Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್‍ಗಳಿಗೆ ಅರ್ಜಿ ಆಹ್ವಾನ

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೂರ ಶಿಕ್ಷಣ ಘಟಕ, ವಿಸ್ತರಣಾ ನಿರ್ದೇಶನಾಲಯ, ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ರವರು   2025-26ನೇ ಶೈಕ್ಷಣಿಕ ಸಾಲಿನಲ್ಲಿ ಎರಡು ಡಿಪ್ಲೊಮಾ ಮತ್ತು ಐದು ಸರ್ಟಿಫಿಕೇಟ್ ಕೋರ್ಸ್ಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಡಿಪ್ಲೊಮಾ ಕೋರ್ಸ್ಗಳಾದ ಒಂದು ವರ್ಷದ ಡಿಪ್ಲೊಮಾ (ಕೃಷಿ) ಕೋರ್ಸ್ಗೆ ಕೋರ್ಸ್ ಶುಲ್ಕ ರೂ.10,000 ಗಳಿದ್ದು, 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಒಂದು ವರ್ಷದ ಸ್ನಾತಕೋತ್ತರ ಕೃಷಿ ಡಿಪ್ಲೊಮಾ (Pಉಆಂ) ಕೋರ್ಸ್ಗೆ ಕೋರ್ಸ್ ಶುಲ್ಕ ರೂ.12,000/- ಗಳಿದ್ದು, ಕೃಷಿ ಪದವೀಧರರು ಅರ್ಜಿ ಸಲ್ಲಿಸಬಹುದು.

ಸರ್ಟಿಫಿಕೇಟ್ ಕೋರ್ಸ್ಗಳಾದ ಕೃಷಿಯಲ್ಲಿ ಬೀಜೊತ್ಪಾದನೆ ತಾಂತ್ರಿಕತೆಗಳು ಕೋರ್ಸ್ಗೆ ಕೋರ್ಸ್ ಮತ್ತು  ಕೃಷಿಯಲ್ಲಿ ಯಂತ್ರೋಪಕರಣಗಳ ನಿರ್ವಹಣೆ ಕೋರ್ಸ್ಗೆ ಕೋರ್ಸ್ಗಳ ಶುಲ್ಕ ರೂ.3000/- ಗಳಿದ್ದು, 10ನೇ ತರಗತಿ ತೇರ್ಗಡೆ ಹೊಂದಿರುವವರು ಅರ್ಜಿ ಸಲ್ಲಿಸಬಹುದು.
ಜೇನುಸಾಕಣೆ ಕೋರ್ಸ್ಗೆ ಕೋರ್ಸ್ ಶುಲ್ಕ ರೂ.3000 ಮತ್ತು ಸಮಗ್ರ ಕೃಷಿ ಕೋರ್ಸ್ಗೆ ಕೋರ್ಸ್ ಶುಲ್ಕ ರೂ.1500 ಗಳಿದ್ದು, 7ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಸಾವಯವ ಕೃಷಿ (ಅಂಚೆ ಶಿಕ್ಷಣ) ಕೋರ್ಸ್ಗೆ ಕೋರ್ಸ್ ಶುಲ್ಕ ರೂ.200/-ಗಳಿದ್ದು, ಓದು ಬರಹ ಬಲ್ಲವರು ಅರ್ಜಿ ಸಲ್ಲಿಸಬಹುದು.

ಡಿಪ್ಲೊಮಾ ಮತ್ತು ಸರ್ಟಿಪೀಕೇಟ್ ಕೋರ್ಸ್ಗಳಿಗೆ 2025 ಏಪ್ರಿಲ್ 12 ರವರೆಗೆ, ಪ್ರತಿ ಕೋರ್ಸ್ಗೆ ಅರ್ಜಿ ಶುಲ್ಕ ರೂ.100 ರಂತೆ ಪಾವತಿಸಿ ದೂರ ಶಿಕ್ಷಣ ಘಟಕ, ರೈತ ತರಬೇತಿ ಸಂಸ್ಥೆ, ವಿಸ್ತರಣಾ ನಿರ್ದೇಶನಾಲಯ, ಜಿಕೆವಿಕೆ, ಬೆಂಗಳೂರು-560065 ಹಾಗೂ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕಾರ್ಯವ್ಯಾಪ್ತಿಯಲ್ಲಿ ಬರುವಂತಹ ಕೃಷಿ ವಿಜ್ಞಾನ ಕೇಂದ್ರಗಳಾದ ರಾಮನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ, ಮಂಡ್ಯ, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಹಾಗೂ ವಿಸ್ತರಣಾ ಶಿಕ್ಷಣ ಘಟಕ, ಮೈಸೂರಿನಲ್ಲಿ ಅರ್ಜಿಗಳನ್ನು ಪಡೆಯಬಹುದು ಅಥವಾ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಜಾಲತಾಣದಿಂದ www.uasbangalore.edu.in ಡೌನ್ಲೋಡ್ ಮಾಡಿಕೊಳ್ಳಬಹುದು.

ಭರ್ತಿ ಮಾಡಿದ ಅರ್ಜಿಗಳನ್ನು ನಿಗದಿತ ಕೋರ್ಸ್ ಶುಲ್ಕವನ್ನು ಡಿ.ಡಿ. ಮೂಲಕ  COMPTROLLER, UAS, GKVK, BANGALORE-560065 ಇವರ ಹೆಸರಿನಲ್ಲಿ ಪಡೆದು 2025 ಏಪ್ರಿಲ್ 12 ಮಧ್ಯಾಹ್ನ 12.30 ಒಳಗೆ ಸಂಯೋಜಕರು ಮತ್ತು ಮುಖ್ಯಸ್ಥರು, ದೂರ ಶಿಕ್ಷಣ ಘಟಕ, ರೈತ ತರಬೇತಿ ಸಂಸ್ಥೆ, ವಿಸ್ತರಣಾ ನಿರ್ದೇಶನಾಲಯ, ಕೃಷಿ ವಿಶ್ವವಿದ್ಯಾನಿಲಯ ಜಿಕೆವಿಕೆ, ಬೆಂಗಳೂರು-560065 ರವರಿಗೆ ಸಲ್ಲಿಸುವುದು ಎಂದು ಪ್ರಕಟಣೆ ತಿಳಿಸಿದೆ.

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ