Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸೆನ್ಸಾರ್‌ಗೆ ಸಿದ್ಧವಾದ ಡೆತ್ ಸರ್ಟಿಫಿಕೇಟ್

Advertisement
ಚಂದ್ರವಳ್ಳಿ ನ್ಯೂಸ್, ಮೈಸೂರು:
ಚಿರು ಮೀಡಿಯಾ ಹೌಸ್ ಮೈಸೂರ ಅವರ
ಡೆತ್ ಸರ್ಟಿಫಿಕೆಟ್ಚಲನಚಿತ್ರದ ಪೋಸ್ಟ ಪ್ರೊಡಕ್ಷನ್ ಕಾರ್ಯ ಮುಗಿಸಿ ಇದೀಗ ಸೆನ್ಸಾರ್ ಗೆ ಹೋಗಲು ಸಿದ್ಧವಾಗಿದೆ.

ಉತ್ತರ ಕರ್ನಾಟಕದ ನೈಜ ಭಾಷೆ, ವಾಸ್ತವಿಕ ಕಥಾಹಂದರ, ಗ್ರಾಮೀಣತೆಯ ಸೊಗಡು, ಮೇಕಪ್ ರಹಿತ ಕಲಾವಿದರು ಮುಂತಾದ ವೈಶಿಷ್ಯಗಳಿಂದ ಕೂಡಿರುವ ಈ ಚಿತ್ರದ ಚಿತ್ರೀಕರಣ  ಸಂಪೂರ್ಣವಾಗಿ ಬಾಗಲಕೋಟ ಜಿಲ್ಲೆಯ     ಹುನಗುಂದ ತಾಲೂಕಿನ ವೀರಾಪುರ, ನಾಗೂರ ಗ್ರಾಮಗಳಲ್ಲದೆ   ಇನ್ನಿತರ ಸ್ಥಳಗಳಲ್ಲಿ   ಒಂದೇ ಹಂತದಲ್ಲಿ ಸತತವಾಗಿ ಚಿತ್ರೀಕರಣ ನಡೆಸಿ ಮುಕ್ತಾಯಗೊಳಿಸಲಾಗಿದೆ.

ಉತ್ತರ ಕರ್ನಾಟಕದ ಜನರ ಬದುಕಿನ ನೈಜತೆಯನ್ನು ಇಲ್ಲಿ ಚಿತ್ರೀಕರಿಸಿದ್ದೇನೆ ಎಂದು ನಿರ್ದೇಶಕ ಗುರುದತ್ ಮುಸುರಿ ಹೇಳಿದರು. ಚಿತ್ರೀಕರಣಕ್ಕೆ ವೀರಾಪೂರ ಮತ್ತು ನಾಗೂರ ಗ್ರಾಮಗಳ ಸಮಸ್ತ ಜನತೆ ಸಂಪೂರ್ಣ ಸಹಕಾರ ನೀಡಿದ್ದಾರೆ.

ಅವರಿಗೆ ಎಷ್ಟು ಕೃತಜ್ಞತೆ ಹೇಳಿದರೂ ಕಡಿಮೆಯೇ ಎಂದು ಕಥೆಗಾರ ಹುನಗುಂದದ ಮಹಾಂತೇಶ ಹಳ್ಳೂರ ಹೇಳಿದರು. ಈಗಾಗಲೇ ಬೆಂಗಳೂರಿನ ತಂಡ ಮೂವ್ಹಿ ಮೇಕರ್ಸ್ ಸ್ಟುಡಿಯೋದಲ್ಲಿ ಸಂಪೂರ್ಣ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಮುಗಿಸಿದ್ದು ಇದೀಗ ಸೆನ್ಸಾರ್‌ಗೆ ಸಿದ್ಧವಾಗಿದೆ. ನೈಜ ಘಟನೆಯನ್ನು ಕಥೆಯಾಗಿ ಬರೆದ ಮಹಾಂತೇಶ ಹಳ್ಳೂರ ಕಥೆ, ಚಿತ್ರಕಥೆ ಸಂಭಾಷಣೆಯನ್ನು ಬರೆದಿದ್ದಾರೆ. 

ಛಾಯಾಗ್ರಹಣದ ಜೊತೆ ನಿರ್ದೇಶನದ ಹೊಣೆಯನ್ನು ಗುರುದತ್ತ ಮುಸುರಿ ವಹಿಸಿದ್ದಾರೆ, ಸಂಗೀತ ಅಜಿತ್, ಪತ್ರಿಕಾ ಸಂಪರ್ಕ ಡಾ. ಪ್ರಭು ಗಂಜಿಹಾಳ ಡಾ.ವೀರೇಶ ಹಂಡಿಗಿ, ಸಹನಿರ್ದೇಶನ ಬಸಲಿಂಗಪ್ಪ ತೋಟದ, ಸಹಾಯಕ ನಿರ್ದೇಶನ ಶೇ?ಗಿರಿ, ಸಂಕಲನ ಮಲ್ಲಿಕಾರ್ಜುನ, ಪ್ರೊಡಕ್ಷನ್ ಮ್ಯಾನೇಜರ್ ಮಹಾಂತೇಶ ಮಠ, ಚಿತ್ರದ ಸಹ ನಿರ್ಮಾಪಕರು ವಸಂತಾ ಹಳ್ಳೂರ ಆಗಿದ್ದಾರೆ.  

ತಾರಾಗಣದಲ್ಲಿ ನಾಯಕ ನಟ ಮನ್ವೀತ್, ವಿಜಯಲಕ್ಷ್ಮಿ, ಮಹಾಂತೇಶ ಹಳ್ಳೂರ, ಬಸಲಿಂಗಪ್ಪ ತೋಟದ, ಜಯದೇವ ಗಂಜಿಹಾಳ, ಪ್ರವೀಣ ಭತ್ತದ, ಬಂಡು ಕಟ್ಟಿ, ಡಾ.ಚಂದ್ರನಾಥ ಒಂಟಕುದರಿ, ಮಂಜುಶ್ರೀ ಮಣಿ, ಹನಮಂತ ಮಸ್ಕಿ,ಮಹಾಂತೇಶ ಅಂಗಡಿ, ಮಹಾಂತೇಶ ಮಠ, ಮಹಾಂತೇಶ ಅಗಸಿಮುಂದಿನ, ಮಹಾಂತೇಶ ಅಂಗಡಿ, ನಾಗಪ್ಪ ಪೂಜಾರಿ, ಚಂದ್ರಶೇಖರ ಶಾಸ್ತ್ರಿ , ಸಂಗು ಮಠ, ಬಸನಗೌಡಾ ಹಿರೇಗೌಡ್ರ,



ಮಹಾಂತೇಶ ಗಜೇಂದ್ರಗಡ, ವಿನೋದ ಹೂಗಾರ, ಢವಳಚಂದ ಪವಾರ, ಅನಂತ ಬಬಲೇಶ್ವರ, ಗುಡದೂರಕಲ್ಮಠ, ಗುರು ಮಠ, ಭೀಮರಾವ್ ಹಾಗೂ ವೀರಾಪುರಗ್ರಾಮದ ಸಮಸ್ತ ಜನತೆ ಅಭಿನಯಿಸಿದ್ದಾರೆ.  ಸೆನ್ಸಾರ್ ನಿಂದ ಹೊರಬರುತ್ತಿದ್ದಂತೆ ಚಲನಚಿತ್ರವನ್ನು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವದಾಗಿ ಚಿರು ಮೀಡಿಯಾ ಹೌಸ್ ತಿಳಿಸಿದೆ.   
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ