Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬುದ್ದನಂತೆ ಚಿಂತಿಸಿದ ಅಲ್ಲಮ ಕೃತಿ ಬಿಡುಗಡೆ ಮಾಡಿದ ಸಂಶೋಧಕ ಡಾ.ರಾಜಶೇಖರಪ್ಪ

Advertisement
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಆಧ್ಯಾತ್ಮ ಲೋಕದ ನಕ್ಷತ್ರಗಳಂತಿದ್ದ ಬುದ್ದ
, ಅಲ್ಲಮ ಇವರುಗಳ ಪ್ರಭಾವ ಸಮಾಜದ ಮೇಲೆ ದಟ್ಟವಾಗಿ ಹಬ್ಬಿದೆ ಎಂದು ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ತಿಳಿಸಿದರು.

ಶರಣ ಸಾಹಿತ್ಯ ಪರಿಷತ್ತು ಚಿತ್ರದುರ್ಗ, ಬಾಪೂಜಿ ಸಮೂಹ ಶಿಕ್ಷಣ ಸಂಸ್ಥೆಗಳು, ಸಿವಿಜಿ. ಪಬ್ಲಿಕೇಷನ್ಸ್ ಇವರುಗಳ ಸಂಯುಕ್ತಾಶ್ರಯದಲ್ಲಿ ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಗುರುವಾರ ಪ್ರೊ.ಹೆಚ್.ಲಿಂಗಪ್ಪನವರ ಬುದ್ದನಂತೆ ಚಿಂತಿಸಿದ ಅಲ್ಲಮ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಪ್ರಖರ ವಿಚಾರವಾದಿ, ವೈಚಾರಿಕ ಶಿಖರವಾಗಿದ್ದ ಬುದ್ದನಿಗೆ ಬಹಳಷ್ಟು ಬ್ರಾಹ್ಮಣ ಶಿಷ್ಯಂದಿರಿದ್ದರು. ಹಾಗಾಗಿ ಉತ್ತರ ಭಾರತದಲ್ಲಿ ಬೌದ್ದ ಧರ್ಮ ಹರಡಲು ಸಾಧ್ಯವಾಯಿತು.

ರಾಜನಿಂದ ಹಿಡಿದು ಕಟ್ಟ ಕಡೆಯ ಜನಸಾಮಾನ್ಯರು ಬುದ್ದನ ನಿಲುವುಗಳನ್ನು ಅರ್ಥಮಾಡಿಕೊಂಡಿದ್ದರು. ಹನ್ನೆರಡನೆ ಶತಮಾನದ ಬಸವಣ್ಣನವರು ಅನಕ್ಷರಸ್ಥರನ್ನು ತೆಕ್ಕೆಗೆ ತೆಗೆದುಕೊಂಡಿದ್ದರು. ಅಲ್ಲಮ ಪ್ರಭುವಿನಲ್ಲಿ ಘನ ಚಿಂತನೆಯಿತ್ತು. ಬಸವಣ್ಣನ ಮೇಲೆ ಅಲ್ಲಮನ ಪ್ರಭಾವವಿದೆ. ಅಲ್ಲಮನಲ್ಲಿ ಸಂದಿಗ್ದತೆ, ಬೆಡಗಿನ ಭಾಷೆಯಿತ್ತು. ಹೊಸ ರೀತಿಯ ಚಿಂತನೆ ಅವರದಾಗಿತ್ತು ಎಂದು ಹೇಳಿದರು.

ಮುರುಘರಾಜೇಂದ್ರ ಮಠದ ಡಾ.ಬಸವಪ್ರಭು ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತ ನೆತ್ತಿಯ ಹಸಿವಿಗೆ ಜ್ಞಾನದ ಹಸಿವನ್ನು ತುಂಬಬೇಕಿದೆ. ಪ್ರತಿಯೊಂದನ್ನು ವಿಚಾರ, ವಿಮರ್ಶೆ, ತರ್ಕ ಮಾಡಿ ಪ್ರಶ್ನಿಸುವಂತ ಗುಣ ಬೆಳೆಸಿಕೊಳ್ಳುವಂತೆ ಅಲ್ಲಮ ಸಂದೇಶ ಕೊಟ್ಟಿದ್ದಾರೆ. ದೇವರನ್ನು ಬಿಡದೆ ಪ್ರಶ್ನಿಸಿದ ವಿಚಾರವಂತ ಅಲ್ಲಮ ದೇವರನ್ನು ಗುಂಡಿ ಗುಂಡಾರಗಳಲ್ಲಿ ಕಾಣಲಿಲ್ಲ. ಬದಲಿಗೆ ಮನಷ್ಯನಲ್ಲಿ ದೇವರನ್ನು ನೋಡಿದ. ಬಸವಣ್ಣ, ಬುದ್ದ, ಅಲ್ಲಮನಂತೆ ಎಲ್ಲರೂ ವೈಚಾರಿಕತೆಯನ್ನು ಬೆಳೆಸಿಕೊಳ್ಳೋಣ ಎಂದರು.

ಅನುವಾದಕ ಹಿರಿಯೂರಿನ ಪ್ರೊ.ಎಂ.ಜಿ.ರಂಗಸ್ವಾಮಿ ಮಾತನಾಡಿ ಕನ್ನಡವನ್ನು ಓದುವವರು, ಬರೆಯುವವರು ಕಡಿಮೆಯಾಗಿರುವುದರಿಂದ ಯುವ ತಲೆಮಾರುಗಳಿಗೆ ಕನ್ನಡವನ್ನು ಮುಟ್ಟಿಸುವ ಜವಾಬ್ದಾರಿ ಶಿಕ್ಷಕರುಗಳ ಮೇಲಿದೆ. ಹನ್ನೆರಡನೆ ಶತಮಾನದಲ್ಲಿ ರಚನೆಯಾಗಿರುವ ವಚನಗಳು ಇಂದಿನ ಸಮಾಜಕ್ಕೆ ಪ್ರಸ್ತುತ. ಭಾಷೆ, ರಾಜರುಗಳ ಹಾವಳಿ ಸೇರಿದಂತೆ ಕನ್ನಡ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಬುದ್ದ ರಾಜತ್ವವನ್ನು ತ್ಯಜಿಸಿ ಸರಳವಾಗಿ ಬದುಕಿ ತ್ಯಾಗಮಯಿಯಾದ. ಅಲ್ಲಮ ಎಲ್ಲವನ್ನು ಬಿಟ್ಟು ನಾಡಿಗೆ ಪ್ರಖರತೆ ಹಂಚಿದ. ಡಾ.ಬಿ.ಆರ್.ಅಂಬೇಡ್ಕರ್, ಗಾಂಧಿ ಇವರುಗಳು ಸರಳವಾಗಿ ಬದುಕಿದ್ದರಿಂದ ಇಂದಿಗೂ ಎಲ್ಲರ ಮನದಲ್ಲಿ ಉಳಿದಿದ್ದಾರೆ. ರಸ ಋಷಿ ಕುವೆಂಪು ಕೂಡ ಮನ್ವಂತರಕ್ಕೆ ಹೆಸರುವಾಸಿಯಾದವರು. ದಲಿತ ವಚನಕಾರರಲ್ಲಿ ಕಾಣಿಸಿಕೊಂಡಿರುವ ದಲಿತರ ಕುರಿತು ಪ್ರೊ.ಹೆಚ್.ಲಿಂಗಪ್ಪನವರು ಪುಸ್ತಕಗಳನ್ನು ಬರೆದಿದ್ದಾರೆ. ಇಳಿಯವಯಸ್ಸಿನಲ್ಲಿಯೂ ಸಾಹಿತ್ಯದ ಬಗ್ಗೆ ಅವರಿಗಿರುವ ಆಸಕ್ತಿ ದೊಡ್ಡದು ಎಂದು ಪ್ರಶಂಶಿಸಿದರು.

ಜಾನಪದ ತಜ್ಞ ಡಾ.ಮೀರಾಸಾಬಿಹಳ್ಳಿ ಶಿವಣ್ಣ ಮಾತನಾಡುತ್ತ ಪಂಪ, ರನ್ನ, ಕುಮಾರವ್ಯಾಸ ಇವರುಗಳೆಲ್ಲಾ ಜ್ಞಾನ ಪರಂಪರೆಯನ್ನು ಕಟ್ಟಿಕೊಟ್ಟವರು. ಚರಿತ್ರೆ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗಬೇಕಿದೆ. ಅಲ್ಲಮನ ದೊಡ್ಡ ಬೆರಗನ್ನು ಅರ್ಥೈಸಿಕೊಳ್ಳುವುದು ಸುಲಭದ ಕೆಲಸವಲ್ಲ. ಅಲ್ಲಮನ ಪ್ರತಿಭೆ ಎತ್ತರದ್ದು,ಅಲ್ಲಮನನ್ನು ಬಸವಣ್ಣ ಅನುಭವ ಮಂಟಪದ ಅಧ್ಯಕ್ಷನಾಗಿ ಮಾಡುತ್ತಾರೆ. ಅಲ್ಲಮನ ಜೊತೆ ಬುದ್ದನ ಬದುಕು ತಾಳೆಯಾಗುತ್ತದೆಂದು ನುಡಿದರು.

ಕೃತಿಕಾರ ಪ್ರೊ.ಹೆಚ್.ಲಿಂಗಪ್ಪ ಮಾತನಾಡಿ ಸಾಂಸ್ಕೃತಿಕ ನಾಡು ಚಿತ್ರದುರ್ಗದಲ್ಲಿ ಸಾಹಿತ್ಯದ ಕೆಲಸ ಮಾಡುತ್ತಿದ್ದೇನೆ. ೫೦ ವಚನಕಾರರ ಕೃತಿಗಳನ್ನು ಬರೆದಿದ್ದೇನೆ. ಬುದ್ದ ಬಸವ, ಅಲ್ಲಮ, ಅಂಬೇಡ್ಕರ್ ಇವರುಗಳು ಕರ್ಮಟ ವ್ಯವಸ್ಥೆಯನ್ನು ತಿರಸ್ಕರಿಸಿದವರು. ಜ್ಯೋತಿಬಾಪುಲೆ, ಸಾವಿತ್ರಿಬಾಯಿಪುಲೆ, ಡಾ.ಬಿ.ಆರ್.ಅಂಬೇಡ್ಕರ್ ಇವರುಗಳು ಓದಿ ಸಂವಿಧಾನ ರಚಿಸಲು ಇವರುಗಳ ಪ್ರಭಾವವಿದೆ ಎಂದರು.

ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ವೀರೇಶ್ ಅಧ್ಯಕ್ಷತೆ ವಹಿಸಿದ್ದರು. ಬಾಪೂಜಿ ಸಮೂಹ ಸಂಸ್ಥೆ ಬಿಇಡಿ. ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಆರ್.ಜಯಲಕ್ಷ್ಮಿ, ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ ಇವರುಗಳು ವೇದಿಕೆಯಲ್ಲಿದ್ದರು.

ಉಪ ಪ್ರಾಚಾರ್ಯ ಶಿವಕುಮಾರ್, ಉಪನ್ಯಾಸಕ ಹನುಮಂತರೆಡ್ಡಿ, ರೈತ ಮುಖಂಡ ದಯಾನಂದ್, ಕವಿ ರಾಜೇಂದ್ರಪ್ರಸಾದ್, ರಂಗಸ್ವಾಮಿ, ಕೆ.ಪಿ.ಎಂ.ಗಣೇಶಯ್ಯ, ಯಶೋಧಮ್ಮ ಡಾ.ಬಿ.ರಾಜಶೇಖರಪ್ಪ, ಪ್ರಶಿಕ್ಷಣಾರ್ಥಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು. ಸಂಗೀತ ಶಿಕ್ಷಕಿ ಜ್ಯೋತಿ ಪ್ರಾರ್ಥಿಸಿದರು. ಪ್ರಶಿಕ್ಷಣಾರ್ಥಿ ಮಲ್ಲಿಕಾರ್ಜುನಗೌಡ ಸ್ವಾಗತಿಸಿದರು. ದೀಪ ನಿರೂಪಿಸಿದರು.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ