Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಿಂಡ್ ಫ್ಯಾನ್ ಅಳವಡಿಕೆ ಕಾಮಗಾರಿ ವಿರುದ್ಧ ಡಿಸಿ, ಎಸ್ಪಿ ಅವರಿಗೆ ದೂರು

Advertisement

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಮೊಳಕಾಲ್ಮುರು ತಾಲ್ಲೂಕು ಬಿ.ಜಿ ಕೆರೆ ಕಂದಾಯ ಗ್ರಾಮದ ಸ.ನಂ ೯೩ ದರ್ಖಾಸ್ತು ಜಮೀನಿನಲ್ಲಿ ಜೆಎಸ್ ಡಬ್ಲ್ಯೂ ಕಂಪನಿಯಿಂದ ವಿಂಡ್ ಫ್ಯಾನ್ ಅಳವಡಿಕೆ ಕಾಮಗಾರಿ ನಡೆಯುತ್ತಿರುವುದನ್ನು ನಿಲ್ಲಿಸುವಂತೆ ಮಹರ್ಷಿ ವಾಲ್ಮೀಕಿ ನಾಯಕ ಮಹಾವೇದಿಕೆಯ ರಾಜ್ಯಾಧ್ಯಕ್ಷ ರಾಜಣ್ಣ ಲಕ್ಷ್ಮಿಸಾಗರ ಜಿಲ್ಲಾಡಳಿತವನ್ನು ಒತ್ತಾಯಿಸಿದರು.

ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಅತ್ಯಂತ ಹಿಂದುಳಿದ ಬರಪೀಡಿತ ಪ್ರದೇಶ, ಬುಡಕಟ್ಟು ಜನಾಂಗ ಹೆಚ್ಚಾಗಿ ವಾಸಿಸುತ್ತಿರುವ ಬಿ.ಜಿ.ಕೆರೆಯಲ್ಲಿ ಕಾನೂನು ಬಾಹಿರವಾಗಿ ವಿಂಡ್ ಫ್ಯಾನ್ ಅಳವಡಿಕೆ ಕಾರ್ಯ ನಡೆಯುತ್ತಿರುವುದರ ವಿರುದ್ದ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದೇವೆ. ಸ್ಥಳೀಯ ಶಾಸಕರ ಕುಮ್ಮಕ್ಕಿನಿಂದ ಅಲ್ಲಿನ ಪೊಲೀಸರು ವಿಂಡ್ ಫ್ಯಾನ್ ಅಳವಡಿಕೆಗೆ ಸಹಕರಿಸುತ್ತಿದ್ದಾರೆ. ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ಕಾಮಗಾರಿಯನ್ನು ಸ್ಥಗಿತಗೊಳಿಸಿ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಹಾಗೂ ಇನ್ಸ್‌ಪೆಕ್ಟರ್‌ಗಳನ್ನು ಅಮಾನತ್ತುಗೊಳಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಹೋರಾಟ ಮಾಡಬೇಕಾಗುತ್ತದೆಂದು ಎಚ್ಚರಿಸಿದರು.

ನ್ಯಾಯವಾದಿ ಪಾಲಯ್ಯ ಮಾತನಾಡಿ ಎಂಟು ಎಕರೆ ಜಮೀನಿನಲ್ಲಿ ವಿಂಡ್ ಫ್ಯಾನ್ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ ಎಂದು ಹೇಳಿದರು ಕೇಳುತ್ತಿಲ್ಲ. ನ್ಯಾಯಾಲಯಕ್ಕೆ ಒಂದು ತಿಂಗಳ ಕಾಲ ಬೇಸಿಗೆ ರಜೆ ಇರುವ ಸಮಯದಲ್ಲಿ ವಿಂಡ್ ಫ್ಯಾನ್ ಅಳವಡಿಕೆ ಕಾರ್ಯ ಭರದಿಂದ ಸಾಗುತ್ತಿದೆ. ಕಂಪನಿಗೆ ಏಪ್ರಿಲ್‌ನಲ್ಲಿ ಲೀಗಲ್ ನೋಟಿಸ್ ಕೂಡ ನೀಡಲಾಗಿದೆ. ಯಾವುದಕ್ಕೂ ಜಗ್ಗುತ್ತಿಲ್ಲ. ಫ್ಯಾನ್ ಅಳವಡಿಸುವ ಮುನ್ನಾ ರೈತರಿಗೆ ಲೀಗಲ್ ನೋಟಿಸ್ ಕೊಡಬೇಕಿತ್ತು ಯಾವುದನ್ನು ಮಾಡಿಲ್ಲ. ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯನ್ನಾಗಿ ಪರಿವರ್ತಿಸಲು ಜಿಲ್ಲಾಡಳಿತದಿಂದ ಅನುಮತಿ ಪಡೆಯಬೇಕು. ರೈತರಿಗೆ ಪರಿಹಾರವೂ ನೀಡಿಲ್ಲ. ಕೂಡಲೆ ವಿಂಡ್ ಫ್ಯಾನ್ ಅಳವಡಿಕೆ ಕಾಮಗಾರಿ ನಿಲ್ಲಬೇಕೆಂದು ಆಗ್ರಹಿಸಿದರು.

ರಾಮಸಾಗರ ಮಂಜಣ್ಣ ಮಾತನಾಡುತ್ತ ನಮ್ಮ ಅಹವಾಲುಗಳನ್ನು ಯಾರು ಕೇಳುತ್ತಿಲ್ಲ. ಗೊಡ್ಡು ಬೆದರಿಕೆ ಹಾಕುತ್ತಿದ್ದಾರೆ. ವಿಂಡ್ ಫ್ಯಾನ್ ಅಳವಡಿಕೆ ಕೆಲಸ ನಿಲ್ಲಿಸಿ ಎಂದರೆ ನಮ್ಮ ಮೇಲೆ ದೌರ್ಜನ್ಯವಸೆಗುತ್ತಿದ್ದಾರೆ. ವಿಂಡ್ ಫ್ಯಾನ್ ಅಳವಡಿಕೆ ಕೆಲಸವನ್ನು ಹಿಂದಕ್ಕೆ ಪಡೆಯಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.
ರೈತ ಮುಖಂಡರುಗಳಾದ ಕಾಂತರಾಜು ಲಿಂಗಾವರಹಟ್ಟಿ
, ಸೂರಪ್ಪ, ಮಹರ್ಷಿ ವಾಲ್ಮೀಕಿ ನಾಯಕ ಮಹಾ ವೇದಿಕೆಯ ಬೈಯಣ್ಣ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಾನೂನುಬಾಹಿರವಾಗಿ ಕಾರ್ಯದರ್ಶಿ ಮುಂದುವರಿಕೆ: ಹಿರಿಯೂರು TAPCMS ಆಡಳಿತ ಮಂಡಳಿಗೆ ಉಪ ನಿಬಂಧಕರ ಅಂತಿಮ ಎಚ್ಚರಿಕೆಹಿರಿಯೂರು ಉಪಚುನಾವಣೆ: “ಸ್ಥಳೀಯ ಸ್ವಾಭಿಮಾನ”ದ ಕೂಗು ಈಗ ಯಾಕೆ..?ಹಿರಿಯ ಪತ್ರಕರ್ತೆ ವಾಳ್ವೆಕರ್ ಚಿಕಿತ್ಸೆಗೆ 90 ಸಾವಿರ ಬಿಡುಗಡೆ ಮಾಡಿದ‌ ಸಿಎಂರಾಜ್ಯ ಸರ್ಕಾರದ ವಿರುದ್ಧ ಮುಗಿಬಿದ್ದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ತಮಿಳುನಾಡಿನಲ್ಲಿ ಬಿಜೆಪಿ ದಿನೇದಿನೇ ಬಲಿಷ್ಠವಾಗಿ ಬೆಳೆಯುತ್ತಿದೆ– ಆರ್. ಅಶೋಕ್ ವಿಶ್ವಾಸರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಭೂಮಿಪೂಜೆಇಂಡೋ-ಡಚ್ ಅತ್ಯಾಧುನಿಕ ಹೈನುಗಾರಿಕೆ ತರಬೇತಿ ಕೇಂದ್ರ ಸ್ಥಾಪನೆ ​ ಜೆಡಿಎಸ್ ಪಕ್ಷದ ಹೋರಾಟಗಳು ಜನಪರವಾಗಿ ಇರುತ್ತವೆ-ನಿಖಿಲ್ಮಳೆ ಅವಾಂತರ: ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ನಿಖಿಲ್ ವಾಗ್ದಾಳಿ ​ರೈತರನ್ನು ಒಕ್ಕಲೆಬ್ಬಿಸಬೇಡಿ: ಡಿ.ಕೆ.ಶಿ ಪಟಾಲಂ ವಿರುದ್ಧ ನಿಖಿಲ್ ಆಕ್ರೋಶ