Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಸವ ಜಯಂತಿಯ ಅಂಗವಾಗಿ ಪ್ರಬಂಧ ಸ್ಪರ್ಧೆ

Advertisement
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಸಮಾಜ ಸುಧಾರಕ ಮಹಾಮಾನವತಾವಾದಿ ಬಸವಣ್ಣನವರ ಜಯಂತಿಯ ಹಿನ್ನೆಲೆಯಲ್ಲಿ ಅವರ ವಿಚಾರಧಾರೆಗಳನ್ನು ಈಗಿನ ಪೀಳಿಗೆ ಅಧ್ಯಯನ ಮಾಡುವ ಮತ್ತು ಆ ಅಧ್ಯಯನ ಜ್ಞಾನವು ಸದಾ ಮನಸ್ಸಿನಲ್ಲಿರಲಿ ಎನ್ನುವ ಕಾರಣದಿಂದ ಮಾಧ್ಯಮಿಕ ಹಂತದಿಂದ ಸ್ನಾತಕೋತ್ತರ ತರಗತಿಗಳವರೆಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.


ಸ್ಪರ್ಧೆ ಹಾಗೂ ವಿವರ : ೧) ಮಾಧ್ಯಮಿಕ ತರಗತಿಗಳ ವಿದ್ಯಾರ್ಥಿಗಳಿಗೆ - ವಿಷಯ:  ವಿಶ್ವಗುರು ಬಸವಣ್ಣ ನನಗೇಕೆ ಇಷ್ಟ, ೨) ಪ್ರೌಢಶಾಲಾ ವಿದ್ಯಾರ್ಥಿಗಳಿಗೆ - ವಿಷಯ:  ಬಸವಣ್ಣನವರ ಮೌಢ್ಯ ವಿರೋಧಿನಿಲುವು, ೩) ಪಿಯುಸಿ, ಐಟಿಐ, ಡಿಪ್ಲೊಮಾ, ಡಿ.ಎಡ್. ಇತರ ತರಗತಿಗಳವರಿಗೆ - ವಿಷಯ: ಬಸವಣ್ಣನವರ ಸಮ ಸಮಾಜ, ೪) ಪದವಿ ಹಾಗೂ ಸಮಾನಾಂತರ ತರಗತಿಗಳ ವಿದ್ಯಾರ್ಥಿಗಳಿಗೆ - ವಿಷಯ: ಸಮಕಾಲೀನ ಶರಣರು ಕಂಡ ಬಸವಣ್ಣ, ೫) ಸ್ನಾತಕೋತ್ತರ ತರಗತಿಗಳವರಿಗೆ - ವಿಷಯ: ಬಸವಣ್ಣನವರ ಚಿಂತನೆಗಳಲ್ಲಿ ಭಾರತೀಯ ಸಂವಿಧಾನ. ಪ್ರಬಂಧ ಬರೆಯುವವರು ಸಂಬಂಧಿಸಿದ ವಚನಗಳನ್ನು ಉಲ್ಲೇಖಿಸಬಹುದಾಗಿದೆ.

ಸ್ಪರ್ಧೆ ನಿಯಮಗಳು:- * ಪ್ರಬಂಧವು ಕನ್ನಡದಲ್ಲಿರಬೇಕು ಮತ್ತು ವಿಷಯಾಂತರವಾಗಿರಬಾರದು, * ಪ್ರಬಂಧವು ಸ್ವಂತ ರಚನೆಯಾಗಿರಬೇಕು. ಇತರರ ಬರಹದ ನಕಲು ಆಗಿರಬಾರದು ಬೇರೆಯವರ ಅಭಿಪ್ರಾಯ ಉಲ್ಲೇಖಿಸಿದಲ್ಲಿ ಆ ವ್ಯಕ್ತಿಗಳ ಉಲ್ಲೇಖವಿರಬೇಕು. * ಪ್ರಬಂಧವು ೧೦೦೦ (ಸಾವಿರ) ಪದಗಳಿಗೆ ಮೀರಿರಬಾರದು ಮತ್ತು ಎ೪ ಗಾತ್ರದ ಬಿಳಿ ಹಾಳೆ ಬಳಸಿರಬೇಕು. *      

ಅಕ್ಷರಗಳು ಸ್ಪಷ್ಟವಾಗಿ, ಅಂದವಾಗಿ, ವ್ಯಾಕರಣ ದೋಷವಿಲ್ಲದ ಹಾಗೂ ವಸ್ತುಷ್ಠ ಅಂದವಾದ ಬರವಣಿಗೆಗೆ ವಿಶೇಷ ಆದ್ಯತೆ ನೀಡಲಾಗುತ್ತದೆ. ನೀಲಿ ಅಥವಾ ಕಪ್ಪು ಶಾಯಿಯಲ್ಲಿರಬೇಕು. * ಪ್ರಬಂಧದೊಂದಿಗೆ ಸ್ಪಷ್ಟ ಅಧಿಕೃತ ವಿಳಾಸ ದೂರವಾಣಿ ಸಂಖ್ಯೆ, ಶಾಲಾ ಕಾಲೇಜುಗಳ ವಿವರಗಳನ್ನು ಲಗತ್ತಿಸಿರಬೇಕು.

* ನಿಗದಿತ ಅಂತಿಮ ದಿನಾಂಕದೊಳಗೆ ಪ್ರಬಂಧವನ್ನು ಸಲ್ಲಿಸಬೇಕು ಹಾಗೂ ಲೇಖನದ ಒಂದು ಪ್ರತಿಯನ್ನು ಕಾಯ್ದಿರಿಸಿಕೊಳ್ಳುವುದು. * ತಡವಾಗಿ ಬಂದ ಲೇಖನಗಳನ್ನು ಪರಿಗಣಿಸಲಾಗುವುದಿಲ್ಲ. * ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. * ಪ್ರಬಂಧ ತಲುಪಲು ಕಡೆಯ ದಿನಾಂಕ ೧೨-೪-೨೦೨೬ ಆಗಿರುತ್ತದೆ. *  ಆಯ್ಕೆಯಾದವರಿಗೆ ಸೂಕ್ತ ನಗದು ಬಹುಮಾನ ಹಾಗೂ ಪ್ರಮಾಣಪತ್ರ ನೀಡಲಾಗುವುದು.

* ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿಪತ್ರ ನೀಡಲಾಗುವುದು. * ಆಸಕ್ತರು ಯಾರೇ ಆದರೂ ಮೇಲ್ಕಾಣಿಸಿದ ವಿಷಯ ಹಾಗೂ ವಯೋಮಾನಾನುಸಾರವಾಗಿ ಪ್ರಬಂಧ ಬರೆದು ಸಂಯೋಜಕರು, ಬಸವ ಜಯಂತಿ ಪ್ರಬಂಧ ಸ್ಪರ್ಧೆವಿಭಾಗ, ಶ್ರೀಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ, ಎಂ.ಕೆ.ಹಟ್ಟಿ-ಅಂಚೆ, ಚಿತ್ರದುರ್ಗ- ೫೭೭೫೦೨  ಈ ವಿಳಾಸಕ್ಕೆ ಸ್ಪೀಡ್ ಪೋಸ್ಟ್ ಅಥವಾ ಕೋರಿಯರ್ ಮೂಲಕ ಪ್ರಬಂಧಗಳನ್ನು ಕಳುಹಿಸುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ೯೪೪೮೬೬೪೯೩೨ ಸಂಪರ್ಕಿಸಲು ಶ್ರೀಮಠದ ಪ್ರಕಟಣೆ ಕೋರಿದೆ.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ