Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಗ್ರಾಮದ ಒಳಿತಿಗಾಗಿ ಮಲಿಯಮ್ಮನ ಬೆಟ್ಟವೇರಿದ ಭಕ್ತರು

Advertisement
ಚಂದ್ರವಳ್ಳಿ ನ್ಯೂಸ್, ಗುಡೇಕೋಟೆ(ಕೂಡ್ಲಿಗಿ):
ಗ್ರಾಮದ ಎಲ್ಲಾ ಸಮುದಾಯದವರ ಜೊತೆಗೆ
, ವಿಶೇಷವಾಗಿ ಮ್ಯಾಸ ಬುಡಕಟ್ಟು ಸಮುದಾಯದ ವಾಲ್ಮೀಕಿ ಸಮುದಾವರು ಪ್ರತಿವರ್ಷದ ವಾಡಿಕೆಯಂತೆ ಗ್ರಾಮದ ಆರಾಧ್ಯ ದೇವಿ, ಐತಿಹಾಸಿಕ ದೊರೆಗಳ ಗುಡ್ಡದ ಮೇಲೆ ನೆಲೆಸಿರುವ ಶ್ರೀ ಮಲಿಯಮ್ಮ ದೇವಿಯ ಸನ್ನಿಧಾನಕ್ಕೆ ತೆರಳಿ ಮಳೆ ಬೆಳೆಗಾಗಿ, ದನಕರುಗಳಿಗೆ ಯಾವುದೇ ರೋಗರುಜಿನಗಳು ಬಾರದಹಾಗೆ ,

ಮಂಗಳವಾರ ಗ್ರಾಮದ ಒಳಿತಿಗಾಗಿ, ವಿಶೇಷ ಪ್ರಾರ್ಥನೆ ಸಲ್ಲಿಸಿ ಪೂಜೆ ನೆರವೇರಿಸಿದರು. ಗತಕಾಲದ  ಪಾಳೆಗಾರರ ಇತಿಹಾಸ ಸಾರುವ ಹಾಗೂ ಪಾಳೆಗಾರರ ಮನೆತನದವರು ಪೂಜಿಸುವ ನಾಡಿನ ಭಕ್ತರ ಕೋರಿಕೆಯನ್ನು ಈಡೇರಿಸುವ ಮಹಾತಾಯಿ ಶ್ರೀ ಮಲಿಯಮ್ಮ,ಕಾಳಮ್ಮ,ಕೊಡಿ ದುರುಗಮ್ಮ, ಪಾರ್ವತಿ ಪರಮೇಶ್ವರ, ರಾಮಲಿಂಗೇಶ್ವರ,ಹನುಮಂತ ದೇವರುಗಳಿಗೆ ಪ್ರಾರ್ಥನೆ ಸಲ್ಲಿಸಿ ವಿಶೇಷ ಪೂಜೆ ಸಲ್ಲಿಸುವುದು ಪ್ರತಿವರ್ಷದ ಸಂಪ್ರದಾಯವಾಗಿದೆ.ಇದನ್ನು ಹೆಡಿಗೆ ಪರುವು ಎಂದು ಕರೆಯುವರು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ಭಕ್ತರು ಮಂಗಳವಾದ್ಯ ಗಳೊಂದಿಗೆ ಪಾದಯಾತ್ರೆ ಮೂಲಕ ದೇವಿಯ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿ, ಸಾಮೂಹಿಕ ಪ್ರಸಾದ ಸ್ವೀಕರಿಸಿ, ಗ್ರಾಮದ ಮಹಿಳೆಯರು ಸಾಂಸ್ಕೃತಿಕವಾಗಿ ಗ್ರಾಮೀಣ ಆಟಗಳನ್ನು ಹಾಡಿ ಸಂಜೆ ಮನೆಗೆ ತೆರಳಿದರು. 

ಈ ಸಂದರ್ಭದಲ್ಲಿ ಗುಡೇಕೋಟೆ ಗ್ರಾಮದ ಗ್ರಾಮಸ್ಥರು, ದೇವಿಯ ಅರ್ಚಕರು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು, ಅಭಿವೃದ್ಧಿ ಅಧಿಕಾರಿಗಳು, ಸದ್ಭಕ್ತರು ಉಪಸ್ಥಿತರಿದ್ದರೆಂದು ಸಿ ಅರುಣ್ ಕುಮಾರ್ ಮಾಹಿತಿ ನೀಡಿದ್ದಾರೆ.

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ