Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಮಾಜ ಘಾತುಕ, ವಿಚ್ಛಿದ್ರಕಾರಿ ಮನಸ್ಥಿತಿಯ ಕೆಟ್ಟ ಚಾಳಿ ನಿಲ್ಲಲೇಬೇಕು- ಸಿ.ಟಿ ರವಿ

Advertisement
Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇತ್ತೀಚಿಗೆ ಕೆಲವು ಸಮಾಜ ಘಾತುಕ, ವಿಚ್ಛಿದ್ರಕಾರಿ ಮನಸ್ಥಿತಿಯ ವ್ಯಕ್ತಿಗಳು ನಾನು ಹೇಳದೆ ಇರುವ ಮಾತುಗಳನ್ನು, ನಾನು ಕೊಡದೆ ಇರುವ ಹೇಳಿಕೆಗಳನ್ನು, ನನ್ನ  ಹೇಳಿಕೆ/ಪತ್ರಿಕಾ ಪ್ರಕಟಣೆ (Fake News) ಎಂದು ತೋರಿಸುವ ರೀತಿಯಲ್ಲಿ ಫೋಟೋ ಎಡಿಟ್ ಮಾಡಿ, ನನ್ನ ವಿರುದ್ಧ ಅಪಪ್ರಚಾರ ಮಾಡಿರುವುದು, ಕೆಲ ಜಾತಿ ಮತ್ತು ಸಮಾಜವನ್ನು ನನ್ನ ವಿರುದ್ಧ ಎತ್ತಿಕಟ್ಟಲು ಪ್ರಯತ್ನ ಪಡುತ್ತಿರುವುದು ಸ್ಪಷ್ಟವಾಗಿದೆ.

ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಆರಂಭವಾದ ಈ ಕೆಟ್ಟ ಚಾಳಿ ನಿಲ್ಲಲೇ ಬೇಕು ಎಂದು ಬಿಜೆಪಿ ನಾಯಕ, ವಿಪ ಸದಸ್ಯ ಸಿ.ಟಿ. ರವಿ ತಿಳಿಸಿದ್ದಾರೆ.

ಇಂಥಹ ಸುಳ್ಳು ಸುದ್ದಿ ಹರಡುವ, ಅಪಪ್ರಚಾರ ಮಾಡುವ, ಸಮಾಜದಲ್ಲಿ ಶಾಂತಿಯನ್ನು ಕದಡುವ  ಚಟುವಟಿಕೆಗಳನ್ನು ಇಂಥಹ ವ್ಯಕ್ತಿಗಳು ತಕ್ಷಣವೇ ನಿಲ್ಲಿಸಬೇಕು.

ಈ ರೀತಿಯ ಕೃತ್ಯಗಳು ಕಂಡುಬಂದರೆ ಅಂಥವರ ವಿರುದ್ಧ ಕಾನೂನು ಪ್ರಕಾರ ದೂರು ದಾಖಲಿಸಲಾಗುವುದು ಎಂದು ಸಿ.ಟಿ ರವಿ ಎಚ್ಚರಿಸಿದ್ದಾರೆ.
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.