LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅಂಗನವಾಡಿ ಕೇಂದ್ರದ ಮಕ್ಕಳಿಗೆ ಸಮವಸ್ತ್ರ ವಿತರಣೆ

Advertisement
Advertisement

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ : 
ನಗರದ ಮುಕಾಂಬಿಕಾ ಬಡಾವಣೆಯ ಅಂಗವಾಡಿ ಮಕ್ಕಳಿಗೆ ಎಸ್ ಆರ್  ಗ್ರೂಪ್ಸ್  ಸಂಸ್ಥೆ ವತಿಯಿಂದ ಉಚಿತ ಸಮವಸ್ತ್ರ ವಿತರಣೆ ಮಾಡಲಾಯಿತು.

ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಪ್ರಚಾರ ಸಂಸ್ಥೆಯ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರು ಹಾಗೂ ಎಸ್ ಆರ್ ಗ್ರೂಪ್ಸ್ ನ ಮಾಲೀಕರಾದ ಎಚ್ ಶಿವಕುಮಾರ್ ಮಾತನಾಡಿ ನಮ್ಮ ಸಂಸ್ಥೆ ವತಿಯಿಂದ ಸಮಾಜದಲ್ಲಿ ಹಲವು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದ್ದು ಅಂತೆಯೇ ಇಂದು ನಗರದ ಮುಕಾಂಬಿಕಾ ಬಡಾವಣೆಯ ಅಂಗವಾಡಿ ಕೇಂದ್ರದ ಪುಟಾಣಿ ಮಕ್ಕಳಿಗೆ ಸಮವಸ್ತ್ರ ವಿತರಣೆ ಮಾಡಿದ್ದೇವೆ. ಮಕ್ಕಳ ಕಲಿಕೆಗೆ ಅವಶ್ಯಕವಿರುವ ಸಹಾಯ ಮಾಡಲು ನಾವು ಸದಾ ಸಿದ್ದ ಎಂದು ತಿಳಿಸಿದರು.

 ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಪ್ರಚಾರ ಸಂಸ್ಥೆಯ ರಾಜ್ಯ ಕಾರ್ಯಧ್ಯಕ್ಷರು ಹಾಗೂ ಎಸ್ ಆರ್ ಗ್ರೂಪ್ಸ್ ಸಂಸ್ಥೆಯ ಮಾಲೀಕರಾದ ಡಾ.ಹೆಚ್ .ರಾಘವೇಂದ್ರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಪುಟಾಣಿ ಮಕ್ಕಳ ಕಲಿಕೆಗೆ ಸಹಕಾರ ನೀಡುವ ಸಲುವಾಗಿ ಮಕ್ಕಳು ಪ್ರತಿನಿತ್ಯ ಧರಿಸುವ ಸಮವಸ್ತ್ರ ನೀಡಿದ್ದೇವೆ. ಇಂದಿನ ಮಕ್ಕಳೇ ಮುಂದಿನ ಭವಿಷ್ಯ,  ಪುಟಾಣಿ ಮಕ್ಕಳ ಅಭಿವೃದ್ಧಿಗೆ ನಮ್ಮ ಎಸ್ ಆರ್ ಬ್ರದರ್ಸ್ ಸಂಸ್ಥೆ ಸದಾ ಸಿದ್ದ ಎಂದರು.

ಉದ್ಯಮಿಗಳಾದ ಕಿರಣ್ ಶೆಟ್ಟಿಗಾರ್ ಮಾತನಾಡಿ ಎಸ್ ಆರ್ ಬ್ರದರ್ಸ್ ಮಾಡಿರುವ ಇಂದಿನ ಕಾರ್ಯ ಸಮಾಜಕ್ಕೆ ಉತ್ತಮ ಸಂದೇಶವಾಗಿದೆ.ವ್ಯರ್ಥ ಕಾರ್ಯಗಳಿಗೆ ದುಂದು ವೆಚ್ಚ ಮಾಡುವ ಬದಲು ಇಂತಹ ಸಮಾಜಮುಖಿ  ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಅರ್ಥ ಪೂರ್ಣ ಜೀವನ ನಡೆಸಬಹುದು ಅಂಗನವಾಡಿ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ ಮಾಡರಿ ಕಾರ್ಯಕ್ರಮ ಇಂತಹ ಕಾರ್ಯಕ್ರಮಗಳು ಮತ್ತಷ್ಟು ಸಮಾಜಕ್ಕೆ ಲಭಿಸಲಿ ಎಂದು ತಿಳಿಸಿದರು.

 ಅನ್ನದಾಸೋಹಿ ಮಲ್ಲೇಶ್ ಮಾತನಾಡಿ ಸದಾ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ಎಸ್ ಆರ್ ಗ್ರೂಪ್ಸ್ ತಂಡಕ್ಕೆ ಶುಭ ಹಾರೈಸುತ್ತೇನೆ. ಮಕ್ಕಳ ಕಲಿಕೆಗೆ ಸದಾ ಪ್ರಾಮುಖ್ಯತೆ ನೀಡುವ ಎಸ್ ಆರ್ ಗ್ರೂಪ್ಸ್ ಇಂದು ಅಂಗನವಾಡಿ ಪುಟಾಣಿ ಮಕ್ಕಳಿಗೆ ಸಮವಸ್ತ್ರ ವಿತರಣೆ ಮಾಡುವ ಮೂಲಕ ಸಮಾಜಕ್ಕೆ ಮತ್ತೊಂದು ಮಾದರಿ ಸಂದೇಶ ನೀಡಿದ್ದಾರೆ ಅವರ ಸಮಾಜ ಬಗ್ಗೆ ಕಾರ್ಯಗಳು ಹೀಗೆ ಮುನ್ನಡೆಯಲ್ಲಿ ಸಮಾಜಕ್ಕೆ ಮತ್ತಷ್ಟು ಉತ್ತಮ ಕಾರ್ಯಗಳು ಅವರಿಂದ ದೊರೆಯುವಂತಾಗಲಿ ಎಂದರು.

ಈ ವೇಳೆ ಎಸ್ ಆರ್ ಗ್ರೂಪ್ಸ್ ನ ಮಾಲೀಕರಾದ ಹೆಚ್. ಶಿವಕುಮಾರ್, ಡಾ: ಹೆಚ್ .ರಾಘವೇಂದ್ರ, ಉದ್ಯಾಮಿಗಳಾದ ಕಿರಣ್ ಶೆಟ್ಟಿಗಾರ್, ಅನ್ನ ದಾಸೋಹಿ ಮಲ್ಲೇಶ್, ವೆಂಕಟರಾಜು.ಆರ್, ಜಯಂತ್, ರಮೇಶ್ ಗೌಡ, ಚಂದ್ರಮ್ಮ( ಅಂಗನವಾಡಿ ಕಾರ್ಯಕರ್ತೆ),ಚೇತನ್ ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಣಿ ಎಲಿಜಬೆತ್ ಹೊಗಳಿದ್ದ ನಮ್ಮ ವಿಧಾನಸೌಧವೇ ನನಗೆ ಸ್ಫೂರ್ತಿ-ಟಿ.ಬಿ ಜಯಚಂದ್ರಕೆಪಿಸಿಸಿ ಅಧ್ಯಕ್ಷರ ಆಶೀರ್ವಾದ ಸಿಕ್ಕಿದೆ- ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸಣ್ಣಚಿತ್ತಯ್ಯ ಯುವ ಜನತೆಗೆ ಯೋಗ, ವ್ಯಾಯಾಮ ಅತ್ಯಂತ ಅವಶ್ಯ:ದಿವ್ಯ ಜ್ಞಾನಾನಂದ ಶ್ರೀಎಸ್. ನಾಗೇನಹಳ್ಳಿ ಎಂಪಿಸಿಎಸ್ ನೂತನ ಅಧ್ಯಕ್ಷರಾಗಿ ಮುನಿಕೃಷ್ಣಪ್ಪ ಆಯ್ಕೆಅಪಘಾತದಲ್ಲಿ ಮೃತಪಟ್ಟ ಕೋಳಿಗಳು 'ಜೀವಸಂಪತ್ತು': ವಿಮಾ ಪರಿಹಾರ ಎತ್ತಿಹಿಡಿದ ಹೈಕೋರ್ಟ್ಸವರ್ಣೀಯ ಮುಖಂಡರಿಂದ ದಲಿತ ಅಧಿಕಾರಿಗಳಿಗೆ ಕಿರುಕುಳ-ಮಾರಸಂದ್ರ ಮುನಿಯಪ್ಪಅಂಗನವಾಡಿ ಕೇಂದ್ರದ ಮಕ್ಕಳಿಗೆ ಸಮವಸ್ತ್ರ ವಿತರಣೆಮೈಸೂರಲ್ಲಿ  'ಜೋಡೆತ್ತು' ಚಿತ್ರದ ಅದ್ದೂರಿ ಕ್ಲೈಮ್ಯಾಕ್ಸ್ಬಿಡದಿ ಟೌನ್‌ಶಿಪ್ ರದ್ದತಿಗೆ ಆಗ್ರಹಿಸಿ ಹೋರಾಟ: ರೈತರ 2ನೇ ದಿನದ ಪಾದಯಾತ್ರೆಗೆ ದೇವೇಗೌಡರು ಭಾಗಿಹಾರುವ ಕಾರಿನ ಯಶಸ್ವಿ ಪರೀಕ್ಷೆ: ಭಾರತದ ಭವಿಷ್ಯದ ಸಂಚಾರ ವ್ಯವಸ್ಥೆಗೆ ಹೊಸ ಮೆರುಗು