆಯ ಸುಮಾರು 70% ರಷ್ಟು ನೇರವಾಗಿ ಅಥವಾ ಪರೋಕ್ಷವಾಗಿ ಕೃಷಿಯನ್ನು ಅವಲಂಬಿಸಿದೆ, ರೈತ ವಿರೋಧಿ ಕಾನೂನುಗಳು, ಹೆಚ್ಚಿನ ಸಾಲದ ಹೊರೆ, ಕಳಪೆ ಸರ್ಕಾರಿ ನೀತಿ, ಸಬ್ಸಿಡಿಗಳಲ್ಲಿನ ಭ್ರಷ್ಟಾಚಾರ, ಬೆಳೆ ವೈಫಲ್ಯ, ಮಾನಸಿಕ ಆರೋಗ್ಯ, ವೈಯಕ್ತಿಕ ಸಮಸ್ಯೆಗಳು ಮತ್ತು ಕೌಟುಂಬಿಕ ಸಮಸ್ಯೆ ಗಳಿಂದ ರೈತರ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಅದರೆ ಇಂತಹ ಸಮಸ್ಯಗಳನ್ನು  ತಡೆಯುವಲ್ಲಿ ಸರ್ಕಾರಗಳು ವಿಫಲವಾಗಿವೆ ಅದರಿಂದ ಸಂಘಟನೆಯ ಮೂಲಕ ನಮ್ಮ ಹಕ್ಕು ಪಡೆಯಬೇಕಾದರೆ  ರೈತರು ಒಗ್ಗಟ್ಟಿನ  ಹೋರಾಟದಿಂದ ಮಾತ್ರ ಸಾಧ್ಯ ಎಂದರು.

ನಂತರ ಭಾರತೀಯ ಕಿಸಾನ್ ಸಂಘ ತಾಲ್ಲೂಕು ಅಧ್ಯಕ್ಷ ಚಂದ್ರು ಮಾತನಾಡಿ  ವ್ಯವಸಾಯ ದಿಂದ ಅಧಿಕ ಶ್ರಮ ಪ್ರತಿಫಲ ಕಡಿಮೆ ಅದರಿಂದ ರೈತರು ಹಾಗು ಕಾರ್ಮಿಕ ವರ್ಗ ವ್ಯವಸಾಯ ಬಿಟ್ಟು ನಗರ ಹಾಗು ಪಟ್ಟಣದ ಕಡೆ ಮುಖಮಾಡಿ  ಅಂಗಡಿ ಮಂಗಟ್ಟುಗಳು ಮಾಡಿಕೊಂಡು ವ್ಯವಸಾಯದ ಕೆಲಸ ಮರೆಯುವ ಸ್ಥಿತಿಗೆ ಬಂದಿದೆ. ಹಾಗು ಕಾರ್ಖಾನೆಗಳಲ್ಲಿ ಕೆಲಸ ಮಾಡಿದರೆ ತಿಂಗಳ ವೇತನ ಹಾಗು  ಆರೋಗ್ಯ ಕವಚ ಜೊತೆಯಲ್ಲಿ ಕಾರ್ಮಿಕ ನಿಧಿ ಯಿಂದ ನಿವೃತ್ತಿ ಸಮಯದಲ್ಲಿ ಸಹಾಯವಾಗುತ್ತೆಎಂದು ವ್ಯವಸಾಯ ಪದ್ದತಿಗಳು ಮರೆತು ಯಂತ್ರಗಳ ಮೂಲಕ  ಬೇಸಾಯ ಮಾಡುವುದರ ಮೂಲಕ ಅಧುನಿಕ ಬೇಸಾಯಕ್ಕೆ ಮೋರೆ ಹೋಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ  ಜಿಲ್ಲಾ ಪ್ರಮುಖರು ಅಂಜೀನಪ್ಪ ಮಹಿಳಾ ಪ್ರಮುಖ್ ಶ್ರೀಮತಿ ಅಂಬಿಕಾ ತಾಲ್ಲೂಕು ಪ್ರದಾನ ಕಾರ್ಯದರ್ಶಿ ರಾಜಘಟ್ಟ ಗಣೇಶ್ ಭಾರತೀಯ ಕಿಸಾನ್ ಸಂಘದ ಕಾರ್ಯಕರ್ತರು ಶ್ರೀಮತಿ ಗೀತಾ  ಹಾಗು ಗೂಳ್ಯ ಶಿವಣ್ಣ ಹಾಜರಿದ್ದರು.

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ