Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಪುಟ್‍ಪಾತ್ ಅತಿಕ್ರಮಣ ತೆರವು ವರ್ತಕರಿಗೆ ಸಂಚಾರಿ ಪೊಲೀಸ್‍ರಿಂದ ಅರಿವು

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರದ ಪ್ರಮುಖ ರಸ್ತೆಗಳಲ್ಲಿ ವರ್ತಕರು, ವ್ಯಾಪಾರಸ್ಥರು ಹಾಗೂ ಬೀದಿಬದಿ ವ್ಯಾಪಾರಿಗಳು ತಮ್ಮ ಅಂಗಡಿಗಳ ಮುಂದಿನ ರಸ್ತೆಯ ಜಾಗವನ್ನು ಒತ್ತವರಿ ಮಾಡಿ, ವಾಹನಗಳ ಪಾರ್ಕಿಂಗ್ ಅನಾನುಕೂಲ ತಂದೊಡ್ಡುತ್ತಿದ್ದಾರೆ. ಇದರಿಂದಾಗಿ ನಗರದ ಎಂ.ಜಿ.ಸರ್ಕ್‍ಲ್, ಬಿ.ಡಿ.ರಸ್ತೆ, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ಆನೆಬಾಗಿಲು ರಸ್ತೆ, ಹೊಳಲ್ಕೆರೆ ರಸ್ತೆ, ಮೆದೆಹಳ್ಳಿ ರಸ್ತೆ, ಸಂತೆಹೊಂಡ, ಜಿಲ್ಲಾಸ್ಪತ್ರೆ ಹಾಗೂ ರಂಗಯ್ಯನಬಾಗಲು ರಸ್ತೆಯಲ್ಲಿ ಅತೀವ ಸಂಚಾರ ದಟ್ಟಣೆ ಉಂಟಾಗುತ್ತದೆ. ಮೊದಲೇ ಕಿರಿದಾಗಿರುವ ರಸ್ತೆಗಳಲ್ಲಿ ಪುಟ್‍ಪಾತ್ ಹಾಗೂ ಪಾರ್ಕಿಂಗ್ ಒತ್ತುವರಿಂದ ಪಾದಚಾರಿಗಳು ಹಾಗೂ ವಾಹನ ಸವಾರರು ನಿತ್ಯ ಬವಣೆ ಅನುಭವಿಸುವಂತಾಗಿದೆ.

ಈ ಹಿನ್ನಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ, ಚಿತ್ರದುರ್ಗ ನಗರ ಸಂಚಾರಿ ಪೊಲೀಸರು ಪುಟ್‍ಪಾತ್ ಹಾಗೂ ಪಾರ್ಕಿಂಗ್ ಸ್ಥಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಸವುದರೊಂದಿಗೆ, ವರ್ತಕರು ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದ್ದಾರೆ.

ಗುರುವಾರ ಸಂಚಾರ ಪೊಲೀಸ್ ನಿರೀಕ್ಷರಾದ ಶೈಲಶ್ರೀ ಅವರ ನೇತೃತ್ವದಲ್ಲಿ ಮೆದಹಳ್ಳಿ ರಸ್ತೆ ಹಾಗೂ ಸಂತೆಹೊಂಡದ ಸುತ್ತಮುತ್ತ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು. 

ರಸ್ತೆ ಅಡ್ಡಲಾಗಿ ಇರಿಸಲಾಗಿದ್ದ ಅಂಗಡಿಗಳ ನಾಮಫಲಕಗಳು, ಅನಧಿಕೃತವಾಗಿ ನಿರ್ಮಿಸಿದ ಕಟ್ಟೆಗಳು, ಬಟ್ಟೆ ಅಂಗಡಿಗಳ ಮುಂದಿನ ಬೊಂಬೆಗಳು ಸೇರಿದಂತೆ ಅಂಗಡಿಗಳ ಮುಂದೆ ಪಾರ್ಕಿಂಗ್‍ಗೆ ಅವಕಾಶ ನೀಡದಂತೆ ಹಾಕಲಾಗಿದ್ದ ಕಬ್ಬಿಣದ ಮ್ಯಾಟ್ ಹಾಗೂ ಕಲ್ಲುಗಳನ್ನು ಪೊಲೀಸರು ತೆರವುಗೊಳಿಸಿದರು. ಸಮ ಹಾಗೂ ಬೆಸ ಸಂಖ್ಯೆ ದಿನಾಂಕಗಳಂದು ನಿಗದಿ ಪಡಿಸಿದ ಪಾರ್ಕಿಂಗ್ ಜಾಗದಲ್ಲಿಯೇ ವಾಹನಗಳನ್ನು ನಿಲ್ಲಿಸುವಂತೆ ಸೂಚಿಸಿದರು. ಸಂಚಾರಕ್ಕೆ ಅಡ್ಡಿಯಾಗದಂತೆ ಬೀದಿ ಬದಿ ವ್ಯಾಪಾರಿಗಳು ವಹಿವಾಟು ನಡೆಸುವಂತೆ ಮನವರಿಕೆ ಮಾಡಿಕೊಟ್ಟರು.

ಆಯ್ದ ಸ್ಥಳಗಳಲ್ಲಿ ಸಂಚಾರ ದಟ್ಟಣೆ ನಿರ್ವಹಣೆಗೆ ಕ್ರಮ:
ಈ ವೇಳೆ ಮಾತನಾಡಿದ ಸಂಚಾರಿ ಪೊಲೀಸ್ ನಿರೀಕ್ಷಕಿ ಶೈಲಶ್ರೀ, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಎದುರಿನಲ್ಲಿ ದ್ವಿಚಕ್ರವಾಹನ ಸವಾರರು ಮುಖ್ಯ ರಸ್ತೆಯಲ್ಲೇ ವಾಹನ ನಿಲ್ಲಿಸುತ್ತಿದ್ದರು. ಬಸ್ ನಿಲ್ದಾಣದ ಒಳಗಡೆ ಪಾಕಿರ್ಂಗ್ ಸ್ಥಳಾವಕಾಶವಿದ್ದರೂ, ರಸ್ತೆಯಲ್ಲೇ ವಾಹನ ನಿಲ್ಲಿಸುವುದರಿಂದ ಸಂಚಾರ ದಟ್ಟಣೆ ಅಧಿಕವಾಗಿತ್ತು.

ಕಾರ್ಯಾಚರಣೆ ಅಂಗವಾಗಿ ಬಸ್ ನಿಲ್ದಾಣದಲ್ಲಿನ ಸಂಚಾರ ದಟ್ಟಣೆ ನಿರ್ವಹಣೆ ಕ್ರಮ ಕೈಗೊಂಡಿದ್ದು, ಕೆ.ಎಸ್.ಆರ್.ಟಿ ಅವರೊಂದಿಗೆ ಮಾತನಾಡಿ, ಬಸ್‍ಗಳು ಒಳ ಹಾಗೂ ಹೊರ ಹೋಗುವ ಸ್ಥಳಗಳಲ್ಲಿ ದ್ವಿಚಕ್ರ ವಾಹನ ಸವಾರರು ಪಾರ್ಕಿಂಗ್ ಸ್ಥಳಕ್ಕೆ ತೆರಳು ಪ್ರತ್ಯೇಕ ಲೇನ್ ಒದಗಿಸಲಾಗಿದೆ. ಬಸ್ ನಿಲ್ದಾಣದ ಎದರು ಒಂದು ಗಾಡಿಯೂ ಇಲ್ಲದಂತೆ ಕ್ರಮ ವಹಿಸಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ನಗರದ ಒಂದೊಂದೇ ರಸ್ತೆಯನ್ನು ಕ್ಲಿಯರ್ ಮಾಡಿಕೊಂಡು, ರಸ್ತೆ ಬದಿಯಲ್ಲಿ ಅಂಗಡಿಗಳನ್ನು ಹಾಕಿಕೊಳ್ಳುವುದು, ತಳ್ಳುಗಾಡಿಗಳು ಮತ್ತು ಹೂವಿನಂಗಡಿಗಳನ್ನು ತೆರವುಗೊಳಿಸಿ ದ್ವಿಚಕ್ರ ವಾಹನಗಳನ್ನು ಸರಿಯಾಗಿ ನಿಲ್ಲಿಸಲು ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಸಂಚಾರಿ ಪೊಲೀಸ್ ನಿರೀಕ್ಷಕ ಮಂಜುನಾಥ್, ಎಎಸ್‍ಐ ರವಿ, ಶ್ರೀನಿವಾಸ್ ಸೇರಿದಂತೆ ಇತರೆ ಸಂಚಾರಿ ಪೊಲೀಸರು ಉಪಸ್ಥಿತರಿದ್ದರು. 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೆಯುಡಬ್ಲ್ಯೂಜೆ ವತಿಯಿಂದ ಅಗಲಿದ ಪತ್ರಕರ್ತರಿಗೆ ನುಡಿ ನಮನಸ್ಯಾಚುರೇಷನ್ ಅಭಿಯಾನದ ವಿಶೇಷ ಕಾರ್ಯಕ್ರಮ-ಡಾ.ವಾಸಂತಿ ಅಮರ್ಹಿರಿಯ ವಕೀಲ ಸಣ್ಣಕ್ಕಿ ವೆಂಕಟರಮಣಪ್ಪ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆಡಾ. ಪುನೀತ್ ರಾಜಕುಮಾರ್ 5 ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ : ಅಭಿಮಾನಿಗಳಿಂದ ಬಿರಿಯಾನಿ ವಿತರಣೆಬಿಟ್ಟುಕೊಡುವ ತಾಯ್ತನ: ಡಾ.ಶಿವಪ್ಪ ಅರಿವುಧಮ್ಮಪದ ಎಂಬ ದಾರಿ:ಡಾ.ಶಿವಪ್ಪ ಅರಿವುಕಲ್ವಳ್ಳಿ ಭಾಗದ ನೀರಾವರಿ ಸೌಲಭ್ಯ ವಂಚಿತ ನಿರ್ಲಕ್ಷಿತ ಗಡಿ ಗ್ರಾಮಗಳ ಅಳಲು ಮತ್ತು ಹಕ್ಕೊತ್ತಾಯ?ಬೆಂಗಳೂರು – ಜ್ಯೂರಿಚ್ ನೇರ ವಿಮಾನ ಸೇವೆ ಆರಂಭ: ಕರ್ನಾಟಕ ಮತ್ತು ಸ್ವಿಟ್ಜರ್‌ಲ್ಯಾಂಡ್ ಬಾಂಧವ್ಯಕ್ಕೆ ಹೊಸ ಮೆರಗುಅಡ್ಡಕಸಬಿಗಳ ಆತ್ಮಾವಲೋಕನಕ್ಕೆ ಸಕಾಲ– ಹೆಚ್.ಡಿ. ಕುಮಾರಸ್ವಾಮಿ ಚಾಟಿ​ ರಾಹುಲ್ ಗಾಂಧಿ ಪ್ರಧಾನಿ ಕನಸು ನನಸಾಗದೆ 'ಹಣ್ಣು ಹುಳಿ' ಎನ್ನುತ್ತಿದ್ದಾರೆ: ಬಿ. ವೈ. ವಿಜಯೇಂದ್ರ