Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

"ಬೆಲ್ ಬಟನ್" ಚಲನಚಿತ್ರದ ಪೋಸ್ಟರ್ ಬಿಡುಗಡೆ

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹೊಸ ವರ್ಷದ ಮೊದಲ ದಿನದಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡರು
ಬೆಲ್ ಬಟನ್ಕನ್ನಡ ಚಲನಚಿತ್ರದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರ ತಂಡಕ್ಕೆ ಬೆಂಬಲ ನೀಡಿ ಶುಭ ಹಾರೈಸಿದ್ದಾರೆ.

     ಈಗ ಯುಟ್ಯೂಬ್ ಕಾಲ. ನೀವು ಯಾವುದೇ ಯುಟ್ಯೂಬ್ ಚಾನೆಲ್ ಗೆ ಹೋಗಿ, ಅವರು ಹೇಳುವ ಮೊದಲ ವಿ?ಯ- ನೀವು ನಮ್ಮ ಚಾನೆಲ್ ಗೆ ಹೊಸಬರಾಗಿದ್ದರೆ ನಮ್ಮ ಚಾನೆಲ್ ನ ಸಬ್ಸ್ಕ್ರೈಬ್ ಮಾಡಿ ಹಾಗೆ ಬೆಲ್ ಬಟನ್ಒತ್ತೋದು ಮರೀಬೇಡಿ ಅಂತಾರೆ. ಇದ್ದನ್ನೇ ಚಿತ್ರದ ಶೀರ್ಷಿಕೆಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ ನಿರ್ದೇಶಕ ಲಕ್ಷ್ಮಿ ನರಸಿಂಹ.ಎಂ . ಕನ್ನಡದ ಖ್ಯಾತ ನಿರ್ದೇಶಕರ ಜೊತೆ ಸಹ ನಿರ್ದೇಶಕರಾಗಿ ಹಾಗೂ ರಂಗಭೂಮಿ ನಟರಾಗಿ ಅನುಭವವಿರುವ  ಲಕ್ಷ್ಮಿನರಸಿಂಹ. ಎಂ.  "ಬೆಲ್ ಬಟನ್" ಚಿತ್ರವನ್ನು ನಿರ್ದೇಶಿಸಿ ನಟನೆಯನ್ನೂ ಮಾಡಿದ್ದಾರೆ.

ಲವ್ ಹಾಗೂ ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕರೆ ಕಥೆ, ಚಿತ್ರಕಥೆ , ಸಂಭಾ?ಣೆ ಬರೆದಿದ್ದಾರೆ. ಫ್ರೆಶ್ ಫಿಲಂಸ್ ಮೂಲಕ ಹೇಮಂತ್ ಕುಮಾರ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನಾದಬ್ರಹ್ಮ ಹಂಸಲೇಖರ ಬಳಿ ಕೆಲಸ ಮಾಡಿರುವ ವಿಶಾಲ್ ಆಲಾಪ್  ಅವರು ಸಂಗೀತ ನೀಡಿದ್ದಾರೆ. ಲಕ್ಕಿ ಛಾಯಾಗ್ರಹಣ ,ಎಸ್  ಆಕಾಶ್  ಮಹೇಂದ್ರಕರ್  ಸಂಕಲನ, ಪತ್ರಿಕಾ ಸಂಪರ್ಕ ಸುಧೀಂದ್ರ ವೆಂಕಟೇಶ್, ಡಾ. ಪ್ರಭು ಗಂಜಿಹಾಳ, ಡಾ. ವೀರೇಶ ಹಂಡಗಿ, ಪ್ರಚಾರಕಲೆ ದೇವು ಅವರದಿದೆ.   

   ಜೈ, ಈ ಚಿತ್ರದ ನಾಯಕ, ನಿಸರ್ಗ ಅಪ್ಪಣ್ಣ ಮತ್ತು ಚೈತ್ರಾ ಗೌಡ ನಾಯಕಿಯರಾಗಿದ್ದಾರೆ. ಪ್ರಮೀಳಾ ಸುಬ್ರಮಣ್ಯ, ಅರವಿಂದ್, ನೊಣವಿನಕೆರೆ ರಾಮಕೃ?ಯ್ಯ, ಭಾನುಪ್ರಕಾಶ್ಪವನ್ ರಿಚ್ಚಿ, ವೇಣು, ಹರೀಶ್, ಮುಂತಾದವರು ಅಭಿನಯಸಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿರುವ ಚಿತ್ರ ತಂಡ ಇದೆ ಜನವರಿ ೧೫ ರಂದು ಚಿತ್ರದ ಟೀಸರ್ ಬಿಡುಗಡೆ ಮಾಡಲು  ನಿರ್ಧರಿಸಿದೆ.

ಚಿಕ್ಕಮಗಳೂರು ಸುತ್ತಮುತ್ತ ಸುಮಾರು ನಲವತ್ತು ದಿನಗಳ ಕಾಲ ಪ್ರಕೃತಿಯ ಮಡಿಲಲ್ಲಿ ಈ ಚಿತ್ರದ ಚಿತ್ರೀಕರಣ ಮಾಡಿದ್ದೇವೆ . ಚಿತ್ರ ಬಹಳ  ಉತ್ತಮವಾಗಿ ಮೂಡಿ ಬಂದಿದೆ, ಇನ್ನು ಕೆಲವೇ ದಿನಗಳಲ್ಲಿ ಚಿತ್ರದ ಬಿಡುಗಡೆ ದಿನಾಂಕವನ್ನು ತಿಳಿಸುತ್ತೇವೆ ಎಂದು ನಿರ್ದೇಶಕ ಲಕ್ಷ್ಮಿನರಸಿಂಹ ಅವರು ಹೇಳಿದ್ದಾರೆ.

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ