Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ದೇವೇಗೌಡರು ಎಂಬುದೇ ಬಹುದೊಡ್ಡ ಗೌರವವನ್ನು ಕನ್ನಡಿಗರಿಗೆ ತಂದಿದೆ

Advertisement

 ಚಂದ್ರವಳ್ಳಿ ನ್ಯೂಸ್, ಚಾಮರಾಜನಗರ:
ಭಾರತದ ಮಾಜಿ ಪ್ರಧಾನಿಗಳು ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಹೆಚ್ ಡಿ ದೇವೇಗೌಡರವರಿಗೆ ಆಧ್ಯಾತ್ಮ ಶಕ್ತಿ
, ಬಲ, ಚಿಂತನೆ, ಜ್ಞಾನ ಹಾಗೂ ಜೀವನ ಶೈಲಿಯ ಮಹತ್ವದ ಪರಿಣಾಮವಾಗಿ ದೇಶದ ಅಭಿವೃದ್ದಿ ಮತ್ತು ಕನ್ನಡಿಗರ ಗೌರವವನ್ನು ಹೆಚ್ಚಿಸುವಲ್ಲಿ ಅಪಾರ ಕೊಡುಗೆ ನೀಡುತ್ತಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರು ಹಾಗೂ ಸಂಸ್ಕೃತಿ ಚಿಂತಕರಾದ  ಸುರೇಶ್ ಎನ್ ಋಗ್ವೇದಿ  ತಿಳಿಸಿದರು.

 ಅವರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಸಂಘಟನೆಗಳು ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಹೆಚ್ ಡಿ ದೇವೇಗೌಡರ  ಜನ್ಮದಿನ ಹಾಗೂ ಅವರ ಕೊಡುಗೆಗಳ ಕುರಿತ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತ ಎಚ್ ಡಿ ದೇವೇಗೌಡರವರು ಮೊಟ್ಟಮೊದಲ ಕನ್ನಡಿಗ ಪ್ರಧಾನಿಯಾಗಿ ಸೇವೆ ಸಲ್ಲಿಸಿರುವುದು 7 ಕೋಟಿ ಕನ್ನಡಿಗರಿಗೆ ವಿಶೇಷವಾದ ಗೌರವ ಪ್ರೀತಿ ಅಭಿಮಾನ ಇದೆ. ಕರ್ನಾಟಕಕ್ಕೆ ಅವರ ನಿರಂತರವಾದ ಸೇವೆ ಮರೆಯಲಾಗದು. ಅವರ ನೀರಾವರಿ ಯೋಜನೆಗಳು, ರೈತಪರ ಹೋರಾಟದ ಮೂಲಕ ಮಣ್ಣಿನ ಮಗನೆಂದೇ ಪ್ರಸಿದ್ಧರಾದವರು.

ಕರ್ನಾಟಕದ ಆಲಮಟ್ಟಿ ಅಣೆಕಟ್ಟೆ ಯೋಜನೆ, ಕಾವೇರಿ ನದಿ ನೀರಿನ ವಿಚಾರವನ್ನು ಬಗೆಹರಿಸಿದವರು. ಪ್ರತ್ಯೇಕ ರೈಲ್ವೆ ವಲಯದ ಸ್ಥಾಪನೆಯ ಮೂಲಕ ರೈಲ್ವೆ ಯೋಚನೆಗಳು ಹಾಗೂ ಉದ್ಯೋಗಕ್ಕೆ ಅವಕಾಶ ದೊರಕಿಸಿದವರು. ಸರೋಜಿನಿ ಮಹಿಷಿಯ ಮೂಲಕ ಕನ್ನಡಿಗರ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಕಾರಣಕರ್ತರಾದವರು.

ಇವರ ನೀರಾವರಿ ಯೋಜನೆಗಳು, ಆರ್ಥಿಕ ಚಿಂತನೆಗಳು,ಸಾಮಾಜಿಕ ಯೋಜನೆಗಳು, ಕೃಷಿ, ಕೈಗಾರಿಕೆ ಹಾಗೂ ವಿದೇಶಿ ಬಂಡವಾಳವನ್ನು ತರವಲ್ಲಿ ಇವರ ಪಾತ್ರ ಅಪಾರ. ಸರಳ, ಸದೃಢ ಪರಿಣಾಮಕಾರಿ ಜೀವನ ಶೈಲಿಯನ್ನು ಹೊಂದಿರುವ ದೇವೇಗೌಡರವರು ಅಪಾರ ದೈವ ಭಕ್ತರು. ಸಂಸ್ಕೃತಿ ಪರಂಪರೆಯ ಬಗ್ಗೆ ಕಳಕಳಿ ಹೊಂದಿ ನಿರಂತರ ಅನುಷ್ಠಾನದ ಮೂಲಕ ಬಲವನ್ನು ಶಕ್ತಿಯನ್ನು ಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳುವ ಮೂಲಕ ದೇಶ ಸೇವೆಯಲ್ಲಿ ತೊಡಗಿರುವವರು. ಇವರು ಕನ್ನಡಿಗರು ಎಂಬುದೇ ಬಹುದೊಡ್ಡ ಹೆಮ್ಮೆಯಾಗಿದೆ.  ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಕೃತಿ ಪರಂಪರೆ,ನೆಲ,ಜಲ, ಭಾಷೆ, ಜೊತೆಗೆ ನಿರಂತರವಾಗಿ ದೇಶಕ್ಕೆ ಸೇವೆ ಸಲ್ಲಿಸುತ್ತಿರುವ ಕನ್ನಡಿಗರ ಸಾಧನೆಗಳನ್ನು ಪರಿಚಯಿಸುವ ಕಾರ್ಯವನ್ನು ಮಾಡುತ್ತಿರುವುದು ಸಂತೋಷ ತಂದಿದೆ ಎಂದರು.

 ತಮಿಳು ಸಂಘದ ಅಧ್ಯಕ್ಷರು ಹಾಗೂ ಹಿರಿಯ ಜಗದೀಶನ್ ಉದ್ಘಾಟನೆ ನೆರವೇರಿಸಿ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಮಣ್ಣಿನ ಮಗ ಎಂದೇ ಪ್ರಸಿದ್ಧರಾದ ದೇವೇಗೌಡ ರವರ ಕೊಡುಗೆಗಳ ಕುರಿತು ಕಾರ್ಯಕ್ರಮ ರೂಪಿಸಿ ಉದ್ಘಾಟನೆ ನೆರವೇರಿಸಲು ಅವಕಾಶ ನೀಡಿದ ಪರಿಷತ್ತಿನ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿ ಕನ್ನಡದ ಪ್ರಧಾನಿಗಳು ದೇವೇಗೌಡರು ಎಂಬುದೇ ಬಹುದೊಡ್ಡ ಗೌರವವನ್ನು ಕನ್ನಡಿಗರಿಗೆ ತಂದಿದೆ. ಚಾಮರಾಜನಗರಕ್ಕೆ ಹಲವಾರು ಬಾರಿ ಭೇಟಿ ನೀಡಿ ನಮ್ಮ ಮನೆಯಲ್ಲಿ ಉಪಹಾರ ಸೇವಿಸಿರುವುದು ಸಂತೋಷವಾಗಿದೆ.

ದೇವೇಗೌಡರವರು  ಆಡಳಿತ ದೂರದೃಷ್ಟಿಯ ಮೂಲಕ ಚಾಮರಾಜನಗರಕ್ಕೆ ಅನೇಕ ಯೋಜನೆಗಳನ್ನು ವಿಶೇಷವಾಗಿ ಮೈಸೂರು ಪ್ರಾಂತ್ಯದ ರೈತರ ಅಭಿವೃದ್ಧಿಗಾಗಿ ಕಾರ್ಯಕ್ರಮಗಳನ್ನು ರೂಪಿಸಿದ ಮಹಾವ್ಯಕ್ತಿ. ದೇಶದ ಪ್ರಧಾನಿಗಳಾಗಿ ಕರ್ನಾಟಕದ ಮುಖ್ಯಮಂತ್ರಿಗಳಾಗಿ ನೀರಾವರಿ ರೈತರ ಹಾಗೂ ಸಾಮಾನ್ಯ ಜನರ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ಅನುಷ್ಠಾನ ಮಾಡಿಸಿ ಕೈಗಾರಿಕೆ ರಸ್ತೆ ಅಭಿವೃದ್ಧಿ ಸೇತುವೆ ನಿರ್ಮಾಣ ಹಾಗೂ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು. 

 ಜನಪದ ರವಿಚಂದ್ರಪ್ರಸಾದ್ ಕಹಳೆ ಮಾತನಾಡಿ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ದೇವೇಗೌಡರವರು ಚಾಮರಾಜನಗರಕ್ಕೆ ಬಂದು ಹೋದ ನಂತರ ಪ್ರಧಾನಿಗಳಾಗಿ ಸೇವೆ ಸಲ್ಲಿಸಿದರು. ಚಾಮರಾಜನಗರಕ್ಕೆ ಬಂದು ಹೋದರೆ ಅಧಿಕಾರ ಹೋಗುತ್ತದೆ ಎಂಬ  ಕಳಂಕವನ್ನು ನಿವಾರಿಸಿದವರು. ನಗರಕ್ಕೆ ಆಗಮಿಸುವ ಎಲ್ಲರಿಗೂ ವಿಶೇಷ ಅಧಿಕಾರ ಸಿಗುವ ಅವಕಾಶವಿದೆ. ದೇವೇಗೌಡರವರು ಅಭಿವೃದ್ಧಿಯ ಕನಸುಗಳನ್ನು ಸಾಕಾರಗೊಳಿಸಿದವರು ಎಂದರು.

 ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಸದಸ್ಯ ಸರಸ್ವತಿ, ಬಿಕೆ ಆರಾಧ್ಯ, ಶಿವಲಿಂಗ ಮೂರ್ತಿ, ಮಹೇಶ್ ಉಪಸ್ಥಿತರಿದ್ದರು.

 

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಕ್ರೀದ್ ಹಬ್ಬದ ಪ್ರಯುಕ್ತ ಶಾಂತಿಸಭೆಗ್ರಾಮಾಂತರ ಪೋಲಿಸರ ಕಾರ್ಯಾಚರಣೆ ಒಣಗಾಂಜ ವಶ ಆರೋಪಿ ಬಂಧನಬೆಳಗೆರೆ ಕೃಷ್ಣ ಶಾಸ್ತ್ರಿಗಳ 111ನೇ ಜಯಂತಿ: ಮೇ 22 ಮತ್ತು 23ರಂದು ದ್ವಿ ದಿನ ಆಚರಣೆಜಗನ್ಮಾತೃತ್ವವನ್ನು ಜಗತ್ತಿಗೆ ಸಾಬೀತುಪಡಿಸಿದ್ದೇ ಷೋಡಶೀ ಪೂಜೆ: ಎಂ ಗೀತಾ ನಾಗರಾಜ್ದೇವೇಗೌಡರು ಎಂಬುದೇ ಬಹುದೊಡ್ಡ ಗೌರವವನ್ನು ಕನ್ನಡಿಗರಿಗೆ ತಂದಿದೆಇದು ಕಾಂಗ್ರೆಸ್‌ನ ಸಾಧನಾ ಸಮಾವೇಶವಲ್ಲ, ಕನ್ನಡಿಗರಿಗೆ ಬಗೆದ ‘ದ್ರೋಹದ ಮಹಾಸಮಾವೇಶ’: ಆರ್. ಅಶೋಕ್ಹೊಸ ಬಸ್‌ಗಳಿಗೆ ಯಾವುದೇ ಅನುದಾನ ಬಿಡುಗಡೆ ಮಾಡದ ಸರ್ಕಾರಸ್ಮಾರ್ಟ್ ಮೀಟರ್ ಹಂಚಿಕೆಯಲ್ಲಿ ಮಹಾ ಅವಾಂತರ: ಆರ್. ಅಶೋಕ್ ಗಂಭೀರ ಆರೋಪರೋಮ್‌ನಲ್ಲಿ ಪ್ರಧಾನಿ ಮೋದಿಗೆ ಅದ್ಧೂರಿ ಸ್ವಾಗತ: ಅನಿವಾಸಿ ಭಾರತೀಯರಿಗೆ ಧನ್ಯವಾದ ತಿಳಿಸಿದ ಪಿಎಂವಿಶಾಖಪಟ್ಟಣಂ ಸ್ಟೀಲ್ ಪ್ಲಾಂಟ್ ಪುನಶ್ಚೇತನಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಉನ್ನತ ಮಟ್ಟದ ಸಭೆ