Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ದೇವರಾಜು ಅರಸು ಎಂಬ “ತಬ್ಬಲಿಗಳ ತಂದೆ”-ಡಿಕೆಶಿ

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಮನಗರದ ಜೂನಿಯರ್‌ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ದಿ. ಶ್ರೀ ಡಿ ದೇವರಾಜ ಅರಸು ಅವರ 110ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಾತನಾಡಿದರು. ಹಿಂದುಳಿದ ವರ್ಗಗಳ ಅಭಿವೃದ್ಧಿಯ ಹರಿಕಾರ ಎಂದೇ ಹೆಸರುವಾಸಿಯಾಗಿದ್ದ ದೇವರಾಜ ಅರಸು ಅವರು ಪ್ರತಿಯೊಬ್ಬ ರಾಜಕಾರಣಿಗೂ ಮಾದರಿಯಾಗಿದ್ದಾರೆ.

ಭೂಸುಧಾರಣೆ ಹಾಗೂ ಉಳುವವನೆ ಭೂಮಿಯ ಒಡೆಯ ಕಾನೂನನ್ನು ಜಾರಿಗೆ ತಂದು ಬಡವರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡಿದವರು. ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಅನೇಕ ಕ್ರಾಂತಿಕಾರಿ ಯೋಜನೆಗಳನ್ನು ಜಾರಿ ತಂದು ಸಮಾಜದ ಕ್ಷೇಮಾಭಿವೃದ್ಧಿಗೆ ಶ್ರಮಿಸಿದ ಧೀಮಂತ ನಾಯಕರಿಗೆ ಪಾದಾಭಿವಂದನೆಗಳನ್ನು ಸಲ್ಲಿಸುತ್ತೇನೆಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ದೇವರಾಜು ಅರಸು ಅವರು ಬಡಜನರ ಬದುಕು ಬದಲಾವಣೆ ಮಾಡುವ ಕಾರ್ಯಗಳನ್ನು ಮಾಡಿದ್ದರು. ಅರಸು ಕಾಲದಲ್ಲಿ ಉಳುವವನಿಗೆ ಭೂಮಿ ಕೊಟ್ಟರು, ಜಾಗ ಕೊಟ್ಟರು, ವೃದ್ಧಾಪ್ಯ ವೇತನ ಕೊಟ್ಟರು.



ನನ್ನ ಕ್ಷೇತ್ರದಲ್ಲಿ 8000 ಸಾವಿರ ಜನರಿಗೆ ಜಮೀನು ಕೊಟ್ಟಿದ್ದೇವೆ. ಈಗ ಅದರ ಜವಾಬ್ದಾರಿಯನ್ನು ಡಿ.ಕೆ ಸುರೇಶ್‌ಅವರಿಗೆ ವಹಿಸಿದ್ದೇನೆ. ಅಧಿಕಾರವನ್ನು ಬಡಜನರ ಅಭಿವೃದ್ಧಿಗಾಗಿ ಬಳಸಬೇಕು, ಕನಕಪುರದಲ್ಲಿ ನೂರು ಎಕರೆ ಜಾಗವನ್ನು ಬಡವರ ಸೈಟ್‌ಗಾಗಿ ಹಂಚಿದ್ದೇನೆ. ನಾನೇ ಕುಳಿತುಕೊಂಡು, ಹೆಣ್ಣುಮಕ್ಕಳ ಹೆಸರಿಗೆ ಸೈಟ್‌ಬರೆದು ಕೊಟ್ಟಿದ್ದೇ‌ನೆ ಎಂದು ಡಿಸಿಎಂ ತಿಳಿಸಿದರು.

ರಾಮನಗರದ ಶಾಸಕರಾದ ಇಕ್ಬಾಲ್‌ಹುಸೇನ್‌ಅವರು, ಮಾಗಡಿ ಶಾಸಕರಾದ ಹೆಚ್.ಸಿ ಬಾಲಕೃಷ್ಣ ಅವರು, ಚನ್ನಪಟ್ಟಣ ಶಾಸಕರಾದ ಸಿ.ಪಿ ಯೋಗೇಶ್ವರ್‌ಅವರೊಂದಿಗೆ ಸೇರಿ ರಾಮನಗರದಲ್ಲಿ 100 ಎಕರೆಯಲ್ಲಿ ಸೈಟ್‌ಹಂಚುವ ಕೆಲಸ ಮಾಡಬೇಕು ಎಂದು ಸಿಎಂ ಜೊತೆಗೆ ಚರ್ಚೆ ನಡೆಸಿದ್ದೇವೆ ಎಂದು ಡಿಸಿಎಂ ಡಿಕೆಶಿ ತಿಳಿಸಿದರು.

ನಾನು ಈ ಭೂಮಿಯಲ್ಲಿ ಹುಟ್ಟಿದ್ದೀನಿ, ಈ ಭೂಮಿಯಲ್ಲಿ ಬದುಕಿದ್ದೀನಿ, ಇದೇ ಭೂಮಿಯಲ್ಲಿ ಸಾಯ್ತೀನಿ. ಅರಸು ಅವರ ಹಾದಿಯಲ್ಲೇ ನಾವೆಲ್ಲರೂ ನಡೆಯಬೇಕಿದೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ