Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರೈತ ಪ್ರತಿನಿಧಿಗಳೊಂದಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಮಹತ್ವದ ಸಮಾಲೋಚನೆ

Advertisement

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ (ಬಿಡದಿ ಟೌನ್‌ಶಿಪ್) ಅನುಷ್ಠಾನಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ರೈತ ಪ್ರತಿನಿಧಿಗಳೊಂದಿಗೆ ಮಹತ್ವದ ಸಮಾಲೋಚನೆ ನಡೆಸಿದರು.

​ಕುಮಾರಪಾರ್ಕ್‌ನಲ್ಲಿರುವ ತಮ್ಮ ಸರ್ಕಾರಿ ಗೃಹ ಕಚೇರಿಯಲ್ಲಿ ನಡೆದ ಈ ಸಭೆಯಲ್ಲಿ, ಯೋಜನೆಯ ಸಾಧಕ-ಬಾಧಕಗಳು ಹಾಗೂ ರೈತರ ಭೂಮಿ ಸ್ವಾಧೀನಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು. ರೈತರ ಹಿತರಕ್ಷಣೆಗೆ ಬದ್ಧವಾಗಿ ಮಹತ್ವದ ಉಪನಗರ ಯೋಜನೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಈ ಸಭೆ ಆಯೋಜನೆಯಾಗಿತ್ತು.

​​ಈ ಉನ್ನತ ಮಟ್ಟದ ಸಮಾಲೋಚನಾ ಸಭೆಯಲ್ಲಿ ಹಲವು ಜನಪ್ರತಿನಿಧಿಗಳು ಹಾಗೂ ರೈತ ಮುಖಂಡರು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

​ಜನಪ್ರತಿನಿಧಿಗಳು: ಶಾಸಕರಾದ ಹೆಚ್. ಸಿ. ಬಾಲಕೃಷ್ಣ ಮತ್ತು ಪ್ರಮುಖ ಮುಖಂಡರಾದ ಗಾಣಕಲ್ ನಟರಾಜ್, ​ರೈತ ಮುಖಂಡರಾದ ರಾಜಣ್ಣ ಹೊಸೂರು, ಸಿದ್ದರಾಜು, ಮಂಜುನಾಥ, ಶಿವರಾಮು ಜಯರಾಮಯ್ಯ, ಕೃಷ್ಣಮೂರ್ತಿ, ಹಾಗೂ ವಿಶ್ವನಾಥ್ ಸೇರಿದಂತೆ ಬಿಡದಿ ಭಾಗದ ಪ್ರಮುಖ ರೈತ ಪ್ರತಿನಿಧಿಗಳು ಉಪಸ್ಥಿತರಿದ್ದರು.

​ಬೆಂಗಳೂರಿನ ಮೇಲಿನ ಜನಸಂಖ್ಯೆ ಮತ್ತು ಸಂಚಾರ ಒತ್ತಡವನ್ನು ಕಡಿಮೆ ಮಾಡಲು ಬಿಡದಿ ಉಪನಗರ (ಟೌನ್‌ಶಿಪ್) ಯೋಜನೆಯು ಅತ್ಯಂತ ಪ್ರಮುಖವಾಗಿದ್ದು, ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆಯನ್ನು ಮುನ್ನಡೆಸಲು ಸರ್ಕಾರ ಮುಂದಾಗಿದೆ.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಕ್ರೀದ್ ಹಬ್ಬದ ಪ್ರಯುಕ್ತ ಶಾಂತಿಸಭೆಗ್ರಾಮಾಂತರ ಪೋಲಿಸರ ಕಾರ್ಯಾಚರಣೆ ಒಣಗಾಂಜ ವಶ ಆರೋಪಿ ಬಂಧನಬೆಳಗೆರೆ ಕೃಷ್ಣ ಶಾಸ್ತ್ರಿಗಳ 111ನೇ ಜಯಂತಿ: ಮೇ 22 ಮತ್ತು 23ರಂದು ದ್ವಿ ದಿನ ಆಚರಣೆಜಗನ್ಮಾತೃತ್ವವನ್ನು ಜಗತ್ತಿಗೆ ಸಾಬೀತುಪಡಿಸಿದ್ದೇ ಷೋಡಶೀ ಪೂಜೆ: ಎಂ ಗೀತಾ ನಾಗರಾಜ್ದೇವೇಗೌಡರು ಎಂಬುದೇ ಬಹುದೊಡ್ಡ ಗೌರವವನ್ನು ಕನ್ನಡಿಗರಿಗೆ ತಂದಿದೆಇದು ಕಾಂಗ್ರೆಸ್‌ನ ಸಾಧನಾ ಸಮಾವೇಶವಲ್ಲ, ಕನ್ನಡಿಗರಿಗೆ ಬಗೆದ ‘ದ್ರೋಹದ ಮಹಾಸಮಾವೇಶ’: ಆರ್. ಅಶೋಕ್ಹೊಸ ಬಸ್‌ಗಳಿಗೆ ಯಾವುದೇ ಅನುದಾನ ಬಿಡುಗಡೆ ಮಾಡದ ಸರ್ಕಾರಸ್ಮಾರ್ಟ್ ಮೀಟರ್ ಹಂಚಿಕೆಯಲ್ಲಿ ಮಹಾ ಅವಾಂತರ: ಆರ್. ಅಶೋಕ್ ಗಂಭೀರ ಆರೋಪರೋಮ್‌ನಲ್ಲಿ ಪ್ರಧಾನಿ ಮೋದಿಗೆ ಅದ್ಧೂರಿ ಸ್ವಾಗತ: ಅನಿವಾಸಿ ಭಾರತೀಯರಿಗೆ ಧನ್ಯವಾದ ತಿಳಿಸಿದ ಪಿಎಂವಿಶಾಖಪಟ್ಟಣಂ ಸ್ಟೀಲ್ ಪ್ಲಾಂಟ್ ಪುನಶ್ಚೇತನಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಉನ್ನತ ಮಟ್ಟದ ಸಭೆ